ಕಲಬುರಗಿ: ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಘೋಷಿಸಲು ಮತ್ತು ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸುವ ಹೋರಾಟ ಕುರಿತು ಚರ್ಚೆ ನಡೆಸಲು ಪೂರ್ವಭಾವಿ ಸಭೆ ಶಿವಕಾಂತ ಮಹಾಜನ ಕಾರ್ಯಾಲಯದಲ್ಲಿ
ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಉಮಾಪತಿ ಪಾಟೀಲ ,ಆದಿನಾಥ ಹೀರಾ,ಭೀಮಶೆಟ್ಟಿ ಮುಕ್ಕಾ,ಶಿವಕುಮಾರ ಪಾಟೀಲ,ಶಿವರಾಜ ಬಿರಾದಾರ ಬನ್ನೂರ,ಶಿವಲಿಂಗಪ್ಪ ಟೆಂಗಳಿ, ಅವರು ಸೇರಿದಂತೆ ಹಲವಾರು ರೈತ ಮುಖಂಡರು ಭಾಗಿಯಾದರು.