
ಲಂಡನ್, ಜು.13-ಕ್ರಿಕೆಟ್ ಕಾಶಿ ಲಾರ್ಡ್ ್ಸ ಅಂಗಳದಲ್ಲಿ ಭಾರತೀಯ ವನಿತೆಯರ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟಗ ಪಂದ್ಯದಲ್ಲಿ ಹರ್ಮನ್ ಪ್ರೀರ್ ಕೌರ್ ಪಡೆ 270 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
142 ವರ್ಷಗಳ ಇತಿಹಾಸ ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣ ಮೊದಲ ಬಾರಿಗೆ ಮಹಿಳಾ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಯಿತು.
ಒಂದೆಡೆ ಪುರುಷರ ತಂಡ ಟಿ.20 ಕ್ರಿಕೆಟ್ ನಲ್ಲಿ ಸರಣಿ ಸೋತು ಮುಖಭಂಗ ಅನುಭವಿಸಿದರೆ, ವನಿತೆಯರ ತಂಡ ಅಭೂತಪೂರ್ವ ಗೆಲುವು ಸಾಧಿಸಿದೆ.
ಇಂದು ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 6 ವಿಕೆಟ್‌ಗೆ 130 ರನ್‌ಗಳಿಂದ ಆಟ ಮುಂದುವರಿಸಿತು. ಆಮಿ ಜೋನ್ಸ್ ನಾಲ್ಕನೇ ದಿನದಾಟದಲ್ಲಿ ಕೇವಲ 2 ರನ್ ಸೇರಿಸಿ 54 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ್ತಿ ಸೋಫಿ ಎಕ್ಲೆಸ್ಟೋನ್ 66 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 50 ರನ್ ಬಾರಿಸಿ ಔಟ್ ಆದರು. ಉಳಿದಂತೆ ಕೆಳ ಕ್ರಮಾಂಕದಲ್ಲಿ ಆಟಗಾರ್ತಿಯರು ಭಾರತದ ಬೌಲಿಂಗ್ ಗೆ ದಿಟ್ಟ ಉತ್ತರ ನೀಡಲು ವಿಫಲರಾದರು.
ಅಂತಿಮವಾಗಿ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 62.5 ಓವರ್‌ಗಳಲ್ಲಿ 186 ರನ್‌ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಪರ ಸ್ನೇಹಾ ರಾಣಾ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ 42 ರನ್ ನೀಡಿ 4 ವಿಕೆಟ್ ಕಬಳಿಸಿದರು. ಉಳಿದಂತೆ ಕ್ರಾಂತಿ ಗೌಡ, ಸಯಾಲಿ ಸತ್ಘರೆ ತಲಾ 2 ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 285 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಸ್ಮೃತಿ 83, ಹರ್ಮನ್‌ಪ್ರೀತ್ ಕೌರ್ 58, ದೀಪ್ತಿ ಶರ್ಮಾ 57 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 170 ರನ್‌ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ನ್ಯಾಟ್ ಸ್ಕೀವರ್-ಬ್ರಂಟ್ 44 ಹಾಗೂ ಆಮಿ ಜೋನ್ಸ್ 52 ರನ್ ಸಿಡಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ್ತಿ 70 ರನ್ ಬಾರಿಸಿದರೆ, ಯಾಸ್ತಿಕಾ ಭಾಟಿಯಾ 113 ರನ್ ಬಾರಿಸಿದರು. ಪರಿಣಾಮ ಭಾರತ 341 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಬ್ಯಾಟರ್‌ಗಳು ಎರಡನೇ ಇನಿಂಗ್ಸ್ ಜವಾಬ್ದಾರಿ ಮರೆತಿದ್ದರಿಂದ ಸೋಲು ಕಂಡಿತು.
ಸ್ಕೋರ್ ವಿವರ
ಮೊದಲ ಇನ್ನಿಂಗ್ಸ್
ಭಾರತ – 282/10, ಇಂಗ್ಲೆಂಡ್ – 170/10
2ನೇ ಇನ್ನಿಂಗ್ಸ್
ಭಾರತ – 341/7 ಡಿಕ್ಲೇರ್, ಇಂಗ್ಲೆಂಡ್ –186/10
































