Home ಜಿಲ್ಲೆ ಜಾನುವಾರಗಳು ದಿಢೀರ ಸಾವು

ಜಾನುವಾರಗಳು ದಿಢೀರ ಸಾವು

ಲಕ್ಷೆ÷್ಮÃಶ್ವರ,ಆ೨೬ : ತಾಲೂಕಿನ ಮುನಿಯನತಾಂಡಾದಲ್ಲಿ ಮಂಗಳವಾರ ಇದ್ದಕಿದ್ದಂತೆ ಸರಣಿ ಜಾನುವಾರುಗಳ ಸಾವು ಸಂಭವಿಸುತ್ತಿದ್ದು, ಈ ಘಟನೆಯಿಂದ ಇಡಿ ಗ್ರಾಮವೇ ತಲ್ಲಣಗೊಂಡಿದೆ.

ಮುನಿಯನತಾAಡಾದಲ್ಲಿ ೩೦೦ ಕ್ಕೂ ಹೆಚ್ಚು ದೇಶಿಯ ಆಕಳು ಮತ್ತು ಎಮ್ಮೆಗಳು ಇದ್ದು ಪ್ರತಿನಿತ್ಯದಂತೆ ಸೋಮುವಾರ ಸಾಯಂಕಾಲ ಜಮಿನೊಂದರಲ್ಲಿ ಮೇಯ್ದು ಬಂದಿದ್ದು, ಮಧ್ಯರಾತ್ರಿಯ ನಂತರ ಇದ್ದಕಿದ್ದಂತೆ ಅಸ್ವಸ್ಥಗೊಂಡಿವೆ. ಇದನ್ನು ಕಂಡ ಜಾನುವಾರುಗಳ ಮಾಲಿಕರು ಭಯಭೀತಗೊಂಡು ಬೆಳ್ಳಿಗ್ಗಿನ ಜಾವ ಪಶುವೈದ್ಯ ಅಧಿಕಾರಿ ಗೆ ಸುದ್ದಿಯನ್ನು ತಲುಪಿಸಿದ್ದಾರೆ. ಕೂಡಲೇ ಅಂಬುಲೆನ್ಸ್ ಸಹಿತಿ ಗ್ರಾಮಕ್ಕೆ ಬಂದು ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ರೋಗ ನಿರೋಧಕ ಚುಚ್ಚುಮದ್ದು ಮತ್ತು ಸಲೈನದ ನೀಡಿದ್ದಾರೆ.

ಆದರೆ ಬಿಸಿಲೆರುತ್ತಿದ್ದಂತೆಯೇ ಒಂದೊAದೇ ಜಾನುವಾರುಗಳು ಸಾವನ್ನಪ್ಪತೊಡಗಿವೆ. ಮದ್ಯಾಹ್ನ ೨ ಗಂಟೆ ಸುಮಾರಿಗೆ ಹತ್ತಕ್ಕು ಹೆಚ್ಚು ಜಾನವಾರುಗಳು ಸಾವು ಬದುಕಿನ ಹೋರಾಟದಲ್ಲಿದ್ದರೆ, ಎರಡು ಆಕಳುಒಂದು ಎಮ್ಮೆ ತೀವ್ರ ಉಸಿರಾಟದ ತೊಂದರೆಯಿAದ ಸಾವನಪ್ಪಿವೆ.

ಜಾನುವಾರುಗಳ ಸರಣಿ ಸಾವಿನ ಸುದ್ದಿಯನ್ನು ಪಶುವೈದ್ಯಕಿಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೆ ತಂದಿದ್ದು ಕೂಡಲೇ ಅವರು ವೈದ್ಯರು ಹಾಗೂ ಸಿಬ್ಬಂದಿ ತಂಡವನ್ನು ಗ್ರಾಮಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಳುಹಿಸಿದ್ದಾರೆ.

ಈ ಜಾನುವಾರುಗಳ ಸರಣಿ ಸಾವಿನ ಬಗ್ಗೆ ಪ್ರತಿಕ್ರಿಯಿಸ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ನಿಂಗಪ್ಪ ಓಲೆಕಾರ ಅವರು ಬಹುತೇಕ ಜಾನುವಾರುಗಳು ಕ್ರಿಮಿನಾಶಕ ಸಿಂಪಡನೆ ಮಾಡಿರುವ ಹುಲ್ಲು ಅಥವಾ ಗೋವಿನ ಜೋಳವನ್ನು ತಿಂದಿರುವ ಶಂಕೆ ಇದ್ದು ಜಾನುವಾರುಗಳ ಮರಣೊತ್ತರ ಪರೀಕ್ಷೆಯ ನಂತರೆ ನಿಖರವಾದ ಕಾರಣ ತಿಳಯಲಿದೆ ಎಂದಿದ್ದಾರೆ.

ಪರಿಹಾರಕ್ಕೆ ಆಗ್ರಹ.

ಜಾನುವಾರುಗಳನ್ನು ಕಳೆದುಕೊಂಡ ಮಾಲಿಕರಿಗೆ ಸರ್ಕಾರ ಕನಿಷ್ಟ ೩೦ ಸಾವಿರ ರೂ ಗಳ ಪರಿಹಾರ ಧನ ನೀಡುವಂತೆ ಮುಖಂಡ ನೂರಪ್ಪ ಲಮಾಣಿ ಆಗ್ರಹಿಸಿದ್ದಾರೆ.