
ಚಿತ್ತಾಪುರ,ಸೆ.9: ವಾಡಿ ಸಮೀಪದ ಕಡಬೂರ ಗ್ರಾಮದ ಸಂಗಮನಾಥ ದೇವರ ಅರ್ಚಕರಾದ ರುದ್ರಗೌಡ ರಾಜ್ವಾಳ್
ಅವರು ಮಳೆ ಬರಲೆಂದು ಪ್ರಾರ್ಥಿಸಿ ಉರುಳು ಸೇವೆ ಕೈಗೊಂಡರು.
ಅವರು ರೈತರ ಉದ್ಧಾರಕ್ಕಾಗಿ ಮಳೆರಾಯ ಧರೆಗೆ ಬಾ ಎಂದು ಪ್ರಾರ್ಥಿಸಿ ಕಡಬೂರ ನದಿಯಲ್ಲಿ ಮಿಂದೆದ್ದು ಊರ ಗ್ರಾಮದೇವತೆ ದ್ಯಾಮಮ್ಮ ಮಂದಿರದವರೆಗೆ ಉರುಳು ಸೇವೆ ಸಲ್ಲಿಸಿ ಭಕ್ತಿ ಮೆರೆದರು.






























