Home ಜಿಲ್ಲೆ ಧಾರವಾಕಾರ ಮಳೆ

ಧಾರವಾಕಾರ ಮಳೆ


ನವಲಗುಂದ,ಅ.೧೮: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧಡೆ ಶನಿವಾರ ಧಾರಾಕಾರ ಮಳೆ ಸುರಿಯಿತು. ಸೆಖೆಯಿಂದ ಬಳಲುತ್ತಿದ್ದ ಜನರು, ಸಂಜೆ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟರು.
ಸಂಜೆ ೭ ಗಂಟೆ ನಂತರ ಗುಡುಗು ಸಿಡಿಲು ಸಹಿತ ಮಳೆ ಸುರಿಯಿತು. ರಸ್ತೆಗಳಲ್ಲಿ ಮಳೆನೀರು ಹರಿದಿದ್ದರಿಂದ ವಾಹನ ಸವಾರರು ಸಮಸ್ಯೆ ಎದುರಿಸಿದರು.
ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಸ್ಥರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳ ತಾಡಪತ್ರಿಗಳು ಗಾಳಿಯ ರಭಸಕ್ಕೆ ಹಾರಾಡಿದವು. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬಂದಿದ್ದ ಸಾರ್ವಜನಿಕರು ತಮ್ಮೂರಿಗೆ ಮಳೆಯಲ್ಲಿಯೇ ಬಸ್‌ನಲ್ಲಿ ತೆರಳಿದರು.


ಉಪ್ಪಿನಬೆಟಗೇರಿ ವರದಿ: ಉಪ್ಪಿನಬೆಟಗೇರಿ, ಗರಗ, ಕೋಟೂರ,ತಡಕೋಡ, ಅಮ್ಮಿನಬಾವಿ, ಹೆಬ್ಬಳ್ಳಿ ಹಾರೋಬೆಳವಡಿ ಗ್ರಾಮಗಳ ಸುತ್ತಲಿನ ಭಾಗದಲ್ಲಿ ಶನಿವಾರ ಸಾಧಾರಣ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತವರಣವಿ-ತ್ತು.ಕೆಲವೆಡೆ ಬೆಳಿಗ್ಗೆ, ಇನ್ನು ಕೆಲವೆಡೆ ಮಧ್ಯಾಹ್ನ ಮಿಂಚು, ಗುಡುಗು ಸಹಿತ ಕೆಲಹೊತ್ತು ಮಳೆಯಾಯಿತು. ಭೂಮಿಯನ್ನು ತಂಪಾಗಿಸಿತು. ಸಂತೆಗೆ ಬಂದಿದ್ದ ಜನರು ಮನೆ, ಅಂಗಡಿಗಳಲ್ಲಿ ಆಶ್ರಯ ಪಡೆದರು.