
ಕಲಬುರಗಿ,ಸೆ.9: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಂಪ್ಯೂಟರ್ ವಿಜ್ಞಾನ ನಿಕಾಯದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯ ಮಟ್ಟದ ಆಂತರಿಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2026 ಯಶಸ್ವಿಯಾಗಿ ಮುಕ್ತಾಯವಾಯಿತು.
ಆಂತರಿಕ ಹ್ಯಾಕಥಾನ್‍ಗೆ ವಿ.ವಿ.ಯ ಒಟ್ಟು 55 ತಂಡಗಳು ನೋಂದಾಯಿಸಿಕೊಂಡಿದ್ದು, ಕಂಪ್ಯೂಟರ್ ವಿಜ್ಞಾನ, ಎಂಸಿಎ, ಗಣಿತ ಮತ್ತು ಕಂಪ್ಯೂಟಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ಹಾಗೂ ಸ್ಟ್ಯಾಟಿಸ್ಟಿಕ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ವಿಭಾಗಗಳ ಸುಮಾರು 246 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೌಲ್ಯಮಾಪನದ ಬಳಿಕ, ವಿವಿಧ ಸಮಸ್ಯೆ ಹೇಳಿಕೆಗಳು ಮತ್ತು ವಿವಿಧ ವಿಷಯಗಳ ಆಧಾರದ ಮೇಲೆ ರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2026ಕ್ಕೆ ಅಂತಿಮವಾಗಿ 45 ತಂಡಗಳನ್ನು ನಾಮನಿರ್ದೇಶನ ಮಾಡಲಾಯಿತು.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ, ನಾವೀನ್ಯತಾ ಕೋಶ ಮತ್ತು ಎಐಸಿಟಿಇ ಬೆಂಬಲದೊಂದಿಗೆ ನಡೆಯುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್, ನೈಜ ಜಗತ್ತಿನ ಸವಾಲುಗಳಿಗೆ ನವೀನ ಹಾಗೂ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ.
ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು, ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಹೋಲಿಕೆಗಳನ್ನು ತಪ್ಪಿಸುವುದು ಮತ್ತು ಸ್ವಯಂಶಿಸ್ತು ಯಶಸ್ಸಿನ ಐದು ಪ್ರಮುಖ ತತ್ವಗಳಾಗಿವೆ. ಯಶಸ್ಸಿಗೆ ಯಾವುದೇ ಶಾರ್ಟ್‍ಕಟ್‍ಗಳಿಲ್ಲ ಎಂದು ಹೇಳಿದ ಅವರು, ವಿಶ್ವವಿದ್ಯಾಲಯದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು, ವೈಫಲ್ಯಗಳಿಂದ ಕಲಿಯಬೇಕು ಹಾಗೂ ಗುರಿಯತ್ತ ಗಮನಹರಿಸಬೇಕೆಂದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಿಯುಕೆ ಪ್ರತಿನಿಧಿಸುವ ಆಯ್ಕೆಯಾದ ಪ್ರಮುಖ ತಂಡಗಳು ಸೆಪ್ಟೆಂಬರ್ 22 ಮತ್ತು 23 ರಂದು ಹೈದರಾಬಾದ್‍ನಲ್ಲಿ ಐಇಇಇ ಐಇಎಸ್ ಸೊಸೈಟಿ ಆಯೋಜಿಸಲಿರುವ ಇಂಡಸ್ಟ್ರಿಇನ್ನೋವೇಷನ್ ಕಾನ್ಕ್ಲೇವ್ 2026ರಲ್ಲಿ ಸಿಯುಕೆಯ ನಾವೀನ್ಯತಾ ಕೋಶದ ನೋಡಲ್ ಅಧಿಕಾರಿ ಡಾ. ರೋಹಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ.
ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಆಂತರಿಕ ಹಾಗೂ ಬಾಹ್ಯ ತೀರ್ಪುಗಾರರು ಭಾಗವಹಿಸಿದ ತಂಡಗಳ ನವೀನ ಆಲೋಚನೆಗಳು ಮತ್ತು ಯೋಜನೆಗಳನ್ನು ಮೌಲ್ಯಮಾಪನ ಮಾಡಿದರು. ನವೀನ ಪ್ರಯತ್ನಗಳಿಗಾಗಿ ವಿದ್ಯಾರ್ಥಿಗಳು ಹಾಗೂ ತಂಡಗಳನ್ನು ಅಭಿನಂದಿಸಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಬಾಹ್ಯ ತೀರ್ಪುಗಾರರಾಗಿ ಎಚ್ ಸಿ ರೊಬೋಟಿಕ್ಸ್ ನಿರ್ದೇಶಕ ಡಾ. ರಾಧಾಕಿಶೋರ್ ಪಾಂಡುರಂಗಿ,
ಫ್ಲೈಯೆಟ್‍ಸಂಸ್ಥಾಪಕ ,ಸಿಟಿಓ ಸಾಯಿ ವಿಷ್ಣು ವಿಪ್ಪಗುಂಟ,ಯುಕೆಯ ಲಾಯ್ಡ್ಸ್ ಬ್ಯಾಂಕಿಂಗ್ ಗ್ರೂಪ್
ಡೇಟಾ ಸೈನ್ಸ್ ಎಂಜಿನಿಯರ್ ಅಂಶುಮಾನ್ ದೀಕ್ಷಿತ್ ಹಾಗೂ ಪೆರೆನಿಯಲ್ ಸಿಸ್ಟಮ್ಸ್ ಎಐ
ಎಂಜಿನಿಯರ್ ಶ್ರೀಕಾಂತ್ ಕಸಾನಿ ಭಾಗವಹಿಸಿದ್ದರು.ಕಂಪ್ಯೂಟರ್ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಆರ್. ಎಸ್. ಹೆಗಡಿ, ವಿ.ವಿ.ಯ ಹ್ಯಾಕಥಾನ್ ನೋಡಲ್ ಅಧಿಕಾರಿ ಡಾ. ರೋಹಿತ್ ಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಎಸ್.ಐ.ಹೆಚ್ ಸದಸ್ಯರು, ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






























