Home ಮುಖಪುಟ ಸುದ್ದಿ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಲಕ್ನೋ,ಜೂ.೧೨- ಆರೆಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಬೋಗಿಯ ಕಿಟಕಿ ಗಾಜು ಒಡೆದಿರುವ ಘಟನೆ ನಡೆದಿದೆ, ಬೋಗಿಯ ಎದುರು ಭಾಗದಲ್ಲಿ ಕುಳಿತಿದ್ದ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ

ರಾತ್ರಿ ಚಲಿಸುತ್ತಿದ್ದ ರೈಲಿನ ಮೇಲೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ.ಆರೆಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ದೆಹಲಿಗೆ ಹೋಗುವ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ನ ಕಿಟಕಿ ಗಾಜು ಹಾನಿಗೊಳಗಾಗಿದೆ.

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ತುಂಡ್ಲಾ ಜಂಕ್ಷನ್‌ನಲ್ಲಿ ರೈಲು ನಿಂತ ನಂತರ ಮತ್ತೆ ಪ್ರಯಾಣ ಆರಂಭಿಸಿತು ಎಂದು ಸರ್ಕಾರಿ ರೈಲ್ವೆ ಪೊಲೀಸ್ ಇನ್ಸ್‌ಪೆಕ್ಟರ್ ಶೇರ್ ಸಿಂಗ್ ತಿಳಿಸಿದ್ದಾರೆ.

ನಿನ್ನೆ ಸಂಜೆ ೭.೨೦ ರ ಸುಮಾರಿಗೆ ಕಾನ್ಪುರದಿಂದ ದೆಹಲಿಗೆ ಹೋಗುವ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ಫಿರೋಜಾಬಾದ್ ಜಿಲ್ಲೆಯ ಮೂಲಕ ಹಾದುಹೋಗುವಾಗ ಮತ್ತು ಮಖನ್‌ಪುರ ನಿಲ್ದಾಣವನ್ನು ತಡೆರಹಿತವಾಗಿ ದಾಟಿದಾಗ ವೇಗವಾಗಿ ಬರುತ್ತಿದ್ದ ರೈಲಿನ ಇ-೧ ಕೋಚ್‌ನ ಗಾಜಿಗೆ ಕಲ್ಲು ತಗುಲಿ ಗಾಜು ಹಾನಿಗೊಳಗಾಗಿದೆ ಎಂದು ಹೇಳಿದ್ದಾರೆ

‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಕಲ್ಲು ತೂರಾಟ ನಡೆಸಿದ ಅದೇ ಕೋಚ್‌ನಲ್ಲಿದ್ದರು ಮತ್ತು ಕಿಟಕಿ ಗಾಜು ಹಾನಿಗೊಳಗಾಗಿದೆ. ಮೋಹನ್ ಭಾಗವತ್ ಕೋಚ್‌ನ ಇನ್ನೊಂದು ಬದಿಯಲ್ಲಿ ಕುಳಿತಿದ್ದರು ಹೀಗಾಗಿ ಅವರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ

ಘಟನೆಯ ನಂತರ ಆಗ್ರಾ ವಲಯದ ಎಡಿಜಿ ಎಸ್‌ಕೆ ಭಗತ್ ಮತ್ತು ಡಿಐಜಿ ಆಗ್ರಾ ಶ್ರೇಣಿಯ ಶೈಲೇಶ್ ಪಾಂಡೆ ಫಿರೋಜಾಬಾದ್‌ನಲ್ಲಿ ಸ್ಥಳಕ್ಕೆ ತಲುಪಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ

ಕಲ್ಲು ಎಸೆದ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ ಮತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಲಾಗುವುದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಮತ್ತು ಮೊದಲ ಎಸಿ ಕೋಚ್‌ನ ಹೊರಗಿನ ಗಾಜಿನ ಫಲಕ ಮಾತ್ರ ಬಿರುಕು ಬಿಟ್ಟಿದೆ” ಎಂದು ತಿಳಿಸಿದ್ದಾರೆ

ಫಿರೋಜಾಬಾದ್ ಎಸ್‌ಎಸ್‌ಪಿ ಆದಿತ್ಯ ಲಾಂಘೆ ಪ್ರತಿಕ್ರಿಯೆ ನೀಡಿ ಆರೆಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ದೆಹಲಿಗೆ ತೆರಳುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಸಂಬಂಧಿಸಿದ ಕಲ್ಲು ತೂರಾಟದ ಘಟನೆಯ ಬಗ್ಗೆ ಒಬ್ಬ ವ್ಯಕ್ತಿಯನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ

ರೈಲು ಫಿರೋಜಾಬಾದ್‌ನ ರಸೂಲ್‌ಪುರ ಮತ್ತು ದಕ್ಷಿಣ ಪೊಲೀಸ್ ಠಾಣೆಯ ಗಡಿಯಲ್ಲಿ ಪ್ರದೇಶವನ್ನು ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ರೈಲು ಸಂಖ್ಯೆ ೧೨೦೦೩ ಕನೂರ್‍ನಿಂದ ದೆಹಲಿಗೆ ಚಲಿಸುತ್ತಿತ್ತು ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅದರಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು’ ಎಂದು ತಿಳಿಸಿದ್ದಾರೆ