Home ಜಿಲ್ಲೆ ಕಲಬುರಗಿ ಪರಿಸರ ಸಂರಕ್ಷಣೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಅಗತ್ಯ

ಪರಿಸರ ಸಂರಕ್ಷಣೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಅಗತ್ಯ

ಕಲಬುರಗಿ : ಪರಿಸರವನ್ನು ಕಾಪಾಡಲು, ಇಂಧನ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಶಬ್ದ ಮಾಲಿನ್ಯವನ್ನು ತಡೆದು ಪರಿಸರ ಸಂರಕ್ಷಣೆ ಮಾಡಲು ಎಲೆಕ್ಟ್ರಿಕ್ ವಾಹನಗಳ ಬಳಕೆ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ವಿಶ್ವ ಎಲೆಕ್ಟ್ರಿಕ್ ವಾಹನಗಳ ದಿನಾಚರಣೆ”ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಹೊಗೆಯನ್ನು ಬಿಡುತ್ತವೆ. ಇದು ಗಾಳಿಯನ್ನು ಹಾಳು ಮಾಡುತ್ತದೆ. ಎಲೆಕ್ಟ್ರಿಕ್ ವಾಹನಗಳು ಯಾವುದೇ ಹಾನಿಕಾರಕ ಹೊಗೆಯನ್ನು ಬಿಡುವುದಿಲ್ಲ. ಇದು ಶುದ್ಧ ಗಾಳಿಯನ್ನು ನೀಡುತ್ತದೆ.ಜಾಗತಿಕ ತಾಪಮಾನವನ್ನು ತಡೆಯಲು ಇವು ಸಹಾಯ ಮಾಡುತ್ತವೆ. ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿದ್ಯುತ್ ಮೂಲಕ ವಾಹನ ಚಾರ್ಜ್ ಮಾಡುವುದು ತುಂಬಾ ಅಗ್ಗ, ಚಾಲನಾ ವೆಚ್ಚ ಪೆಟ್ರೋಲ್ ವಾಹನಗಳಿಗಿಂತ ಶೇಕಡಾ 70 ರಷ್ಟು ಕಡಿಮೆಯಿರುತ್ತದೆ ಎಂದರು. ಎಲೆಕ್ಟ್ರಿಕ್ ವಾಹನಗಳು ಕಡಿಮೆ ಜಿಎಸ್‍ಟಿ ಮತ್ತು ತೆರಿಗೆ ವಿನಾಯಿತಿಗಳು ಖರೀದಿದಾರರಿಗೆ ಹಣ ಉಳಿಸಲು ಸಹಾಯ ಮಾಡುತ್ತವೆ. ಇವುಗಳಲ್ಲಿ ಇಂಜಿನ್ ಇರುವುದಿಲ್ಲ. ಅದರಲ್ಲಿ ಕಡಿಮೆ ಚಲಿಸುವ ಭಾಗಗಳು ಇರುತ್ತವೆ. ಇದರಿಂದ ಎಣ್ಣೆ ಬದಲಾಯಿಸುವ ಮತ್ತು ಇಂಜಿನ್ ರಿಪೇರಿ ಮಾಡುವ ಖರ್ಚು ಉಳಿಯುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಹಾಯ ಧನ ನೀಡುತ್ತಿವೆ.
ಚಾಜಿರ್ಂಗ್ ಕೇಂದ್ರಗಳ ಸಂಖ್ಯೆ ದೇಶಾದ್ಯಂತ ವೇಗವಾಗಿ ಹೆಚ್ಚಾಗುತ್ತಿದೆ ಎಂದರು. ಕಾರ್ಯಕ್ರಮ ಉಪನ್ಯಾಸಕ ಮಹಾದೇವಪ್ಪ ಎಚ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಬಿರಾದಾರ. ಬಿರಾದಾರ, ಸಮಾಜ ಸೇವಕ ದಿನೇಶ್ ಮಿಶ್ರಾ ಹಾಗೂ ವಿದ್ಯಾರ್ಥಿಗಳು ಇದ್ದರು.