
ಲಕ್ಷೆ÷್ಮÃಶ್ವರ,ಜು೧೬: ಪಟ್ಟಣದಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ನಡೆದಿದ್ದ ಎರಡು ಅಂಗಡಿ ಒಂದು ಮನೆ ಕಳತನ ಮತ್ತೊಂದು ನಕಲಿ ಬಂಗಾರ ನೀಡಿ ನಂಬಿಸಿ ವಂಚನೆ ಮಾಡಿದ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು ಕೊನೆಗೂ ಕಳ್ಳರ ಹೆಡೆಮುರಿ ಕಟ್ಟಿ ಬಂಧಿಸಿ ಅವರಿಂದ ೧೭೦ ಗ್ರಾಂ ಬೆಳ್ಳಿ ಆಭರಣಗಳು ಸೇರಿದಂತೆ ನಗದು ೩.೯೦ ಲಕ್ಷ ರೂ ಒಟ್ಟು ೪.೧೮ ಸಾವಿರ ರೂ. ಜಪ್ತಿ ಮಾಡಿದ್ದಾರೆ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಡಿಎಸ್ಪಿ ಮುರ್ತಜಾ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿವಿ ನ್ಯಾಮಗೌಡ ಪಿಎಸ್‌ಐಗಳಾದ ನಾಗರಾಜ್ ಗಡಾದ ಟಿಕೆ ರಾಠೋಡ್ ಅವರಗೋಳ ನೇತ್ರತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ನಾಲ್ಕು ಪ್ರಕರಣಗಳನ್ನು ಬೆನ್ನತ್ತಿದ್ದ ಪೊಲೀಸರು ಆಂಧ್ರ ಮೂಲದ ಇಬ್ಬರು ಮತ್ತು ಲಕ್ಷೆ÷್ಮÃಶ್ವರ ಓರ್ವ ವ್ಯಕ್ತಿ ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





























