Home ಜಿಲ್ಲೆ ಕಲಬುರಗಿ ದಾರ್ಶನಿಕರ ವಿವೇಚನೆಯ ದಿಕ್ಕುಗಳು ಪ್ರಸ್ತುತ ಕಾಲಮಾನಕ್ಕೆ ಅಗತ್ಯ : ರಘುನಾಥ ಚ.ಹ

ದಾರ್ಶನಿಕರ ವಿವೇಚನೆಯ ದಿಕ್ಕುಗಳು ಪ್ರಸ್ತುತ ಕಾಲಮಾನಕ್ಕೆ ಅಗತ್ಯ : ರಘುನಾಥ ಚ.ಹ

ಕಲಬುರಗಿ,ಜು.16-ದಾರ್ಶನಿಕರ ವಿವೇಚನೆಯ ದಿಕ್ಕುಗಳು ಪ್ರಸ್ತುತ ಕಾಲಮಾನಕ್ಕೆ ಅಗತ್ಯವಾಗಿವೆ ಎಂದು ಖ್ಯಾತ ಲೇಖಕ, ಪತ್ರಕರ್ತ ರಘುನಾಥ ಚ.ಹ.ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಕಲಾ ನಿಕಾಯದ ಡೀನರಾದ ಪೆÇ್ರ. ಎಚ್.ಟಿ.ಪೆÇೀತೆಯವರ ‘ವರ್ತಮಾನದ ವಿವೇಚನೆಯ ದಿಕ್ಕುಗಳು’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ಕೃತಿಯಲ್ಲಿ ಮನುಷ್ಯ ಕುಲದ ಪ್ರಾರ್ಥನೆ, ಬಹುತ್ವ ಭಾರತದ ನಿಲುವುಗಳು ಹರಳುಗಟ್ಟಿವೆ. ಈ ಕೃತಿಯಲ್ಲಿ ದಾರ್ಶನಿಕರ ವಿವೇಚನೆ ದಿಕ್ಕುಗಳು, ಇಂದಿನ ಕಾಲಮಾನಕ್ಕೆ ಅಗತ್ಯವೆಂದು ಅಭಿಪ್ರಾಯಪಟ್ಟರು.
ಪೆÇೀತೆಯವರು ಡಾ. ಬಿ.ಆರ್. ಅಂಬೇಡ್ಕರ್ ಪ್ರಜ್ಞೆಯನ್ನು ಮರುಸೃಷ್ಟಿಸುತ್ತಿರುವ ಕ್ರಿಯಾಶೀಲ ಬರೆಹಗಾರರು. ಪ್ರಗತಿಪರ ಚಿಂತನೆ, ಜನಪರ-ಜೀವಪರ, ಮಾನವೀಯ ಮೌಲ್ಯ, ವಿಚಾರಧಾರೆಗಳನ್ನು ಪ್ರಜ್ಞಾಪೂರ್ವಕವಾಗಿ ನಿರೂಪಿಸುತ್ತ ಬರುತ್ತಿದ್ದಾರೆ. ಗಾಂಧಿ-ಅಂಬೇಡ್ಕರ್ ವಿಚಾರಧಾರೆಗಳನ್ನು ತೌಲನಿಕರಿಸಿ ನೋಡುವಂತ ಪ್ರಾಮಾಣಿಕ ಯತ್ನವನ್ನು ಮಾಡುತ್ತ ಬಂದಿದ್ದಾರೆ. ಕಳೆದ ಎರಡು ದಶಕಗಳಿಂದ ಅಂಬೇಡ್ಕರ್ ಚಿಂತನೆ ಹೊರತುಪಡಿಸಿ ಗಾಂಧಿ ಚಿಂತನೆ ಅಪೂರ್ಣವೆಂದು ಆಶಯ ವ್ಯಕ್ತಪಡಿಸಿದರು.
ಅರಿವು, ಪ್ರಜ್ಞೆ, ಮೌಲ್ಯಗಳನ್ನು ಕನ್ನಡಿಕರಿಸುತ್ತಿರುವ ಪೆÇೀತೆಯವರು ಈ ಕಾರಣಕ್ಕೆ ನಾಡಿನಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅವರ ಮಹಾಯಾನ ಬೃಹತ್ ಕಾದಂಬರಿಯು ಕನ್ನಡದಲ್ಲಿ ಅಂಬೇಡ್ಕರ್ ಜೀವನ ಆಧಾರಿತ ವಿಚಾರಧಾರೆಗಳನ್ನು ಕಥನ ರೂಪದಲ್ಲಿ ಕಟ್ಟಿಕೊಟ್ಟ ಪ್ರತಿಭಾನ್ವಿತ ಬರೆಹಗಾರರು. ಹೊಸತಲೆಮಾರಿನ ಪ್ರತಿನಿಧಿಯಾಗಿ ಭೀಮ ಬೀಜವನ್ನು ಬಿತ್ತುವ ಕೈಂಕರ್ಯ ಮಾಡುತ್ತ ಬಂದಿದ್ದಾರೆ. ಆತ್ಮಪ್ರತ್ಯೆಯ ಮೂಲಕ ಎಲ್ಲರ ಅಂಬೇಡ್ಕರ್ ಎಂಬ ಮಾತ್ಹೇಳುವ ಈ ಹೊತ್ತಿನ ತುರ್ತು. ಲೋಕಹಿತ, ಸಾಮಾಜಹಿತ, ಆರ್ಥಪ್ರಾರ್ಥನೆಯ ದಾರ್ಶನಿಕ ವಿಚಾರಗಳನ್ನು ಅನುಸಂಧಾನಗೊಳಿಸುತ್ತಿದ್ದಾರೆ. ಪೆÇೀತೆಯವರ ಸಾಹಿತ್ಯ ಬರಹದ ಕೇಂದ್ರಬಿಂದುವಾಗಿ, ಶಕ್ತಿಯಾಗಿ ಬರಹದ ಜೀವದ್ರವ್ಯಧಾರೆಯಾಗಿದೆ. ಹಿಂದುಳಿದ, ದಲಿತ, ಮಹಿಳೆಯರಿಗೆ ಅಸ್ಮಿತೆಯನ್ನು, ಹಕ್ಕುಗಳನ್ನು, ಸ್ವಾತಂತ್ರ್ಯ, ಐಡೆಂಟಿಟಿಯನ್ನು ದೊರಕಿಸಿಕೊಟ್ಟ ಸಾಮಾಜಿಕ ಹೋರಾಟಗಾರ,
ಮಹಾಮಾನವತವಾದಿ ಅಂಬೇಡ್ಕರ್. ಜನಸಾಮಾನ್ಯರ ಗುರುತುಗಳನ್ನು ತೋರುವುದಕ್ಕೆ ಶ್ರಮಿಸಿದ ಮಹಾನಾಯಕ. ಇವತ್ತಿನ ತುರ್ತಿನ ಸಂಘರ್ಷ, ಅಸಮಾನತೆ, ಅನ್ಯಾಯ, ಭ್ರಷ್ಟಾಚಾರ, ಆಡಳಿತ ವೈಫಲ್ಯತೆ ವಿರೋಧಿಸಿ
ಸತ್ಯಾಗ್ರಹ ನಡೆಸಿರುವ ವಾಂಗಚೂಕ್ ಅವರನ್ನು ಆಡಳಿತರೂಢ ಸರ್ಕಾರ ನಿರ್ಲಕ್ಷಿಸುತ್ತಿರುವುದು, ಮೌನಕ್ಕೆ ಜಾರಿರುವುದು ಬೇಸರದ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.
ಇಂದಿನ ಸರ್ಕಾರ ನಡೆಸುತ್ತಿರುವ(ಎಸ್‍ಐಆರ್) ಪರಿಷ್ಕøತ ಮತದಾರರ ಪಟ್ಟಿಯಲ್ಲಿ ಪ್ರಜಾಸತ್ತಾತ್ಮಕ ಮತದಾನದ ಹಕ್ಕಿನಿಂದ ಜನಸಾಮಾನ್ಯರ ಹಕ್ಕನ್ನು ಕುತಂತ್ರದಿಂದ ಕಿತ್ತುಕೊಳ್ಳುವ ಹುನ್ನಾರ ಕೇಂದ್ರ ಸರ್ಕಾರ
ಮಾಡುತ್ತಿರುವುದು ದುರಂತದ ಸಂಗತಿ. ಅಂಬೇಡ್ಕರ್ ನಮಗೆ ಆದರ್ಶವೆಂದು ಹೇಳುತ್ತ, ಅಂಬೇಡ್ಕರ್ ಅವರ ಪ್ರಗತಿಪರ ವಿಚಾರ, ಸಿದ್ಧಾಂತಗಳ ವಿರುದ್ದವಾಗಿ ನಡೆಯುತ್ತಿರುವ ವಿದ್ಯಮಾನಗಳು ತಲ್ಲಣವುಂಟುಮಾಡುತ್ತಿವೆ. ವಿಮೋಚನೆಯ ದಿಕ್ಕುಗಳನ್ನು ತೋರುವಂತಹ ವಿಚಾರಧಾರೆಗಳೇ ಇಲ್ಲಿ ಮುಖ್ಯವೆನಿಸುತ್ತವೆ. ಗಾಂಧಿ-ಅಂಬೇಡ್ಕರ್ ಅವರ ವಿಚಾರಧಾರೆಗಳೇ ವರ್ತಮಾನದ ದಿಕ್ಕು- ದೆಸೆಗಳಾಗಬೇಕಿದೆ ಎಂಬ ಮೌಲಿಕ ವಿಚಾರಗಳು ಈ ಕೃತಿಗಳಲ್ಲಿ ಮೂಡಿಬಂದಿವೆ. ಪ್ರತಿಮೆ, ರೂಪಕಗಳನ್ನು ಕಲಾತ್ಮಕವಾಗಿ ವಿವೇಚನೆಯಿಂದ ದುಡಿಸಿಕೊಂಡಿದ್ದಾರೆ. ಜ್ಯೋತಿಬಾ ಫುಲೆ-ಸಾವಿತ್ರಿಬಾಯಿ ಫುಲೆ, ಶಾಹÇ-ನಾಲ್ವಡಿ, ಅಂಬೇಡ್ಕರ್ ಅವರ ಶಿಕ್ಷಣ ಕುರಿತಾದ
ಚಿಂತನೆಗಳು ಶೂದ್ರ-ಅತಿಶೂದ್ರರಿಗೆ ಶಕ್ತಿಯೆಂಬುದು ಪೆÇೀತೆಯವರ ಸಾಹಿತ್ಯದಲ್ಲಿ ಹೆಪ್ಪÅಗಟ್ಟಿದೆ. ಅವ್ಯಾಜ್ಯ ಅಂತಃಕರಣದ ಮೂಲಕ ಅನ್ಯಾಯ, ಅಸಮಾನತೆ, ಅವ್ಯವಸ್ಥೆಯನ್ನು ಪ್ರಶ್ನಿಸುವ ಚಿಕಿತ್ಸಕ ಮನೋಭಾವ ವ್ಯಕ್ತಗೊಂಡಿದೆ ಎಂದು ಪ್ರತಿಪಾದಿಸಿದರು.
ಕೃತಿ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕಿರಣ್ ಗಾಜನೂರ ಅವರು ಮಾತನಾಡುತ್ತ, ಸಾಂಸ್ಕøತಿಕ ರೂಪರೇಷಗಳನ್ನು ತಿದ್ದುವ ಅಗತ್ಯೆತೆ ಕುರಿತು ಈ ಕೃತಿಮಾತನಾಡುತ್ತೆ. ದಿಕ್ಕೆಟ್ಟ ಸ್ಥಿತಿಗತಿ ಕುರಿತು ಚಿಂತನ ಮಂಥನ ನಡೆದಿದೆ. ಅಂಬೇಡ್ಕರ್ ಅವರ ‘ಇಜಂ’ ವಿಚಾರಧಾರೆ ನೈತಿಕ ಮೌಲ್ಯ, ಮಾನವೀಯ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತುರ್ತಿನ ಕುರಿತು ಪ್ರತಿಪಾದನೆ ಗೊಂಡಿವೆ. ಜ್ಯೋತಿಬಾ ಫುಲೆ-ಸಾವಿತ್ರಿಬಾ ಫುಲೆ, ಶಾಹÇ, ನಾಲ್ವಡಿ, ಅಂಬೇಡ್ಕರ್ ಚಿಂತನೆಗಳು ಜನಸಾಮಾನ್ಯರನ್ನು ಬಿಡುಗಡೆಗೊಳಿಸಿವೆ. ಪ್ರಜ್ಞಾಪೂರ್ವಕವಾಗಿ ನೋಡಿದಾಗ ಶಿಕ್ಷಣವೇ ಸಮಾಜ ಸುಧಾರಣೆಗೆ
ಮುಲಾಮು ಎಂಬುದು ಗಮನಕ್ಕೆ ಬರುತ್ತದೆ ಎಂದು ತಿಳಿಸಿದರು.
ಮಹಿಳೆಯರ ಅಸ್ಮಿತೆಗಾಗಿ ಅಂಬೇಡ್ಕರ್ ಅವರು ಮಾಡಿದ ಹೋರಾಟ, ಸಂವಿಧಾನಾತ್ಮಕ ಹಕ್ಕುಗಳು, ಪ್ರಜಾಸತ್ತಾತ್ಮಕ ವಿವೇಚನೆಗಳು ಅನುಸಂಧಾನಗೊಂಡಿವೆ. ಮೀಸಲಾತಿಯ ಕುರಿತು ವ್ಯಂಗ್ಯ ಮಾಡುತ್ತಿದ್ದಾರೆ. ಈ ದೇಶದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಮಾತ್ರ ಮೀಸಲಾತಿ ಇರುವುದು; ಆದರೆ ಪ್ರಸ್ತುತ ಸರ್ಕಾರಿ ಇಲಾಖೆಗಳು ಖಾಸಗಿ ಒಡೆತನಕ್ಕೆ ಮಾರಾಟಗೊಂಡು ಮೀಸಲಾತಿ ಬರಿದಾಗಿಸುತ್ತಿವೆ ಎಂದು ವ್ಯಾಖ್ಯಾನಿಸಿದರು.
ಕೃತಿ ರಚನೆಕಾರರಾದ ಪೆÇ್ರ.ಎಚ್.ಟಿ.ಪೆÇೀತೆಯವರು ಮಾತನಾಡುತ್ತಾ, ಈ ನೆಲದ ಸ್ವಾಯತ್ತ ಪ್ರಜ್ಞೆಯ ಕಾರಣದಿಂದ ಶೈಕ್ಷಣಿಕ, ಸಂಘಟನಾತ್ಮಕ ನೆಲೆಯಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡೆ. ಅಕ್ಷರ ಜಗತ್ತಿಗೆ ಬಂದ ನಂತರ ಸಿಕ್ಕ ಅವಕಾಶಗಳನ್ನು ಸದ್ವಿನಿಯೋಗಿಸಿಕೊಳ್ಳಬೇಕು. ಬರಹಕ್ಕೆ ಪೆÇ್ರತ್ಸಾಹಿಸಿ ಬರಹಗಾರರನ್ನು ಗುರುತಿಸಿ, ಮತ್ತಷ್ಟು ಪ್ರೇರಣೆ ನೀಡಿರುವ ಪತ್ರಿಕೆಯ ಅಂಕಣ ಬರಹಗಳನ್ನು ವೈಚಾರಿಕವಾಗಿ
ವಿಶ್ಲೇಷಿಸುವ ನೋಟ ಇಲ್ಲಿ ನಿರೂಪಣೆಗೊಂಡಿವೆ. ಜನಪರ, ಪ್ರಗತಿಪರ, ಜೀವಪರ, ಮಾನವೀಯ ಮೌಲ್ಯಗಳ ‘ಇಜಂ’ ಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಆಶಯ ವ್ಯಕ್ತಪಡಿಸಿದರು. ಈ ದೇಶದಲ್ಲಿ ಅಂಬೇಡ್ಕರ್ ಅವರು ಹೇಳಿದ ಹಾಗೆ ಸಂಪತ್ತಿನ ಹಂಚಿಕೆ, ಆಸ್ತಿ ಹಂಚಿಕೆ ಸಮನಾಗಿ ಆದರೆ ಯಾವ ಮೀಸಲಾತಿಯ ಅಗತ್ಯೆತೆ ಇರಲ್ಲಿಲ್ಲವೆಂದರು. ಮುಂದುವರಿದು ಕುಲಪತಿಗಳನ್ನು ಕುರಿತು ಐವತ್ತು ವರ್ಷ ಪೂರೈಸಿದ ಹಳೆಯ ವಿಶ್ವವಿದ್ಯಾಲಯ ಖಾಯಂ ಪ್ರಾಧ್ಯಾಪಕರಿಲ್ಲದೆ ಸೊರಗಿ, ಶೈಕ್ಷಣಿಕ ಬರ ಅನುಭವಿಸುತ್ತಿದೆ. ಈ ಭಾಗಕ್ಕೆ ಶಿಕ್ಷಣದ ಶಕ್ತಿ ಕುಂಠಿತಗೊಳ್ಳುತ್ತಿದೆ. ಇದನ್ನು ನೀಗಿಸುವ ಜವಾಬ್ದಾರಿ ಪೆÇ್ರ. ಶಶಿಕಾಂತ ಉಡಿಕೇರಿಯವರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಲಪತಿಗಳಾದ ಪೆÇ್ರ. ಶಶಿಕಾಂತ ಉಡಿಕೇರಿಯವರು ಕನ್ನಡ ಅಧ್ಯಯನ ಸಂಸ್ಥೆ ಯಾವಾಗಲು ವಿದ್ಯಾರ್ಥಿಗಳ, ವಿಶ್ವವಿದ್ಯಾಲಯ, ಸಮಾಜಕ್ಕೆ ಪೂರಕವಾಗುವ
ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಬರುತ್ತಿರುವುದು ಆಶಾದಾಯಕ. ಪೆÇ್ರ. ಪೆÇೀತೆಯವರ ಬರಹದ ವಿವೇಚನೆಯ ಚಿಂತನೆಗಳು ಮೌಲಿಕವಾಗಿವೆ. ಅಂಬೇಡ್ಕರ್ ಅವರ ಸದೃಢಭಾರತದ ನಿರ್ಮಾಣಕ್ಕೆ ಬೇಕಾಗುವ ನೈತಿಕ ಮೌಲ್ಯಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವ ರೀತಿಯಲ್ಲಿವೆ. ಹೀಗಾಗಿ ಪೆÇೀತೆಯವರ ಬರಹ ಸಮಾಜದ ಜವಾಬ್ದಾರಿತನದ ಕುರಿತು ಅಕ್ಷರ ರೂಪಕ್ಕೆ ಇಳಿದಿವೆ. ಸಮಾನತೆ ಬೀಜ ನಮ್ಮ ಭಾಗದಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಮೊದಲ ಬಾರಿಗೆ ಬಿತ್ತನೆಗೊಂಡಿವೆ. ಡಾ.ಅಂಬೇಡ್ಕರ್ ಅವರಿಂದಾಗಿಯೇ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನಾತ್ಮಕವಾಗಿ ದೊರಕಿವೆ, ಅದನ್ನು ಅರಿತುಕೊಂಡು ಅಭಿವ್ಯಕ್ತಿಸುವ ನಾಗರಿಕರಾಗಬೇಕು ಎಂದು
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷಾಧಿಕಾರಿಗಳು ಹಾಗೂ ಹಿರಿಯ ಪ್ರಾಧ್ಯಾಪಕರಾದ ಪೆÇ್ರ.ರಮೇಶ ರಾಠೋಡ ಅತಿಥಿಯಾಗಿ ಭಾಗವಹಿಸಿದ್ದರು. ಸಂದರ್ಶಕ ಪ್ರಾಧ್ಯಾಪಕರಾದ ಡಾ.ಸೂರ್ಯಕಾಂತ ಸುಜ್ಯಾತ್, ಅಪ್ಪಾರಾವ್ ಅಕ್ಕೋಣಿ, ಪ್ರೊ.ಈಶ್ವರ್ ಇಂಗನ್, ಪ್ರೊ.ವಿ.ಆರ್. ಬಡಿಗೇರ್ ಪ್ರೊ.ಕೆ.ಎಸ್.ಬಂಧು, ಡಾ. ಎಂ.ಬಿ.ಕಟ್ಟಿ, ಡಾ. ಹಣಮಂತ ಮೇಲಕೇರಿ ಉಪಸ್ಥಿತರಿದ್ದರು.
ಡಾ.ಸಂತೋಷಕುಮಾರ ಎಸ್. ಕಂಬಾರ ಸ್ವಾಗತಿಸಿದರು, ಸಿದ್ದಾರ್ಥ ಚಿಮ್ಮಾಇದ್ಲಾಯ ವಂದಿಸಿದರು, ಡಾ.ಕಿರಣ ವಲ್ಲೇಪುರೆ ಕಾರ್ಯಕ್ರಮ ನಿರೂಪಿಸಿದರು.