ಕಲಬುರಗಿ: ನಗರದ ದಕ್ಷಿಣಕ್ಷೇತ್ರದ ಪಾಲಿಕೆ ವಾರ್ಡುಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸಿ ಹಾಗೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮೇಲಿನ ಎಫ್‍ಐಆರ್ ರದ್ದು ಪಡಿಸಲು ಆಗ್ರಹಿಸಿ ದಕ್ಷಿಣ ಮಂಡಲ ಬಿಜೆಪಿ ವತಿಯಿಂದ ನಗರದ ರಾಮಮಂದಿರÀ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಮಂಡಲ ಅಧ್ಯಕ್ಷ ಶ್ರೀನಿವಾಸ ದೇಸಾಯಿ,ಮಹಾದೇವ ಬೆಳಮಗಿ,ಶಿವರಾಜ ಪಾಟೀಲ ರದ್ದೇವಾಡಗಿ,ಸಿದ್ದಾಜಿ ಪಾಟೀಲ,ವಿಶಾಲ ದರ್ಗಿ, ಶಿವಯೋಗಿ ನಾಗನಹಳ್ಳಿ,ಬಸವರಾಜ ಪಾಟೀಲ ಬಿರಾಳ,ಮಲ್ಲು ಉದನೂರ,ರಾಜು ವಾಡೇಕರ್,ಮಲ್ಲಿಕಾರ್ಜುನ ಜಿನಕೇರಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು.