
ಮಾಲೂರು.ಸೆ.೭-ಭಾನುವಾರ ರಜೆ ದಿನವಾದರೂ ಬೆಳಗ್ಗೆ ೬ ಗಂಟೆಗೇ ಮಾಲೂರಿಗೆ ಆಗಮಿಸಿ ಅಕಾರಿಗಳೊಂದಿಗೆ ಸಭೆ ನಡೆಸಿ, ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಳದಲ್ಲೇ ಪರಿಶೀಲಿಸಿದ ಕೋಲಾರ ಜಿಲ್ಲಾಕಾರಿ ಎಂ.ಆರ್. ರವಿಕುಮಾರ್ ಕಾರ್ಯವೈಖರಿಗೆ ಮಾಲೂರು ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಕಾರಿಗಳು ಎನ್‌ಐಎಎಚ್ ಅಧಿಕಾರಿಗಳು ಹಾಗೂ ಅಭಿಯಂತರರೊಂದಿಗೆ ಸಭೆ ನಡೆಸಿದ ಬಳಿಕ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ಇಡ್ಲಿ ಖಾರಬಾತ್ ಸೇವಿಸಿ ಪ್ರತಿದಿನ ಆಹಾರವನ್ನು ಇದೇ ರೀತಿ ಸ್ವಚ್ಛವಾಗಿ ರುಚಿಕರವಾಗಿ ಸಾರ್ವಜನಿಕರಿಗೆ ನೀಡಬೇಕು ಎಂದು ತಿಳಿಸಿದ ಅವರು ನೂತನವಾಗಿ ನಡೆಯುತ್ತಿರುವ ಬಸ್ ನಿಲ್ದಾಣದ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ನಗರ ವ್ಯಾಪ್ತಿಯಲ್ಲಿರುವ ನಿವೇಶನ, ಸರ್ವೆ ನಂಬರ್ ಜಮೀನು, ಗ್ರಾಮಠಾಣ ಹಾಗೂ ಗೋಮಾಳ ಜಮೀನುಗಳನ್ನು ಅಕ್ರಮವಾಗಿ ದಾಖಲೆ ಸೃಷ್ಟಿಸಿಕೊಂಡು ಅನಕೃತ ಕಟ್ಟಡ ನಿರ್ಮಿಸಿರುವುದು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಖಡಕ್ ಸೂಚನೆ ನೀಡಿದರು. ಯಾವುದೇ ಪ್ರತಿಷ್ಠಿತ ವ್ಯಕ್ತಿಯಾಗಿದ್ದರೂ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ, ಜಮೀನನ್ನು ನಗರಸಭೆ ವಶಕ್ಕೆ ಪಡೆಯಬೇಕು ಎಂದು ಅಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳು ನಿಯಮಿತವಾಗಿ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿಗದಿತ ಅವಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ನಗರ ಸಭೆ ಮತ್ತು ಪುರಸಭೆಯಿಂದ ಕಾಮಗಾರಿಗಳ ಅನುಮೋದನೆಗೆ ಬರುವ ಪ್ರಸ್ತಾವನೆ ಕಡತಗಳನ್ನು ಅನುಮೋದಿಸುವುದರಲ್ಲಿ ವಿಳಂಬ ಮಾಡಿದ್ದರಿಂದ ನಗರ ಅಭಿವೃದ್ಧಿ ಇಲಾಖೆಯ ಎಇಇ ಗಂಗಾಧರಿಗೆ ಜಿಲ್ಲಾಕಾರಿ ತರಾಟೆಗೆ ತೆಗೆದುಕೊಂಡರು.ಯಾವುದೇ ಕಡತ ಬಂದರು ಶೀಘ್ರವಾಗಿ ಅನುಮೋದಿಸಿ ವಿಲೇವಾರಿ ಮಾಡುವಂತೆ ಇಲ್ಲದಿದ್ದ ಪಕ್ಷದಲ್ಲಿ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ವೈ. ನಂಜೇಗೌಡ, ತಹಶೀಲ್ದಾರ್ ಎಂ.ವಿ. ರೂಪ, ಯೋಜನಾ ಅಕಾರಿ ಅಂಬಿಕ, ತಾ.ಪಂ.ಇಓ.ವಿ.ಕೃಷ್ಣಪ್ಪ, ನಗರಸಭೆ ಪೌರಾಯುಕ್ತ ಎಂ.ಎಸ್. ಮಹದೇವ್ ಹಾಗೂ ಯೋಜನಾ ಪ್ರಾಕಾರದ ಅಧ್ಯಕ್ಷ ವಿಜಯ ನರಸಿಂಹ ಸೇರಿದಂತೆ ಅಕಾರಿಗಳು ಉಪಸ್ಥಿತರಿದ್ದರು.

































