
ಕಲಬುರಗಿ,ಸೆ.9: ದಿ.ಶಾಂತಪ್ಪಾ ಪಾಟೀಲ ನರಿಬೋಳ ಅವರ ಪುಣ್ಯಸ್ಮರಣೆ ಅಂಗವಾಗಿ ನೀಡಲಾಗುವ ಶಾಂತಶ್ರೀ ಪ್ರಶಸ್ತಿಗೆ ಲೇಖಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಸಂಗಮೇಶ ಬಾದವಾಡಗಿ ಹಾಗೂ ಲೇಖಕ,ಕಲಬುರಗಿ ಜಿಲ್ಲೆ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲ್ ರೆಡ್ಡಿ ಮುನ್ನೂರ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು ರಾಜಾಜಿನಗರದ ಕಾಯಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸೆ. 12 ರಂದು ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು . ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ 20 ಸಾಧಕರಿಗೆ ವಿಶೇಷ ಸನ್ಮಾನವನ್ನು ಮಾಡಲಾಗುವುದು ಎಂದು ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.






























