
ಬಾದಾಮಿ ಮತಕ್ಷೇತ್ರದ ನೀರಲಗಿ ಮತಗಟ್ಟೆ ಸಂಖ್ಯೆ:೨೨೬ ಮತಗಟ್ಟೆ ಅಧಿಕಾರಿ ವೈ.ವೈ.ಮಾದರ ಇವರು ಎಸ್.ಐ.ಆರ್.ನೂರಕ್ಕೆ ನೂರರಷ್ಟು ಪೂರ್ಣಗೊಳಿಸಿದ ಪ್ರಯುಕ್ತ ತಾಲೂಕಾಡಳಿತದ ವತಿಯಿಂದ ತಹಶೀಲದಾರ ಕಚೇರಿಯಲ್ಲಿ ಬಾಗಲಕೋಟೆ ಉಪವಿಭಾಗಾಧಿಕಾರಿ ಮಹೇಆ ಮಾಲಗಿತ್ತಿ, ತಹಶೀಲದಾರ ಎಸ್.ಎಫ್.ಬೊಮ್ಮನ್ನವರ ಸನ್ಮಾನಿಸಿದರು. ಶಿರಸ್ತೆದಾರ ಗಿರೀಶ, ಕಂದಾಯ ನಿರೀಕ್ಷಕ ಎಚ್.ಎಲ್.ಚೌಧರಿ ಸೇರಿದಂತೆ ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರ್ ರವರು ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.

































