ಕಲಬುರಗಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಆಕ್ರಮ ಖಂಡಿಸಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರು, ನವದೆಹಲಿಯಲ್ಲಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ಅವರ ಹೋರಾಟವನ್ನು ಬೆಂಬಲಿಸಿ ನಗರದ ಜಗತ್ ವೃತ್ತದಲ್ಲಿ ಸೌಹಾರ್ದ ಕರ್ನಾಟಕ ಕಲಬುರಗಿ ಸಂಘಟನೆಯ ನೆತೃತ್ವದಲ್ಲಿ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು. ಡಾ.ಮೀನಾಕ್ಷಿ ಬಾಳಿ, ಮಾರುತಿ ಗೋಖಲೆ, ಬಬ್ಬರ ಕಮಕನೂರ, ವಿಶ್ವನಾಥ ಮಂಗಲಗಿ, ಆರ್.ಜಿ.ಶಟಗಾರ, ನಾಗೇಂದ್ರ ಮಾಡ್ಯಾಳ, ಶಾಂತಪ್ಪ ಪಾಟೀಲ, ಅಬ್ದುಲ ಖಾದರ್, ಮಲ್ಲಿಕಾರ್ಜುನ ಗೋಳಾ, ಎ.ಜೋಳದ ಕೊಡ್ಲಿಗಿ ಸೇರಿದಂತೆ ಹಲವರು ಸತ್ಯಗ್ರಾಹ ಕೈಗೊಂಡರು.