Home ಜಿಲ್ಲೆ ಕಲಬುರಗಿ ಮೊಬೈಲ್ ಹ್ಯಾಕ್ ಮಾಡಿ 3.47 ಲಕ್ಷ ರೂ.ಸೈಬರ್ ವಂಚನೆ

ಮೊಬೈಲ್ ಹ್ಯಾಕ್ ಮಾಡಿ 3.47 ಲಕ್ಷ ರೂ.ಸೈಬರ್ ವಂಚನೆ

ಕಲಬುರಗಿ,ಜೂ.12-ಅಪರಿಚಿತ ಸೈಬರ್ ವಂಚಕನೊಬ್ಬ ವಾಟ್ಸಪ್ ಮೂಲಕ ಎಪಿಕೆ ಫೈಲ್ ಆರ್‍ಟಿಒ ಇ-ಚನಲ್ ಲಿಂಕ್ ಕಳುಹಿಸಿ ಮೊಬೈಲ್ ಫೋನ್ ಹ್ಯಾಕ್ ಮಾಡಿ ತಮ್ಮ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 3.47 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಸೈಬರ್ ವಂಚನೆ ಮಾಡಿದ್ದಾನೆ ಎಂದು ತಾಂಡಾ ನಿಗಮ ಮಂಡಳಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಪ್ರಹ್ಲಾದ ರಾಠೋಡ್ ಎಂಬುವವರು ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪ್ರಹ್ಲಾದ ರಾಠೋಡ್ ಅವರು ಕಚೇರಿಯಲ್ಲಿದ್ದಾಗ ಅವರ ವಾಟ್ಸಪ್‍ಗೆ ಇಲಾಖೆಯ ಮೋಹನ್ ರಾಠೋಡ್ ಎಂಬುವವರ ಮೊಬೈಲ್ ನಂಬರ್‍ನಿಂದ ಎಪಿಕೆ ಫೈಲ್ ಆರ್‍ಟಿಒ-ಇ ಚನಲ್ ಅಂತ ಬಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಆಗ ಪ್ಲಹ್ಲಾದ್ ರಾಠೋಡ್ ಅವರ ಮೊಬೈಲ್ ಹ್ಯಾಕ್ ಆಗಿ ಅದೇ ದಿನ ಇವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 3,47,346 ರೂ.ಹಣ ಹಂತ ಹಂತವಾಗಿ ಕಡಿತವಾಗಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.