Home ಜಿಲ್ಲೆ ಕಲಬುರಗಿ ನವೀನ ತಂತ್ರಜ್ಞಾನ ಅಳವಡಿಸಿ ಕೊಳ್ಳಲು ಪ್ರಾಧ್ಯಾಪಕರಿಗೆ ಸುರೇಶ ಜಂಗೆ ಸಲಹೆ

ನವೀನ ತಂತ್ರಜ್ಞಾನ ಅಳವಡಿಸಿ ಕೊಳ್ಳಲು ಪ್ರಾಧ್ಯಾಪಕರಿಗೆ ಸುರೇಶ ಜಂಗೆ ಸಲಹೆ

ಜೇವರ್ಗಿ : ಅಧ್ಯಾಪಕರು ತಮ್ಮ ವೃತ್ತಿಯಲ್ಲಿ ಬೋಧನಾ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ನವೀನ ತಂತ್ರಜ್ಞಾನ ಬಳಸಿಕೊಂಡು ವೃತ್ತಿಪರ ನಡೆವಳಿಕೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಗ್ರಂಥಪಾಲಕರು ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರಾದ ಡಾ. ಸುರೇಶ ಜಂಗೆ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ “ಅಕಾಡೆಮಿ ಉತ್ಕøಷ್ಟತೆಗಾಗಿ ಸಾಮಥ್ರ್ಯ ನಿರ್ಮಾಣ” ಶಿರ್ಷೀಕೆಯಲ್ಲಿ ಆಯೋಜಿಸಿದ್ದ ಪ್ರಾಧ್ಯಾಪಕ ರಿಗಾಗಿ ಒಂದು ವಾರದ ‘ಅಧ್ಯಾಪಕರ ಅಭಿವೃದ್ದಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ, ‘ಕಾರ್ಯಕ್ಷಮತೆ ಆಧಾರಿತ ಸ್ವಯಂ ಮೌಲ್ಯ ಮಾಪನ ವರದಿ ತಯಾರಿಕೆ’ ವಿಷಯದ ಕುರಿತು ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲೆ ಡಾ.ಶಾಂತಾ ಅಸ್ಟಿಗೆ ಮಾತನಾಡುತ್ತ, ಅಧ್ಯಾಪಕರು ಉತ್ತಮ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಸಂಶೋಧನಾ ಮನೋಭಾವ ರೂಢಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯುಏಸಿ ಸಹ ಸಂಯೋಜಕ ಡಾ. ರವೀಂದ್ರ ಸ್ವಾಗತಿಸಿದರು. ಸಂಯೋಜಕ ಡಾ. ಸಂದೀಪ ತಿವಾರಿ ಪ್ರಾಸ್ತಾವಿಕ ಮಾತನಾಡಿ ದರು. ತೇಜಶ್ವಿನಿ ಪ್ರಾರ್ಥಿಸಿದರು. ಕನ್ನಡ ಅಧ್ಯಾಪಕ ಭೀಮಣ್ಣ ನಿರೂಪಿಸಿದರು. ಸಿಬ್ಬಂದಿ ಕಾರ್ಯದರ್ಶಿ ಡಾ. ಖಾಜಾವಲಿ ಈಚನಾಳ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಹಿರಿಯ ಪ್ರಾಧ್ಯಾಪಕರಾದ ಡಾ. ರಾಭಿಯಾಬೇಗಂ, ಡಾ. ಸಂತೋಷ್ ಕುಮಾರ್, ಡಾ. ನಾಗಣ್ಣ ಕಿಲಾಡಿ, ಡಾ. ಎನ್ ಜಿ ಶ್ರೀಧರ್, ಖುತೇಜಾ ನಸ್ರಿನ್, ಡಾ. ಅಶೋಕ್ ಹೋಳ್ಕರ್, ಡಾ. ರೂಪಾ ಕುಲಕರ್ಣಿ, ಡಾ. ಮಂಜುಳಾ ವಿ. ಪಿ, ಡಾ. ಶಿಲ್ಪಾ ಜೆ. ಡಾ.ಶರಣಪ್ಪ ಗುಂಡಗುರ್ತಿ, ಕುಪೇಂದ್ರ ರಾಠೋಡ್, ಡಾ. ತಿಪ್ಪಣ್ಣ ವಗ್ದಾಳ, ಡಾ. ಶಿವಕುಮಾರ್ , ಡಾ.ಹೊನ್ನೂರ್ ಸ್ವಾಮಿ ಡಾ. ಮೋಹನ್ ಬೈಲ್ ಪತ್ತಾರ್,
ಶ್ರೀ ಮತಿ ಫುಲಾವತಿ ಜಲ್ದೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು