Home ಜಿಲ್ಲೆ ಬೆಂಗಳೂರು ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಗೆ ಸುವರ್ಣ ಸೆಂಟ್‌ರಲ್ ಶಾಲೆ

ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಗೆ ಸುವರ್ಣ ಸೆಂಟ್‌ರಲ್ ಶಾಲೆ

ಕೋಲಾರ,ಅ.೭: ಬೆಂಗಳೂರಿನ ಕೆ.ಆರ್ ಪುರಂನ ಶಿಶು ಮಂದಿರ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ೧೪ ವರ್ಷ ವಯೋಮಾನದ ಬಾಲಕರ ವಿಭಾಗದ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿ ನಡೆಯಿತು.


ಈ ಪಂದ್ಯಾವಳಿಯಲ್ಲಿ ನಗರದ ಸುವರ್ಣ ಸೆಂಟ್ರಲ್ ಶಾಲೆಯ ತಕ್ಷಿತ್ ಎ, ಮಾನ್ವಿಕ್ ಎನ್, ದಿಲೀಪ್ ಸಾಗರ್, ಪರ್ವಿತ್ ರಾಜ್ ಕೆ, ವಿಕಸನ ಗೌತಮ್ ಎಂ.ವಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆಯುವುದರ ಜೊತೆಗೆ ಮಾನ್ವಿಕ್ ಎನ್ ಮತ್ತು ತಕ್ಷಿತ್ ಎ ಎಂಬ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.


ಇನ್ನು ಮಕ್ಕಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿ ಶುಭ ಹಾರೈಸಿದರು.