
ಕಲಬುರಗಿ: ನಗರದ ಕೆಬಿಎನ್ ವಿಶ್ವವಿದ್ಯಾಲಯದ ಶಿಕ್ಷಣ ನಿಕಾ ಯದಲ್ಲಿ ಬಿ ಎಡ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಡಾ ನಿಶಾತ ಆರಿಫ್ ಹುಸ್ಸೇನಿ, ಡೀನ ಭಾಷಾ ನಿಕಾಯ ಇವರು ಖಾಜಾ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳಿಗೆ ಕಠಿಣ ಶ್ರಮದ ಮತ್ತು ಸಮಯದ ಮಹತ್ವದಿಂದ ಗುರಿ ಮತ್ತು ಭವಿಷ್ಯವನ್ನು ನಿರ್ಮಿಸಿಕೊಳ್ಳುವ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು.
ಇನ್ನೋರ್ವ್ ಅತಿಥಿಯಾಗಿ ಆಗಿಸಿದ್ದ ಡಾ. ಶ್ರೀನಿವಾಸ, ಡೀನ್ ವಾಣಿಜ್ಯ ನಿಕಾಯ್ ಇವರು ವಿದ್ಯಾರ್ಥಿಗಳಿಗೆ ಸ್ಪಷ್ಟ ಗುರಿಯೊಂದಿಗೆ ಅಧ್ಯಯನ ಮಾಡುವಂತೆ ಕಿವಿ ಮಾತು ಹೇಳಿದರು. ಡಾ. ಇಕ್ಬಲ್ ಮಟ್ಟು, ಡೀನ ಶಿಕ್ಷಣ ನಿಕಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿಯರದ ಅಜರಾ ಅಂಜು ಹಾಗೂ ಸನಾ ಅಂರೀನ ಪ್ರಾರ್ಥಿಸಿದರೆ, ಸಯ್ಯದಾ ಆಯೇಷಾ ಮುಸ್ಕಾನ ಸ್ವಾಗತಿಸಿದರು. ಸಯ್ಯದಾ ಆಯೇಷಾ ರೂಹಿ ಮತ್ತು ಮುಸ್ಕಾನ ನಿರೂಪಿಸಿದರು. ಡಾ ಸಾಲಿಹಾ ಖಾತುನ ಮತ್ತು ಡಾ ಕುದ್ರತ್ ಉಣ್ಣಿಸಾ ಶೇಕ ವಂದಿಸುದರು.
ಕ್ಯಾಲೀಕತ ವಿಶ್ವ ವಿದ್ಯಾಲಯದ ಡಾ. ಅಬ್ದುಲ್ ಗಫುರ ಹಾಗೂ ರಿಷಿಹುಡ್ ವಿಶ್ವ ವಿದ್ಯಾಲಯದ ಪೆÇ್ರ ರೆವಾ ಪರಿಮೋ ಸಂಪಂನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಉಪನ್ಯಾಸಕರಾದ ಡಾ ವಡ್ಡನಕೇರಿ, ರಿಯಾಜ ಪಠಾಣ, ಮೆಹಂಬುಬ ಸಿ, ಫಾತಿಮಾ ಬೇಗಂ, ರಝಿಯಾ ಪರ್ವೀನ್ ಸೇರಿದಂತೆ ನಿಕಾಯದ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.





























