Home ಜಿಲ್ಲೆ ಬೆಂಗಳೂರು ಉತ್ತರ ವಿವಿಯನ್ನು ಮಾದರಿ ವಿವಿಯನ್ನಾಗಿ ಮಾಡಲಾಗುವುದು

ಉತ್ತರ ವಿವಿಯನ್ನು ಮಾದರಿ ವಿವಿಯನ್ನಾಗಿ ಮಾಡಲಾಗುವುದು

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 39;

ಕೆಜಿಎಫ್.ಸೆ.೭-ಬೆಂಗಳೂರು ವಿಶ್ವವಿಧ್ಯಾಯಲದಿಂದ ಬೇಪಟ್ಟು ಉತ್ತರ ವಿಶ್ವವಿಧ್ಯಾಲಯವನ್ನಾಗಿ ಪ್ರಾರಂಭಿಸಿ ೯ ವರ್ಷಗಳುಪೂರ್ಣಗೊಂಡಿದ್ದು ಹೊಸ ಕ್ಯಾಂಪನ್ ನಿರ್ಮಾಣ ಕಾರ್‍ಯ ನಡೆಯುತ್ತಿದೆ.ಹೊಸ ಕೋರ್ಸ್‌ಗಳು ಸಹ ಪ್ರಾರಂಭವಾಗುತ್ತಿದೆ ಎಂದು ಉತ್ತರ ವಿಶ್ವವಿದ್ಯಾಲಯ ಉಪಕುಲಪತಿ ಬಿ.ಕೆ.ರವಿ ಹೇಳಿದರು.


ಕ್ಯಾಸಂಬಳ್ಳಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಬೇತಮಂಗಲ ರೂರಲ್ ಡಿಗ್ರಿ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಗ್ರಾಜುಯೇಷನ್ ಡೇ ಹಾಗೂ ಪ್ರಥಮ ವರ್ಷದ ವಿಧ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಉನ್ನತ ಶಿಕ್ಷಣ ಇಲಾಖೆ ಸಚಿವರು ಸರ್ಕಾರ ಸಿಂಡಿಕೇಟ್ ಸದಸ್ಯರು ಹಾಗೂ ಜನಪ್ರತಿನಿಧಿಗಳು ಶಿಕ್ಷಕರ ನೇಮಕ ಶಿಕ್ಷಕೇತರ ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ನೀಡಿದ್ದು ಉತ್ತಮ ಸಹಕಾರವನ್ನು ನೀಡುತ್ತಿದ್ದಾರೆ.ಅದರೂ ಸಹ ನಮ್ಮಲ್ಲೂ ಕೆಲವು ನ್ಯೂನತೆಗಳು ಇದ್ದು ಅವುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತರ ವಿಶ್ವವಿದ್ಯಾಲಯ ಮಾದರಿ ವಿಶ್ವ ವಿದ್ಯಾಲಯವನ್ನಾಗಿ ರೂಪಗೊಳ್ಳಲಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ತಿಳಿಸಿದರು.


ಉನ್ನತ ಶಿಕ್ಷಣವನ್ನು ಪುನರ್ ವ್ಯಾಖ್ಯನ ಮಾಡುವ ಸಂದರ್ಭ ಬದಗಿ ಬಂದಿದೆ.ಏಕೆಂದರೆ ಇಂದಿನ ಕಾಲದ ತಂತ್ರಜ್ಞಾನ ಬಹಳಷ್ಟು ಮುಂದೆ ಸಾಗಿದ್ದು ಶಿಕ್ಷಕರು ಸಹ ತಮ್ಮ ವೃತ್ತಿಯಲ್ಲಿ ಬದಲಾವಣೆಗಳನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.


ಪೋಷಕರು ಮಕ್ಕಳ ವಿಕಸನಕ್ಕೆ ತಕ್ಕಂತೆ ಅವರ ಬೆಂಬಲಕ್ಕೆ ನಾವು ನಿಲ್ಲಬೇಕಿದೆ.ಏಕೆಂದರೆ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಬದಲಾವಣೆ ಮಾಡುವ ಜಾವದ್ಬಾರಿ ಶಿಕ್ಷಕರ ಮೇಲೆ ಇದೆ ಎಂದು ಪೋಷಕರು ಹೇಳುವುದು ಶಿಕ್ಷಕರು ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಬಯಸುವುದು ಸರಿಯಲ್ಲ.ಪೋಷಕರು ಹಾಗೂ ಶಿಕ್ಷಕರ ಮೇಳೆ ಹೋಣೆಗಾರಿಕೆ ಇದೆ ಮತ್ತು ಪೋಷಕರು ಹಾಗೂ ಶಿಕ್ಷಕರು ಕೈಜೋಡಿಸಿದಾಗ ಮಾತ್ರ ಉತ್ತಮ ವಿಧ್ಯಾರ್ಥಿ ಹೊರ ಹೋಮ್ಮಲು ಸಾಧ್ಯವೆಂದು ಹೇಳಿದರು.


ಮಕ್ಕಳಲ್ಲಿ ಇಂದಿನ ಸಮಾಜದಲ್ಲಿ ಗುರುಗಳ ಬಗ್ಗೆ ಪೋಷಕರ ಬಗ್ಗೆ ದೇಶದ ಬಗ್ಗೆ ವಿಶ್ವವಿದ್ಯಾಲಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಎಲ್ಲರು ಮಾಡಬೇಕಿದೆ ಇದರಿಂದ ಮಕ್ಕಳನ್ನು ನಮ್ಮ ದೇಶದ ಆಸ್ತಿಯನ್ನಾಗಿ ಮಾಡಲು ಸಾಧ್ಯವಿದೆ ಎಂದರು .