Home ಜಿಲ್ಲೆ ಬೆಂಗಳೂರು ಗೃಹಲಕ್ಷ್ಮಿ ಯೋಜನೆಗ ಮೂರು ವರ್ಷ- ಕಡ್ಡಾಯ ಸಸಿ ನೆಡುವ ಕಾರ್ಯಕ್ರಮ

ಗೃಹಲಕ್ಷ್ಮಿ ಯೋಜನೆಗ ಮೂರು ವರ್ಷ- ಕಡ್ಡಾಯ ಸಸಿ ನೆಡುವ ಕಾರ್ಯಕ್ರಮ

ಕೋಲಾರ: ಜು,೨೯-ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಮೂರು ವರ್ಷ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ದೊಂದಿಗ ಸಂಭ್ರಮಾಚರಣಯನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ ಸೂಚಿಸಿದರು.


ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಗೃಹಲಕ್ಷ್ಮಿ ಯೋಜನೆ ೨೦೨೬ರ ಜುಲೈ ೧೯ಕ್ಕ ಮೂರು ವರ್ಷ ಪೂರಸಿರುವ ಹಿನ್ನಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶಾಲಾ ಆವರಣಗಳು ಹಾಗೂ ಇತರ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗ ಯೋಜನೆಯ ಫಲಾನುಭವಿ ಮಹಿಳಯರ ಕೈಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಬೇಕು. ನೆಟ್ಟ ಸಸಿಗಳ ಸಂರಕ್ಷಣ ಮತ್ತು ಪೋಷಣಗ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗ ಸೂಚನೆ ನೀಡಿದರು


ಗೃಹಜ್ಯೋತಿ ಯೋಜನೆಯ ಪರಿಷ್ಕರಣ ಕಾರ್ಯ ಪ್ರಗತಿಯಲ್ಲಿದ್ದು, ಮನೆಗಳಿಗ ಭೇಟಿ ನೀಡುವ ಮೀಟರ್ ರೀಡರ್‌ಗಳಿಗ ಸಾರ್ವಜನಿಕರು ಸಹಕರಿಸಬೇಕು. ಪರಿಷ್ಕರಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು.


ಆಹಾರ ಪಡಿತರ ಅಂಗಡಿಗಳು ಕಡ್ಡಾಯವಾಗಿ ಬಳಗ್ಗೆ ೬ ಗಂಟೆಯಿಂದ ರಾತ್ರಿ ೧೦ ಗಂಟೆಯವರಗ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಕೂಲಿ ಕಾರ್ಮಿಕರಿಗ ಯಾವುದೇ ತೊಂದರ ಆಗದಂತೆ ಕ್ರಮವಹಿಸಬೇಕು. ಅಲ್ಲದೆ, ಕೆಎಸ್‌ಆರ್‌ಟಿಸಿ ವತಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಾರ್ವಜನಿಕರಿಗ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.


ಸಭಯಲ್ಲಿ ತಾಪಂ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಪ್ರಸಾದ್, ಇಎಸ್ಟಿ ವಿಷಯ ನಿರ್ವಾಹಕ ಕರಿಬಸಪ್ಪ, ಸಮಿತಿ ಸದಸ್ಯರಾದ ನವೀನ್, ಶ್ರೀನಿವಾಸರಡ್ಡಿ, ಬಿ.ಆರ್. ಬಾಬು, ನದಂಬಳ್ಳಿ ವಿಜಯಕುಮಾರ್, ಅಯೂಬ್ ಖಾನ್, ಯೂನಿಸ್ ಖಾನ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.