
ಕಲಬುರಗಿ,ಜು.16-ಬೈಕ್‍ಗೆ ಟಿಪ್ಪರ್ ಡಿಕ್ಕಿ ಹೊಡೆದು ಬಿ.ಇ.ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಮಲಾಪುರ ಟೈರ್ ಫ್ಯಾಕ್ಟರಿ ಹತ್ತಿರ ಬುಧವಾರ ಸಾಯಂಕಾಲ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಖಮರ್ ಕಾಲೋನಿಯ ಮೊಹಮ್ಮದ್ ಅಹಮದ್ (20) ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಅಹಮದ್ ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಇ.2ನೇ ವರ್ಷದಲ್ಲಿ ಓದುತ್ತಿದ್ದ. ಗೆಳೆಯರೊಂದಿಗೆ ಕಮಲಾಪುರಕ್ಕೆ ಹೋಗಿ ಕ್ರಿಕೆಟ್ ಆಡಿ ಬರವುದಾಗಿ ಹೇಳಿ ಕಲಬುರಗಿಯಿಂದ ಕಮಲಾಪುರಕ್ಕೆ ಬೈಕ್ ಮೇಲೆ ಹೋಗುತ್ತಿದ್ದಾಗ ಕಮಲಾಪುರದ ಟೈರ್ ಫ್ಯಾಕ್ಟರಿ ಹತ್ತಿರ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























