Home ಜಿಲ್ಲೆ ಕಲಬುರಗಿ ಜಾನುವಾರು ಕಳವು; ಐವರ ಬಂಧನ

ಜಾನುವಾರು ಕಳವು; ಐವರ ಬಂಧನ

ಕಲಬುರಗಿ,ಜು.16-ಆಳಂದ, ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಮತ್ತು ಅಫಜಲಪುರದಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ಡಿಎಸ್‍ಪಿ ತಮ್ಮರಾಯ ಪಾಟೀಲ ನೇತೃತ್ವದ ಸಿಪಿಐ ಲಖನ್ ಮಸಗುತ್ತಿ, ರೇವೂರ ಪ್ರಭಾರ ಪಿಎಸ್‍ಐ ವಾತ್ಸಲ್ಯ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ಐವರನ್ನು ಬಂಧಿಸಿ ಜಾನುವಾರು ಸೇರಿದಂತೆ 9.15 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾದಲ್ಲಿ 2 ಕಿಲಾರಿ ಹೋರಿ, ಇಂಉದು ಆಕಳು, ಆಳಂದನಲ್ಲಿ ನಡೆದ 2 ಕಿಲಾರಿ ಹೋರಿ, 2 ಆಕಳು ಮತ್ತು ಅಫಜಲಪುರದಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಖಾಜಪ್ಪ ತುಳಸಿರಾಮ ಮೂಕನೂರ (38), ರಮೇಶ ಜಗನ್ನಾಥ ಗುರಾಣಪೂರೆ (27), ಮಹೆಬೂಬ್ ವಾಹಿದ್ ಅಲಿ ದೊಡ್ಡೇನವರ್ (27), ಮಲ್ಲಿಕಾರ್ಜುನ ಅಲಿಯಾಸ್ ಸಂಜು ತಳವಾರ ಮತ್ತು ಶಿವಶರಣ ಅಲಿಯಾಸ್ ಶಶಿಕುಮಾರ ಎಂಬುವವರನ್ನು ಬಂಧಿಸಿ 9.15 ಲಕ್ಷ ರೂ.ಮೊತ್ತದ ಸ್ವತ್ತನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡದ ಕಾರ್ಯವನ್ನು ಅವರು ಶ್ಲಾಘಿಸಿದರು.