
ಕಲಬುರಗಿ,ಜೂ.12-ನಗರದ ಜಿಮ್ಸ್ ಆಸ್ಪತ್ರೆಯ 10ನೇ ಮಹಡಿ ಆಡಿಟೋರಿಯಂನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಪ್ರಾಂಶುಪಾ ಡಾ.ಅಜಯ್ ಕುಮಾರ ಜಿ.ಅವರು ಮಾತನಾಡುತ್ತ ಮಾದಕ ವ್ಯಸನ ಆರೋಗ್ಯಕ್ಕೆ ಹಾನಿಕರ ನಿಕೋಟಿನ್ ರಾಸಾಯನಿಕ ದ್ರವ್ಯ ಸೇವನೆಯಿಂದ ಜೀವಕ್ಕೆ ಹಾನಿ. ತಂಬಾಕು ಮತ್ತು ಧೂಮಪಾನದಿಂದ ದೂರವಿರಬೇಕೆಂದು ಎಂದು ಯು ಜಿ/ಪಿ ಜಿ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಗುಲ್ಬರ್ಗಾ ವೈದ್ಯಕೀಯ ವಿಭಾಗ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರಿಯ ಆರೋಗ್ಯ ಅಭಿಯಾನ ಮತ್ತು ರಾಷ್ಟ್ರಿಯ ಬಾಯಿ ಅರೋಗ್ಯ ಕಾರ್ಯಕ್ರಮ, ದಂತ ವಿಭಾಗ ಜಿಮ್ಸ್ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂಬಾಕು ತ್ಯಜಿಸುವದರಿಂದ ತಂಬಾಕು ದುಶ್ಚಟದಿಂದಾಗುವ ಸಾವನ್ನು ಸುಲಭವಾಗಿ ತಡೆಗಟ್ಟಬಹುದು ತಂಬಾಕು ಸೇವನೆಯಿಂದ 25000 ಭಾರತೀಯರು ಪ್ರತಿ ದಿನ ಸಾಯುತ್ತಿದ್ದಾರೆ ಹತ್ತರಲ್ಲಿ ಒಂದು ಸಾವು ತಂಬಾಕಿನಿಂದ ಉಂಟಾಗುತ್ತದೆ ಎಂದು ಹೇಳಿದರು.
” ನಿಕೋಟಿನ್ ಮತ್ತು ತಂಬಾಕು ವ್ಯಸ್ನವನ್ನು ಎದುರಿಸುವ ಮನವಿಯನ್ನು ಮರೆಮಾಚುವುದು” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತಾಡಿದರು.
ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಕುಮಾರ ಸಿ.ಆರ್. ಅವರು ಮಾತನಾಡುತ್ತ. ಪ್ರತಿಯೊಬ್ಬ “ಆರೋಗ್ಯ ಕಾರ್ಯಕರ್ತನು ನಮ್ಮ ಸಮಾಜವನ್ನು ತಂಬಾಕು ಹಾಗೂ ತಂಬಾಕು ವ್ಯಸನಗಳ ಉತ್ಪನ್ನದಿಂದ ಮುಕ್ತ ಮಾಡಲು ರಾಯಭಾರಿಯಾಗಿ ಕಾರ್ಯನಿರ್ವಹಿಸಬೇಕು”. ಸರಕಾರ ಅವುಗಳ ಉತ್ಪಾದನೆಯನ್ನು ನಿಬರ್ಂದಿಸಿಬೇಕು ಎಂದು ತಿಳಿಸಿದರು.
ಜಿಮ್ಸ್‍ನ ಜಿಲ್ಲಾ ಶ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ.ರುಖೀಯ ಅಸ್ನಾ ರಬಾ, ರವರು ತಂಬಾಕು ಹಾಗೂ ಅದರ ಉತ್ಪನ್ನಗಳ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಅಲ್ ಬದರ್ ಡೆಂಟಲ್ ಕಾಲೇಜು ಪ್ರಾಂಶುಪಾಲ ಡಾ.ಸೈಯ್ಯದ್ ಝಕಾಉಲ್ಲಾಹ ಅವರು ತಂಬಾಕು ಮತ್ತು ನಿಕೋಟಿನ್ ಉದ್ಯಮಿಗಳ ಆಕರ್ಷಕ ಉತ್ಪನ್ನಗಳ ಹಿಂದಿರುವ ಕರಾಳ ಉದ್ದೇಶಗಳ ಬಗ್ಗೆ ಅರಿವು ಮೂಡಿಸಿದರು. ದಂತ ವಿಭಾಗದ ಮುಖ್ಯಸ್ಥರಾದ ಡಾ.ಅರ್ಚನಾ ಎಸ್. ರವರು ಕಾರ್ಯಕ್ರಮದ ಪ್ರಾಸ್ತವಿಕ ನುಡಿಯಲ್ಲಿ ದಂತ ವಿಭಾಗದಲ್ಲಿ ಮಾಡುವ ಓiಛಿoಣiಟಿe ಖeಠಿಟಚಿಛಿemeಟಿಣ ಖಿheಡಿಚಿಠಿಥಿ ಹಾಗೂ ತಂಬಾಕು ವ್ಯಸನಿಗಳಿಗೆ, ವ್ಯಸನ ಮುಕ್ತಗೊಳಿಸಲು ತಿಂಗಳಿಗೆ ಸುಮಾರು 200-300 ವ್ಯಕ್ತಿಗಳಿಗೆ ಸಮಾಲೋಚನೆ ಮಾಡಲಾಗುವದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಮನೋಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಪ್ರಭುಕಿರಣ ಗೋಗಿ,” ನಿಕೋಟಿನ್ ಮಾನವನ ಮೆದುಳನ್ನು ದುರ್ಬಳಕೆ ಮಾಡಿಕೊಂಡು ಹೇಗೆ ವ್ಯಸನಿಯನ್ನಾಗಿ ಮಾಡಬಹುದು” ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸವನ್ನು ನೀಡಿದರು.
ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸುಜಾತಾ ಪಾಟೀಲ್, ಅವರು ” ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಅಔಖಿPಂ ಕಾಯ್ದೆ” ಬಗ್ಗೆ ತಿಳಿಸಿಕೊಟ್ಟರು.
ವಿಶ್ವ ತಂಬಾಕು ರಹಿತ ದಿನಾಚರಣೆ ಮೇ-31, 2026 ಅಂಗವಾಗಿ ಜೂನ್-2, 2026 ರಂದು ಜಿಲ್ಲಾ ಪಂಚಾಯತ, ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿರವರ ಸಂಯೋಗದೊಂದಿಗೆ ಜಿಲ್ಲಾ ಆಸ್ಪತ್ರೆಯ ಆವರಣದಿಂದ ಪ್ರಾರಂಭಿಸಿ, ಜಗತ್ ವೃತ್ತದವರೆಗೆ ತಂಬಾಕು ನಿಷೇಧ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ವೈದ್ಯ & ಅರೆವೈದ್ಯಕೀಯ ವಿದ್ಯಾರ್ಥಿಗಳ ಪ್ರಭಾತ್ ಪೇರಿ ಮಾಡಲಾಗಿತ್ತು. ಮುಂದುವರೆದು, ದಿನಾಂಕ: 08.06.2026 ರಂದು ಜಿ¸ಮ್ಸ್, ಇSIಅ, ಊಏಇS, ಹಾಗೂ ಅಲಬದರ್ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಬಂಧ ಬರಹ ಹಾಗೂ ಬಿತ್ತಿ ಚಿತ್ರ (Posಣeಡಿ) ಪ್ರದರ್ಶನ ಸ್ಪರ್ದೆ ಆಯೋಜಿಸಲಾಯಿತು. ಅತ್ಯುತ್ತಮ 03 ಪ್ರದರ್ಶನ ಹಾಗೂ 03 ಪ್ರಬಂಧಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಜಯದೇವ ಆಸ್ಪತ್ರೆ ಲೈಸೆನ್ ಅಧಿಕಾರಿ ಡಾ.ಆರ್.ಎಸ್.ಗುಗವಾಡ, ಅಲ್ ಬದರ್ ಡೆಂಟಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಹರ್ಷದ್ ಹುಸೇನ್, ನಿಜಲಿಂಗಪ್ಪ ಡೆಂಟಲ್ ಲೇಜಿನ ಉಪ ಪ್ರಾಂಶುಪಾಲ ಡಾ.ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಡೆಂಟಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಉಮೇಶ ಅಲ್ಲದ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಕಾರ್ಯಕ್ರಮದಲ್ಲಿ ಜಿಮ್ಸ್ ವೈದ್ಯಕೀಯ ಉಪ ಅಧೀಕ್ಷಕರು, ಆಡಳಿತ ಅಧಿಕಾರಿಗಳು, ಎಲ್ಲಾ ವಿಭಾಗದ ಮುಖ್ಯಸ್ಥರು, ವೈದ್ಯಾಧಿಕಾರಿಗಳು, ಜಿಮ್ಸ್ ಹಾಗೂ 03 ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪಾಲ್ಗೋಂಡರು.
ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ರಹಿತ ದಿನದ ಬಿತ್ತಿ ಚಿತ್ರ ಬಿಡುಗಡೆಗೊಳಿಸಲಾಯಿತು. ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ತಂಬಾಕು ಮುಕ್ತ ಸಮಾಜ ಕಟ್ಟಲು ಪ್ರತಿಜ್ಞಾ ವಿಧಿ ಭೋದಿಸಲಾಯಿತು.ಕಾರ್ಯಕ್ರಮದಲ್ಲಿ ಡಾ|| ನಾಗರಾಜ ಬಿ. ಪಾಟೀಲ್, ಸ್ಥಾನಿಕ ವೈದ್ಯಾಧಿಕಾರಿಳು ಹಾಗೂ ಓಔಊP ನೋಡಲ್ ಆಫೀಸರ್ ಡಾ|| ರಾಜು ಬಿ. ರಾಂಪುರೆ ದಂತ ವಿಭಾಗದ ಸಹ ಪ್ರಾದ್ಯಾಪಕರಾದ ಡಾ|| ಅಶೋಕ ಸತ್ಯನಾರಾಯಣ, ಡಾ|| ಮೋಹನ ಬೀದಿಮನಿ, ಸಹಾಯಕ ಪ್ರಾದ್ಯಾಪಕರಾದ ವೀರಭದ್ರ ಕಲ್ಯಾಣಿ, ಸೋಷಿಯಲ್ ವರ್ಕರ್ ಆರತಿ ಧನಶ್ರೀ. ಜಿಲ್ಲಾ ಸೈಕ್ಯಾಟ್ರಿಕ್ ಕೋನ್ಸೆಲರ್ ಮಂಜುನಾಥ ಕಂಬಾಳಿಮಠ್ ಉಪಸ್ಥಿತರಿದ್ದರು.
ಮುಖ್ಯ ದಂತ ವೈದ್ಯಾಧಿಕಾರಿಗಳಾದ ಡಾ|| ಸಂಗಮ್ಮ ಕೆ. ತಿಪ್ಪಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು, ಡಾ|| ಅಮೃತಾ ದೇಶಪಾಂಡೆರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಡಾ|| ರಾಜು ಬಿ. ರಾಂಪುರೆ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.






















