Home ಜಿಲ್ಲೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ತರಬೇತಿ ಕಾರ್ಯಕ್ರಮಕ್ಕೆ ಚಾಲನೆ


ಧಾರವಾಡ, ಸೆ.೮: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಪ್ರಾಯೋಜಿಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರ ಸಹಯೋಗದಲ್ಲಿ ೩೦ ದಿನಗಳ ಬ್ಯೂಟಿಶಿಯನ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಕಾರ್ಯಕ್ರಮವನ್ನು ಅಶೋಕ ಎಸ್. ನ್ಯಾಮಗೌಡ ಅವರು ಉದ್ಘಾಟಿಸಿದರು. ಅವರು ಉದ್ಯಮಶೀಲತೆಯ ಮಹತ್ವ, ಸ್ವಯಂ ಉದ್ಯೋಗದ ಅವಕಾಶಗಳು ಹಾಗೂ ತರಬೇತಿಯ ಮೂಲಕ ಅಭ್ಯರ್ಥಿಗಳು ಸ್ವಾವಲಂಬಿಗಳಾಗುವ ಕುರಿತು ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಸಿ.ಎಂ. ಚನ್ನಬಸನಗೌಡ ಹಾಗೂ ಬ್ಯಾಂಕ್ ಆಫ್ ಬರೋಡಾದ ಜಿಲ್ಲಾ ಅಗ್ರಣೀಯ ವ್ಯವಸ್ಥಾಪಕ ಬಸವರಾಜ ಗಡದವರ ಅವರು ಭಾಗವಹಿಸಿದ್ದರು. ಇವರು ಉದ್ಯಮ ಆರಂಭಿಸುವ ವಿಧಾನ, ಉದ್ಯಮ ನಿರ್ವಹಣೆ, ಮಾರುಕಟ್ಟೆ ವ್ಯವಸ್ಥೆ, ಹಣಕಾಸು ನಿರ್ವಹಣೆ, ಬ್ಯಾಂಕ್ ನಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಸಿಡಾಕ್‌ನ ಜಂಟಿ ನಿರ್ದೇಶಕರಾದ ಚಂದ್ರಶೇಖರ ಅಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ೩೦ ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳಿಗೆ ಕಲಿಸಲಾಗುವ ವಿ?Àಯಗಳ ಬಗ್ಗೆ ಹಾಗೂ ಉದ್ಯಮಶೀಲತಾ ಕೌಶಲ್ಯಗಳ ಕುರಿತು ತರಬೇತಿ ಮತ್ತು ಮಾರ್ಗದರ್ಶನ ನೀಡಿದರು.


ಯಶಸ್ವಿ ಉದ್ಯಮಿಯಾಗಿರುವ ಶೀಲಾ ಬನ್ನಾ ಅವರು ಮಾತನಾಡಿ, ತಮ್ಮ ಉದ್ಯಮಶೀಲತಾ ಅನುಭವ ಹಾಗೂ ಯಶೋಗಾಥೆಯನ್ನು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳೊಂದಿಗೆ ಹಂಚಿಕೊAಡರು.
ಸಿಡಾಕ್ ಸಂಸ್ಥೆಯ ತರಬೇತುದಾರರಾದ ರೋಹಿಣಿ ಘಂಟಿ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಒಟ್ಟು ೩೦ ಅಭ್ಯರ್ಥಿಗಳು ಭಾಗವಹಿಸಿ, ತರಬೇತಿಯ ಲಾಭವನ್ನು ಪಡೆಯುತ್ತಿದ್ದಾರೆ.