Home ಜಿಲ್ಲೆ ಮೈಸೂರು ಅರಣ್ಯ, ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಎ.ಆರ್.ಕೆ

ಅರಣ್ಯ, ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಎ.ಆರ್.ಕೆ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ/ ಹನೂರು.ಅ.9:-
ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಅರಣ್ಯ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಚಾಮರಾಜನಗರ ವೃತ್ತದ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ 72 ನೇ ವನ್ಯಜೀವಿ ಸಪ್ತಾಹ-2026ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಕರ್ನಾಟಕ ರಾಜ್ಯ ಶೇ.24.5ರಷ್ಟು ಅರಣ್ಯ ಪ್ರದೇಶ ಹೊಂದಿದೆ. ನಮ್ಮ ಚಾಮರಾಜನಗರ ಜಿಲ್ಲೆ ಹೆಚ್ಚು ಅರಣ್ಯ ಮತ್ತು ಪ್ರವಾಸಿಗರನ್ನು ಹೊಂದಿರುವ ಪ್ರವಾಸಿ ತಾಣವಾಗಿದೆ.
ದೇಶದಲ್ಲಿ 25,312 ಆನೆಗಳು ಮತ್ತು ರಾಜ್ಯದಲ್ಲಿ 6,395 ಆನೆಗಳಿವೆ. ಕರ್ನಾಟಕ ಆನೆ ಸಂಖ್ಯೆಯಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ 3,684 ಹುಲಿಗಳು ಮತ್ತು ಕರ್ನಾಟಕದಲ್ಲಿ 563 ಹುಲಿಗಳಿದ್ದು, ಹುಲಿ ಸಂಖ್ಯೆಯಲ್ಲಿ ರಾಜ್ಯ ಮತ್ತು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಚಿರತೆ ಸಂಖ್ಯೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ.
ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ ಹುಲಿ ಪ್ರಕರಣಗಳು ನಡೆದಿವೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾದರೆ ಜಾಮೀನು ಸಿಗಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಜಾಮೀನು ಸಿಕ್ಕಿದ್ದರೆ ಅದರ ಹಿಂದೆ ಕೈವಾಡ ಇದೆ ಎಂದು ಅರ್ಥ. ಅರಣ್ಯ ಅಧಿಕಾರಿಗಳು, ಡಿ.ಎಫ್.ಒ, ಸಿಬ್ಬಂದಿ ಬೆಟ್ಟಗುಡ್ಡ ಏರಿ, ಜೀವವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಾರೆ. ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ ಅರಣ್ಯಗಳಲ್ಲಿ ಅವರ ಶ್ರಮ ಅಗಾಧವಾಗಿದೆ ಎಂದು ಹೇಳಿದರು.


ವೀರಪ್ಪನ್ ಪ್ರಸ್ತಾಪಿಸಿದ ಅವರುವೀರಪ್ಪನ್ ಯಾರನ್ನೇ ಶೂಟ್ ಮಾಡಿದರೂ ನಾನೇ ಮಾಡಿದ್ದು ಎಂದು ಹೇಳುತ್ತಿದ್ದ. ಎರಡು ರಾಜ್ಯಗಳ ಪೆÇಲೀಸರಿಗೆ ಸವಾಲಾಗಿದ್ದ. ಅಂತಹ ಕಾಲದಲ್ಲೂ ಡಿ.ಕೆ.ಸಿಂಗ್, ಅಜಯ್ ಸಿಂಗ್ ಅವರಂತಹ ಅಧಿಕಾರಿಗಳು ಅರಣ್ಯದಲ್ಲಿ ಧೈರ್ಯದಿಂದ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.
ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಮಾತನಾಡಿ, ವನ್ಯಜೀವಿ ಸಪ್ತಾಹದ ಉದ್ದೇಶ ಮತ್ತು ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು.
ನಂತರ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರ, ಅರಣ್ಯ ಮಿತ್ರ ಅಧಿಕಾರಿ ಪುರಸ್ಕಾರ ನೀಡಲಾಯಿತು. ಅರಣ್ಯ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ಮಾಡಿ ಕನ್ನಡಕ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಡಿ.ಸಿ.ಎಫ್ ಗಳಾದ ಸಭ್ಯಶ್ರೀ, ವಿರಾಜ್ ಶ್ರೀಕಾಂತ್ ಸೋಮಸುಂದರ್, ಶುಭಂ ಸಿಂಗ್ ತನ್ವರ್, ಮರಿಸ್ವಾಮಿ, ಎ.ಸಿ.ಎಫ್ ಗಳಾದ ಪವನ್ ಕುಮಾರ್, ರುದ್ರೇಶ್, ಸಂದೀಪ್, ಮಹಾಲಕ್ಷ್ಮಿ, ವಾಸು, ತಹಶೀಲ್ದಾರ್ ಬಸವರಾಜು, ಅನಂತರಾಮ್ ಸೇರಿದಂತೆ ಇತರರು ಇದ್ದರು.