Home ಜಿಲ್ಲೆ ಕಲಬುರಗಿ ಗಣೇಶೋತ್ಸವ ಆಚರಣೆಗೆ ನಿರಂತರ ವಿದ್ಯುತ್ ಪೂರೈಕೆ :ಜೆಸ್ಕಾಂ ಅಧ್ಯಕ್ಷರ ಭರವಸೆ

ಗಣೇಶೋತ್ಸವ ಆಚರಣೆಗೆ ನಿರಂತರ ವಿದ್ಯುತ್ ಪೂರೈಕೆ :ಜೆಸ್ಕಾಂ ಅಧ್ಯಕ್ಷರ ಭರವಸೆ

ಕಲಬುರಗಿ,ಸೆ.9: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸುರಕ್ಷಿತ, ಸುಗಮ ಹಾಗೂ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ವತಿಯಿಂದ ಸಮಗ್ರ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.
ಸಾರ್ವಜನಿಕರು, ಭಕ್ತರು ಹಾಗೂ ಗಣೇಶೋತ್ಸವ ಸಮಿತಿಗಳಿಗೆ ಭರವಸೆ ನೀಡಿದ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ್ ಅವರು, ಹಬ್ಬದ ಅವಧಿಯಲ್ಲಿ ಉಇSಅಔಒನ ಸಂಪೂರ್ಣ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ನಿರಂತರವಾಗಿ ಲಭ್ಯವಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಗಣೇಶ ಉತ್ಸವದಲ್ಲಿ ಸಾರ್ವಜನಿಕರೊಂದಿಗೆ ನಾನು ಮತ್ತು ಜೆಸ್ಕಾಂ ಇಡೀ ತಂಡ ಎಲ್ಲಾ ಸಮಯದಲ್ಲೂ ಲಭ್ಯವಿರುತ್ತೇವೆ. ನಮ್ಮ ಸಂಪೂರ್ಣ ಜೆಸ್ಕಾಂ ತಂಡವು ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರಿಗೆ ಅಗತ್ಯವಿರುವ ಪ್ರತಿಯೊಂದು ಹಂತದಲ್ಲೂ ಸಹಾಯ ಮಾಡಲು ಸ್ಥಳದಲ್ಲೇ ಕಾರ್ಯನಿರ್ವಹಿಸಲಿದೆ. ವಿದ್ಯುತ್ ಮಂಜೂರು, ತಾಂತ್ರಿಕ ನೆರವು ಅಥವಾ ಸುರಕ್ಷತಾ ಪರಿಶೀಲನೆಗಾಗಿ ಆಯೋಜಕರು ಯಾವುದೇ ಹಿಂಜರಿಕೆಯಿಲ್ಲದೆ ನಮ್ಮನ್ನು ಸಂಪರ್ಕಿಸಬಹುದು. ಹಬ್ಬವನ್ನು ಬೆಳಕಿನಿಂದ, ಸುಗಮವಾಗಿ ಹಾಗೂ ಸಂಪೂರ್ಣ ಸುರಕ್ಷಿತವಾಗಿ ಆಚರಿಸುವಂತೆ ಮಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಹಬ್ಬಕ್ಕೆ ಸಂಬಂಧಿಸಿದ ವಿದ್ಯುತ್ ವ್ಯವಸ್ಥೆಗಳನ್ನುಜೆಸ್ಕಾಂ ಅಧ್ಯಕ್ಷರ ಕಚೇರಿ ಹಾಗೂ ಹಿರಿಯ ಅಧಿಕಾರಿಗಳು ನೇರವಾಗಿ ಮೇಲ್ವಿಚಾರಣೆ ಮಾಡಲಿದ್ದಾರೆ. ಸಾರ್ವಜನಿಕರು ಹಾಗೂ ಆಯೋಜಕರ ತುರ್ತು ಅಗತ್ಯಗಳಿಗಾಗಿ 24-7 ತುರ್ತು ಸ್ಪಂದನಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಜಿಲ್ಲಾಡಳಿತ ಹಾಗೂ ಸ್ಥಳೀಯ ನಾಗರಿಕ ಸಂಸ್ಥೆಗಳ ಸಹಯೋಗದಲ್ಲಿ ಸಹಾಯ ಕೇಂದ್ರಗಳನ್ನು ಕಾರ್ಯಗತಗೊಳಿಸಲಾಗುವುದು. ಗಣೇಶೋತ್ಸವ ಮಂಟಪಗಳಿಗೆ ಅಗತ್ಯವಿರುವ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳನ್ನು ಕೆಇ ಆರ್ ಸಿ ನಿಗದಿಪಡಿಸಿರುವ ದರಗಳ ಅನ್ವಯ ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ವಿದ್ಯುತ್ ಸಂಪರ್ಕ ನೀಡುವ ಮೊದಲು ಜೆಸ್ಕಾಂ ಇಂಜಿನಿಯರ್‍ಗಳು ಗಣೇಶೋತ್ಸವ ಮಂಟಪಗಳ ಸ್ಥಳಗಳನ್ನು ಪರಿಶೀಲಿಸಲಿದ್ದಾರೆ. ಮೇಲ್ದರ್ಜೆಯ ( ಎಚ್ ಟಿ ) ಮತ್ತು ಕಡಿಮೆ ದರ್ಜೆಯ ( ಎಲ್ ಟಿ )ವಿದ್ಯುತ್ ಮಾರ್ಗಗಳಿಂದ ಅಗತ್ಯ ಸುರಕ್ಷತಾ ಅಂತರ ಸೇರಿದಂತೆ ಇತರ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿದ ನಂತರವೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.
ಪ್ರಮುಖ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮಾರ್ಗಗಳಲ್ಲಿ ಒ ಅಂಡ್ ಎಂ ಸಿಬ್ಬಂದಿ, ಜೆಸ್ಕಾಂ ವಾಹನಗಳು ಹಾಗೂ ಅಗತ್ಯ ಸುರಕ್ಷತಾ ಉಪಕರಣಗಳನ್ನು ನಿಯೋಜಿಸಲಾಗಿದೆ. ಎತ್ತರದ ಗಣೇಶ ಮೂರ್ತಿಗಳನ್ನು ಸಾಗಿಸುವ ಮೆರವಣಿಗೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಅಗತ್ಯವಿರುವ ಕಡೆಗಳಲ್ಲಿ ಮರದ ಕೊಂಬೆಗಳನ್ನು ತೆರವುಗೊಳಿಸುವುದು ಹಾಗೂ ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ಮೇಲಕ್ಕೆ ಎತ್ತುವ ಕ್ರಮಗಳನ್ನು ಕೈಗೊಳ್ಳಲಾಗುವುದು.
ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಫೀಡರ್‍ಗಳಲ್ಲಿ ಯೋಜಿತ ನಿರ್ವಹಣಾ ಕಾರ್ಯಗಳಿಗಾಗಿ ಕೈಗೊಳ್ಳುವ ವಿದ್ಯುತ್ ವ್ಯತ್ಯಯಗಳನ್ನು ಹಬ್ಬದ ಅವಧಿಯಲ್ಲಿ ಸಾಧ್ಯವಾದಷ್ಟು ನಿಬರ್ಂಧಿಸಲಾಗಿದೆ. ತುರ್ತು ವಿದ್ಯುತ್ ದೋಷಗಳು ಉಂಟಾದಲ್ಲಿ ತಕ್ಷಣವೇ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ತುರ್ತು ದುರಸ್ತಿ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ.
ಗಣೇಶೋತ್ಸವ ಆಯೋಜಕರು, ನಿವಾಸಿಗಳ ಸಂಘಗಳು ಹಾಗೂ ಸಾರ್ವಜನಿಕರು ವಿದ್ಯುತ್ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜೆಸ್ಕಾಂ ಮನವಿ ಮಾಡಿದೆ. ಗಣೇಶೋತ್ಸವ ಮಂಟಪಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಅಧಿಕೃತ ಪ್ರಕ್ರಿಯೆಯ ಮೂಲಕವೇ ಪಡೆಯಬೇಕು ಹಾಗೂ ಅಗತ್ಯವಿರುವ ಸಂದರ್ಭಗಳಲ್ಲಿ ತಾಂತ್ರಿಕ ಸಿಬ್ಬಂದಿಯ ನೆರವನ್ನು ಪಡೆದುಕೊಳ್ಳುವಂತೆ ಆಯೋಜಕರಿಗೆ ಸೂಚಿಸಲಾಗಿದೆ.
ಜೆಸ್ಕಾಂ ಕೇಂದ್ರಿಕೃತ ಟೋಲ್-ಫ್ರೀ ಸಹಾಯವಾಣಿ: 1912ಹಾಗೂ ಅಧಿಕೃತ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಸೇರಿದಂತೆ ಇತರ ಅಧಿಕೃತ ಮಾಧ್ಯಮಗಳೂ ಸಾರ್ವಜನಿಕರ ಸಹಾಯ ಮತ್ತು ಸುರಕ್ಷತಾ ಸಂಬಂಧಿತ ಪ್ರಶ್ನೆಗಳಿಗೆ ಲಭ್ಯವಿರಲಿವೆ.