Home ಜಿಲ್ಲೆ ಕಲಬುರಗಿ ಕೆ.ಎಚ್.ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರನ್ನಾಗಿ ಮಾಡಿ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟ...

ಕೆ.ಎಚ್.ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರನ್ನಾಗಿ ಮಾಡಿ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟ ಆಗ್ರಹ

ಕಲಬುರಗಿ,ಜೂ.12-ಅತ್ಯಂತ ಹಿರಿಯ ಶಾಸಕರಾದ ಕೆ.ಎಚ್. ಮುನಿಯಪ್ಪ ರವರಿಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನಾಗಿ ಆಯ್ಕೆ ಮಾಡುವಂತೆ ಒತ್ತಾಯಿಸಿ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕೆ.ಎಚ್.ಮುನಿಯಪ್ಪ ನವರು ಸುಮಾರು 7 ಬಾರಿ ಸಂಸದರಾಗಿ, 2 ಬಾರಿ ಕೇಂದ್ರ ಸಚಿವರಾಗಿ ಮತ್ತು ಕಾಂಗ್ರೇಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಒಳ್ಳೆಯ ಆಡಳಿತ ನೀಡಿದ ಕೆ.ಎಚ್. ಮುನಿಯಪ್ಪ ನವರಿಗೆ ಸಮಾಜ ಕಲ್ಯಾಣ ಸಚಿವರಾಗಿ ಆಯ್ಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿ 108 ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯೆತ ಜಾತಿಯಾದ ಮಾದಿಗ ಜಾತಿ ಎಂಬುವದು ಎಲ್ಲಾ ಆಯೋಗದ ವರದಿಯಲ್ಲಿ ಗಮನಿಸಿದ್ದೀರಿ ಆದರೆ, ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗರಿಗೇಕೆ ಅನ್ಯಾಯ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ಸರಕಾರ ಮಾತೆತ್ತಿದ್ದರೆ, ಸರವರಿಗೂ ಸಮಪಾಲು, ಸಮ ಬಾಳು ಮತ್ತು ಸಂವಿಧಾನ ಹಾಗೂ ಡಾ.ಬಾಬಾ ಸಹೇಬ ಅಂಬೇಡ್ಕರ್ ರವರ ಸಿದ್ಧಾಂತಗಳನ್ನು ಹೇಳುತ್ತದೆ. ರಾಜ್ಯದಲ್ಲಿ ಎಲ್ಲಾ ಜಾತಿ ಜನಾಂಗಳಿಗೆ 1, 2, 3, 4 ಜನರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ನೀಡಿದೆ. ಮಾದಿಗ ಸಮಾಜಕ್ಕೆ ಒಂದೇ ಸಚಿವಸ್ಥಾನ ನೀಡಿ ಸಮಾಜಕ್ಕೆ ಅಗೌರವ ತೊರಲಾಗುತ್ತಿದೆ. ಮತ್ತು ಬಂಜಾರಾ ಹಾಗೂ ಭೂವಿ ವಡ್ಡರ ಸಮಾಜಕ್ಕೆ ಸಂಪೂಟದಲ್ಲಿ ಯಾವದೇ ಸ್ಥಾನ ಮಾನ ನೀಡದೇ, ಸರ್ವಜನಾಂಗಕ್ಕೆ ಸಮಪಾಲು ಎಂದು ಹೇಳುತ್ತಿರುವ ಕಾಂಗ್ರೇಸ್ ಸರಕಾರದ ನಡೆ ಸುಳ್ಳೆಂಬುವದು ಸಾರ್ವಜನಿಕರಿಗೆ ಗೊತ್ತಿರುವ ಸಂಗತಿಯಾಗಿದೆ.
ಆದ್ದರಿಂದ ರಾಜ್ಯದಲ್ಲಿ ಬಹು ಸಂಖ್ಯಾತರಾದ ಮಾದಿಗ ಸಮಾಜದ ಹಿರಿಯ ನಾಯಕರಾದ ಹಿರಿಯ ಶಾಸಕರಾದ ಕೆ.ಎಚ್. ಮುನಿಯಪ್ಪ ನವರಿಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಆಯ್ಕೆ ಮಾಡಬೇಕೆಂದು
ಆಗ್ರಹಿಸಿದರು.
ಒಂದು ವೇಳೆ ನಿರ್ಲಕ್ಷ ವಹಿಸ್ಸಿದ್ದೇ ಆದರೆ, ಮಾದಿಗರ ಹೋರಾಟಗಳನ್ನು ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಸಂಸ ಕಾರ್ಯಾಧ್ಯಕ್ಷ ದಶರಥ ಕಲಗುರ್ತಿ, ಮಾದರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಜಿನ್ನಕೇರಿ, ಬಾಬು ಜಗಜೀವನ ರಾಮ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ರಾಜು ಎಸ್.ಕಟ್ಟಿಮನಿ, ಮಾದಿಗ ದಂಡೋರಾ ನಗರಾಧ್ಯಕ್ಷ ರಮೇಶ ವಾಡೇಕರ, ಕರ್ನಾಟಕ ರಾಜ್ಯ ಮಾದಿಗ ಸಮಾಜದ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ನಾಟೀಕರ, ಸಚಿನ್ ಕಟ್ಟಿಮನಿ, ಸುಂದರ ಸಾಗರ, ಮಲ್ಲು ಕೊಡಂಬಲ್, ಬಸವರಾಜ ಕಾಳಗಿ, ಬಸವರಾಜ ಬಾಡ್ಯಾಳ, ರಮಾಕಾಂತ ಪೂಜಾರಿ, ರಾಜು ಅತನೂರ, ಶ್ರೀನಿವಾಸ ರಾಮನಾಳಕರ, ಮಂಜುನಾಥ ಲೇಗಂಟಿ, ಸಿದ್ದಲಿಂಗ ಕಟ್ಟಿಮನಿ, ಸುನೀತಾ ಕೊಲ್ಲೂರ, ಪೃಥ್ವಿವಿರಾಜ ಎಸ್. ರಾಂಪೂರ, ಲಕ್ಕಪ್ಪ ಜವಳಿ, ಬಸವರಾಜ ಜವಳಿ,ರಾಜು ವಾಡೇಕರ, ಲಿಂಗರಾಜ ತಾರಫೈಲ, ಅಂಬಾರಾಯ ಬೆಳಕೋಟಿ, ಪ್ರದೀಪ ಭಾವೆ, ಅನೀಲ ಬೆಳಕೇರಿ, ಅಮೃತ ಸಾಗರ, ಕೃಷ್ಣ ತಂಗಡಗಿ, ರಂಜೀತಕುಮಾರ ಮುಲಿಮನಿ, ಅಭಿ ಹಾದಿಮನಿ, ಮಹೇಶ ಮೂಲಿಮನಿ, ಪ್ರಹಲ್ಲಾದ ಹಡಗಿಲ, ಮನೋಹರ ಬೀರನೂರ, ಗೋಪಾಲ ನಾಟಿಕಾರ, ಮಂಜುನಾಥ ನಾಲವಾರ, ಮಂಜುನಾಥ ಸಿಂಗೆ, ಕಾಶೀನಾಥ ಹಾದಿಮನಿ, ಲೋಕೇಶ ವಾಜಿ, ಮಲ್ಲಿಕಾರ್ಜುನ ದೊಡ್ಡಮನಿ, ಪರಶುರಾಮ ನಾಟೀಕರ, ಮಹಾದೇವಪ್ಪ ಕವಳೆ, ಮಲ್ಲಿಕಾರ್ಜುನ ಚಟನಳ್ಳಿ, ಅಶೋಕ ಜಗದಾಳೆ, ಜಾನಪ್ಪ ಶಿವನೂರ, ಸುಶೀಲ ಕಾಂಬಳೆ, ಹಣುಮಂತ ಹೋಸಮನಿ, ಹಣುಮಂತ ಅಂಕಲಗಿ, ಸಂಜುಕುಮಾರ ಮಾಳಗಿ, ಸಿದ್ರಾಮ ಅವರಳ್ಳಿ, ಅಮರ ಕಲ್ಯಾಣಕರ, ದಶರಥ ಪಾಲದಕರ, ಪ್ರೇಮ ಹಿಪ್ಪರಗಿ, ಅರುಣ ಧಮ್ಮುರಕರ, ಗುಂಡಪ್ಪ ಸಿರುಡೋನ, ಸುಶೀಲ ಕಾಂಬಳೆ, ಧರ್ಮಣ್ಣಾ, ಮಲ್ಲು ಸರಡಗಿ, ಪೂಥವಿರಾಜ, ಚಂದಪ್ಪಾ ಕಟ್ಟಿಮನಿ, ಸಂಜು ಕಟ್ಟಿಮನಿ, ಬಿ.ಟಿ. ಸಾಗರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.