Home ಜಿಲ್ಲೆ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ

ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ

ಹಾನಗಲ್,ಆ೨೪: ಭಗವಂತನಲ್ಲಿ ನಂಬಿಕೆ ಇಡಬೇಕು, ಮಾಡುವ ಕಾಯಕದಲ್ಲಿ ಶ್ರದ್ಧೆ ಹೊಂದಿರಬೇಕು. ಪ್ರತಿಯೊಬ್ಬರಿಗೂ ಸಹ ಕಷ್ಟ ಕಾಲ ಬಂದೇ ಬರುತ್ತದೆ. ಅನವಶ್ಯಕ ಆತಂಕಕ್ಕೆ ಒಳಗಾಗದೇ ಧರ್ಮದ ಮಾರ್ಗದಲ್ಲಿ ನಡೆದರೆ ಖಂಡಿತವಾಗಿಯೂ ಭವಿಷ್ಯ ಹಸನಾಗಲಿದೆ ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಹೇಳಿದರು.


ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದ ಮಾರುತಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲೂಕಿನ ಜನತೆಯ ಆಶೀರ್ವಾದದಿಂದ ಕರ್ನಾಟಕ ಗೃಹ ಮಂಡಳಿಯ ಜವಾಬ್ದಾರಿ ವಹಿಸುವ ಅವಕಾಶ ಸಿಕ್ಕಿದೆ. ತಾಲೂಕಿನಲ್ಲಿ ಹಾಳಾಗಿರುವ ರಸ್ತೆಗಳಿಗೆ ಹಾಗೂ ದೇವಸ್ಥಾನಗಳಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಲು ಶ್ರಮಿಸಲಾಗುವುದು ಎಂದರು.


ಸಾನ್ನಿಧ್ಯ ವಹಿಸಿದ್ದ ಹೋತನಹಳ್ಳಿಯ ಸಿದ್ದಾರೂಢ ಮಠದ ಸದ್ಗುರು ಶಂಕರಾನAದ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಾಗಿರದೆ ಜನರಲ್ಲಿ ಧರ್ಮ, ಸಂಸ್ಕೃತಿ ಹಾಗೂ ಸದಾಚಾರದ ಅರಿವು ಮೂಡಿಸುವ ಕೇಂದ್ರಗಳಾಗಿವೆ. ಯುವಜನತೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅರಿತು ಮುನ್ನಡೆಯಬೇಕಿದೆ ಎಂದರು.


ಯಳವಟ್ಟಿಯ ಸಿದ್ದಾಶ್ರಮದ ಸದ್ಗುರು ಯೋಗಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆ ಬೆಳೆಸುವಲ್ಲಿ ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ದೇವರ ಆರಾಧನೆಯ ನಿಜವಾದ ಉದ್ದೇಶ ಮಾನವ ಸೇವೆ ಹಾಗೂ ಪರೋಪಕಾರದ ಮನೋಭಾವನೆ ಮೂಡಿಸುವುದಾಗಿದೆ ಎಂದರು.


ಹುಣಸಿಕಟ್ಟಿಯ ಸಿದ್ದಾಶ್ರಮದ ಗುರುಜಯಾನಂದ ಸ್ವಾಮೀಜಿ, ಸಿಂಗನಹಳ್ಳಿಯ ಪ್ರಭುದೇವರಮಠದ ಸಿದ್ದಾರೂಢ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ನೇತಾಜಿ ಜಾಧವ, ಪ್ರಮುಖರಾದ ಕುಬೇರಪ್ಪ ಖಂಡೋಜಿ, ಸಿದ್ದಯ್ಯ ಸವಣೂರ, ಶಾಂತಯ್ಯ ಮಠದ, ಸಫಿಯಾಬಿ ಉಪ್ಪಣಸಿ, ನೂರ್‌ಜಾನ್ ಹಲಸೂರ, ಜಕಣಾಚಾರಿ ಬಡಿಗೇರ, ಪುಟಪ್ಪ ಬಾಡದ, ಭರಮಗೌಡ ನಂದಿಹಳ್ಳಿ, ಯಲ್ಲಪ್ಪ ಜಾಧವ, ರಫೀಕ್ ಉಪ್ಪಣಸಿ, ನಾಗರಾಜ ಶೇಷಪ್ಪನವರ, ಪರಶುರಾಮ ನಂದಿಹಳ್ಳಿ, ವೈ.ಪಿ.ಶಿಡ್ಲಾಪೂರ, ಬಸವರಾಜ ಕೋಳೂರ, ಅಶೋಕ ಮೋರೆ, ನಿಂಗಪ್ಪ ನಂದಿಹಳ್ಳಿ, ಪ್ರಕಾಶ ಬಾಡದ, ಇಮಾಮ ಹಲಸೂರ, ಗಜೇಂದ್ರ ಓವಿಕೊಪ್ಪ, ಮಂಜಯ್ಯ ಸವಣೂರ, ಚಂದ್ರಕಾAತ ಬಾಡದ, ಇಸ್ಮೆöÊಲ್ ಹಲಸೂರ, ಖಾದರಿ ಕಾಡಶೆಟ್ಟಿಹಳ್ಳಿ, ಖಲಂದರ ನರೇಗಲ್, ಶಿವಾಜಿ ಜಾಧವ, ರುಸ್ತುಂಸಾಬ ಹಲಸೂರ, ನೌಶಾದ್ ಹುಬ್ಬಳ್ಳಿ ಸೇರಿದಂತೆ ಹಿಂದೂ, ಮುಸ್ಲಿಂ ಬಾಂಧವರು ಇದ್ದರು.