Home ಮುಖಪುಟ ಸುದ್ದಿ ಸ್ಟಿಂಗ್ : ನನ್ನ ವಿರುದ್ಧ ಅನುಮಾನ ಸೃಷ್ಟಿಸಲು ಹುನ್ನಾರ

ಸ್ಟಿಂಗ್ : ನನ್ನ ವಿರುದ್ಧ ಅನುಮಾನ ಸೃಷ್ಟಿಸಲು ಹುನ್ನಾರ

ಹಾಸನ ಅ ೨೪ ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಟಿಂಗ್ ಆಪರೇಷನ್ ಬಗ್ಗೆ ನಿನ್ನೆ ಮಾತನಾಡಿದ್ದಾರೆ.ಖಾಸಗಿ ಚಾನೆಲ್‌ನ ಒಬ್ಬರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸ್ಟಿಂಗ್ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಇಷ್ಟಾದರೂ ಈ ಸ್ಟಿಂಗ್ ಬಗ್ಗೆ ತಮ್ಮ ವಿರುದ್ಧ ಅನುಮಾನ ಬರುವ ರೀತಿಯಲ್ಲಿ ವ್ಯವಸ್ಥಿತ ಹು ನ್ನಾರವನ್ನ ನಡೆಸಲಾಗುತ್ತಿದೆ ಎಂದು ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೂರಿದ್ದಾರೆ


ಹಾಸನದ ಮಾವಿಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ಪ್ರಸ್ತಾಪ ಆದ ಮೊದಲ ದಿನದಿಂದಲೇ ಗೃಹ ಸಚಿವರು ನಮ್ಮ ಪಕ್ಷದ ವಾರ್ ರೂಂನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ ಸರ್ಚ್ ವಾರೆಂಟ್ ಕೊಟ್ಟಿದ್ದಾರೆ ಅವರೇನು ಕ್ರೈಂ ಆಕ್ಟಿವಿಟಿಸ್‌ನಲ್ಲಿ ಇದ್ದಾರೆ ಎನ್ನುವ ರೀತಿ ಆಪಾದನೆ ಮಾಡಿದ್ದಾರೆ
ಅವರಿಗೆ ಬೇಕಾದ ಪೊಲೀಸರನ್ನು ನೇಮಕ ಮಾಡಿಕೊಂಡಿದ್ದಾರೆ ನಮ್ಮ ಕಾರ್ಯಕರ್ತರ ಸುತ್ತ ಸುತ್ತುತ್ತಿದ್ದಾರೆ ಇದು ಕುಮಾರಸ್ವಾಮಿ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ನಡೆಯುತ್ತಿರುವ ತನಿಖೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಯಾವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಸ್ಟಿಂಗ್ ಆಪರೇಷನ್‌ನನ್ನು ೨೦೨೩ ರಲ್ಲಿ ಏತಕ್ಕೆ ಮಾಡಿದರು.ಅವರನ್ನು ರಕ್ಷಿಸಲು ಸರ್ಕಾರವೇ ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ


ಸರ್ಚ್ ವಾರೆಂಟ್ ಹೆಸರಿನಲ್ಲಿ ನಮ್ಮ ವಾರ್ ರೂಂ ಹುಡುಗರ ಕುಟುಂಬದ ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕಿ ದಾಳಿ ಮಾಡುತ್ತಿದ್ದಾರೆ.ಭಯಬೀತಿ ವಾತಾವರಣ ಉಂಟು ಮಾಡಿ ಮಾಹಿತಿ ಪಡೆಯಲು
ಹೊರಟಿದ್ದೀರಿ.ಆ ವ್ಯಕ್ತಿಗಳು ಏಕೆ ಸ್ಟಿಂಗ್ ಆಪರೇಷನ್ ಮಾಡಿದ್ರು.ಅದರ ಬಗ್ಗೆ ಮುಖ್ಯಮಂತ್ರಿಗೆ, ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ.ಅದನ್ನೆಲ್ಲಾ ಮುಚ್ಚಿಟ್ಟಿ ನಮ್ಮನ್ನು ಬ್ಲಾಕ್‌ಮೇಲ್ ಮಾಡಲು ಹೊರಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು

ಮೊದಲಿನಿಂದಲೂ ತನಿಖೆ ದಾರಿ ತಪ್ಪಿಸುತ್ತಿದ್ದೀರಿ.ಸ್ಟಿಂಗ್ ಆಪರೇಷನ್ ಮಾಡಲು ಯಾರು ಪ್ರೇರಪಣೆ ಮಾಡಿದ್ರು.ನಮ್ಮ ಹುಡುಗರ ಮೊಬೈಲ್, ಲ್ಯಾಪ್‌ಟಾಪ್ ವಶಪಡಿಸಿಕೊಳ್ಳುತ್ತಿದ್ದೀರಿ.ನಮ್ಮ ಪಕ್ಷದದಿಂದಲೇ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎನ್ನುವ ರೀತಿ ಹುನ್ನಾರ ಮಾಡುತ್ತಿದ್ದೀರಿ.ಅದನ್ನು ಎದುರಿಸುವ ಶಕ್ತಿ ನನಗಿದೆ.ಅಷ್ಟು ಸುಲಭವಾಗಿ ಬಿಡಲ್ಲ ಹೋರಾಟ ಮಾಡುತ್ತೇವೆ.ಅವರು ಮುಚ್ಚಿ ಹಾಕಲು ಪ್ರಯತ್ನ ಮಾಡಿದಷ್ಟು ನಾವು ಹೋರಾಟ ಮಾಡುತ್ತೇವೆ.ಇದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದರು ಬಲಗೈ ಬಂಟ, ಎಡಗೈ ಬಂಟ ಓಡಿ ಹೋಗಿದ್ದಾರೆ ಎಂಬ ಸಚಿವ ಪ್ರೀಯಾಂಕ್ ಖರ್ಗೆ ಹೇಳಿಕೆ ಗೆ ಪ್ರತಿಕ್ರಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಯಾರು ಓಡಿ ಹೋಗಿದ್ದಾರೆ, ಯಾರು ಓಡಿ ಹೋಗಲು ಸಾಧ್ಯ.ಅವರ ಮೇಲೆ ಏನಿದೆ ಓಡಿ ಹೋಗಲು ಪ್ರಿಯಾಂಕ್ ಖರ್ಗೆ ಇದನ್ನೆಲ್ಲಾ ಏಕೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಗೊತ್ತಿದೆ.ಕೆಪಿಎಸ್‌ಸಿ ಹಗರಣದ ಬಗ್ಗೆ ಚರ್ಚೆ ಮಾಡಿದರಾ ಯಾವ ದಿಕ್ಕಿನಲ್ಲಿದೆ.ಪಿಡಿಓ, ಎಇಇ, ಪಶು ವೈದ್ಯಕೀಯ ಅಭ್ಯರ್ಥಿಗಳು, ಆರ್‌ಟಿಓ ಎಷ್ಟು ಪ್ರಕರಣಗಳು.ಯಾವುದೆಲ್ಲಿ ನೀವು ಸತ್ಯಾಂಶ ಹೊರಗೆ ತಂದಿದ್ದೀರಿ.ಅಲ್ಲೂ ಯಾರ ಸುತ್ತ ಸುತ್ತುತ್ತಿದ್ದೀರಿ.ಅದೇ ರೀತಿನಲ್ಲಿ ಇದನ್ನು ನಡೆದುತ್ತಿದ್ದೀರಾ.ಬಲಗೈ, ಎಡಗೈ ಅದೇನಿದೆ ತಗೊಂಡು ಬನ್ನಿ ನೋಡೋಣ ಎಂದು ಸವಾಲು ಹಾಕಿದರು ವಿಕ್ಕಿ ಸಾವಿನ ಪ್ರಕರಣದ ಬಗ್ಗೆ ಸಾಕ್ಷಿ ಕೊಡಲಿ ಎಂಬ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು ವೈಯುಕ್ತಿಕವಾಗಿ ನಾನು ಟೀಕೆ ಮಾಡುತ್ತಿಲ್ಲ.ನಡೆದಿರುವ ಘಟನೆ, ಅದನ್ನು ಯಾಕೆ ಮುಚ್ಚಿ ಹಾಕಿದ್ರು.ಯುಡಿಆರ್ ಏಕೆ ಮಾಡಿದ್ರು, ತನಿಖೆ ಏಕೆ ಮಾಡಲಿಲ್ಲ, ಮರಣೋತ್ತರ ಪರೀಕ್ಷೆ ಯಾಕೆ ಮಾಡಲಿಲ್ಲ ಅಸಹಜ ಸಾವಾಗಿದ್ರೆ ಏಕೆ ಮರಣೋತ್ತರ ಪರೀಕ್ಷೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು ಆ ಕುಟುಂಬಕ್ಕೆ ಹತ್ತು ಲಕ್ಷ ಕೊಡ್ತಿನಿ ಅಂಥ ಹೇಳಿ ಎರಡು ಲಕ್ಷ ಕೊಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.ಈ ಘಟನೆಯಿಂದ ಅವರು ಎಕ್ಸ್‌ಪೋಸ್ ಆಗುತ್ತಿದ್ದಾರೆ ಎಲ್ಲದಕ್ಕೂ ಸಾಕ್ಷಿ, ಸಾಕ್ಷಿ ಅಂಥ ನಮ್ಮನ್ನು ಕೇಳುವುದಾದರೆ ಪೊಲೀಸ್ ಇಲಾಖೆ ಬೇಕು ಎಂದು ಕಿಡಿಕಾರಿದರು

ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಲು ಪೊಲೀಸ್ ಇಲಾಖೆ ಬೇಕಾ ಏನಾದರೂ ಹೇಳಿದರೆ ಸಾಕ್ಷಿ ಕೊಡಿ ಅಂತೀರಾನಾನೇ ಸ್ಟಿಂಗ್ ಆಪರೇಷನ್ ಮಾಡಿದ್ದು ಅಂಥ ಹೇಳಿದ್ದರೂ ಸಾಕ್ಷಿ ಕೊಡಿ ನಮ್ಮನ್ನ ಕೇಳ್ತಾರೆ
ಇದು ತನಿಖೆ ಮಾಡುವ ವಿಧಾನನಾ ಸ್ಟಿಂಗ್ ಆಪರೇಷನ್ ಬಗ್ಗೆ ಗೃಹಸಚಿವರು ಬೋಲ್ಡ್ ಸ್ಟೆಪ್ ಎಲ್ಲಿ ತೆಗೆದುಕೊಂಡಿದ್ದಾರೆ.ಮುಚ್ಚಿ ಹಾಕುವ ಸ್ಟೆಪ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು

ಮೊದಲು ಯಾರನ್ನು ಅರೆಸ್ಟ್ ಮಾಡಿದ್ರು.ಮೊದಲ ದಿನದಿಂದಲೂ ಮುಚ್ಚಿ ಹಾಕುವ ಪ್ರಯತ್ನ ನಡಿತಿದೆ.ಕುಮಾರಸ್ವಾಮಿ ಅವರು ಮನೆಗು ಸುಳ್ಳು ಹೇಳ್ತಾರೆ ಅಂಥ ಹೇಳರ್ವೆ.ಸತ್ಯ ಹೇಳುವ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದೆ.ಬಹುಮತದ ಸರ್ಕಾರ ಇಲ್ಲದೆ ಇದ್ದರು, ಕಾಂಗ್ರೆಸ್ ಬೆಂಬಲ ಇಲ್ಲದೆ ಇದ್ದರು ಸಾಲಮನ್ನಾ ಮಾಡಿದೆ.ಸಾಲಮನ್ನಾ ಮಾಡಿ ತೋರ್ಸಿದ್ದೀನಿ ಎಂದರು
ಕುಮಾರಸ್ವಾಮಿ ಸಾರ್ವಜನಿಕವಾಗಿ ಮಾತನಾಡಿದ್ದನ್ನ ಮಾಡಿ ತೋರಿಸಿರುವ ಹಲವಾರು ಉಧಾಹರಣೆಗಳಿವೆ.ಮುಂದೆ ನೋಡೋಣ ಜನ ಯಾರನ್ನು ನಂಬ್ತಾರೆ ಅಂಥ ಎಂದು ಹೇಳಿದರು