Home ಮುಖಪುಟ ಸುದ್ದಿ ಸ್ಟಿಂಗ್ ಬಗ್ಗೆ ಏನನ್ನು ಕೇಳಬೇಡಿ

ಸ್ಟಿಂಗ್ ಬಗ್ಗೆ ಏನನ್ನು ಕೇಳಬೇಡಿ

ಬೆಂಗಳೂರು ಅ. ೨೪ ಸ್ಟಿಂಗ್ ಆಪರೇಷನ್ ಬಗ್ಗೆ ನನಗೇನು ಗೊತ್ತಿಲ್ಲ ಈ ಬಗ್ಗೆ ನಾನು ಮಾತನಾಡಲ್ಲ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದರು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾತನಾಡಿದ ಸಂದರ್ಭದಲ್ಲಿ ಸ್ಟೀಂಗ್ ಬಗ್ಗೆ ಕಾಂಗ್ರೆಸ್ ನಾಯಕರ ಮೌನ ದ ಬಗ್ಗೆ ಪ್ರತಿಕ್ರಿಯಿಸಿ ತನಿಖೆ ನಡೆಯುತ್ತಿರುವುದರಿಂದ ಏನು ಮಾತನಾಡಬೇಕು ದಯವಿಟ್ಟು ಸ್ಟಿಂಗ್ ಬಗ್ಗೆ ಕೇಳಬೇಡಿ ಎಂದು ಕೈ ಮುಗಿದರು.


ದಸರಾ ಗೆ ಹೆಚ್ಚುವರಿ ಉಸ್ತುವಾರಿ ಸಚಿವರ ನೇಮಕವನ್ನ ಸಮರ್ಥಿಸಿಕೊಂಡ ಅವರು ದಸರಾ ಚೆನ್ನಾಗಿ ಆಗಲಿ ಎಂದು ಹೆಚ್ಚುವರಿ ಸಚಿವರನ್ನ ನೇಮಕ ಮಾಡಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದರು ದಸರಾ ನಾಡ ಹಬ್ಬವಾದ್ದರಿಂದ ಸಿನಿಮಾ ಇಂಡಸ್ಟ್ರಿ ಸೇರಿದಂತೆ ಅನೇಕರನ್ನು ಆಹ್ವಾನಿಸಲಾಗಿದೆ. ಒಟ್ಟಿನಲ್ಲಿ ದಸರಾದಯಶಸ್ವಿಗೆ ಏನೆಲ್ಲ ಬೇಕು ಅದನ್ನೆಲ್ಲ ಮಾಡಲಾಗಿದೆ ಎಂದರು

ಸಿಎಂ ಪತ್ನಿ ಅವರು ಪೂಜಾ ವೇಳೆ ಭಾಗಿಯಾದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಹಿಂದೆ ಕುಮಾರಸ್ವಾಮಿ ಅವರ ಮನೆಯವರೂ ಅದನ್ನು ಮಾಡಿದ್ದಾರೆ. ಯಾವುದೂ ಮುಚ್ಚಿಹೋಗುವುದಿಲ್ಲ; ತಂತ್ರಜ್ಞಾನ ಮತ್ತು ಏ ಐ ಇದೆ, ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದರು ಮೈಸೂರು ದಸರಾದಲ್ಲಿ ಸಚಿವರನ್ನು ತಡೆದ ಬಗ್ಗೆ ಸಿಎಂ ತನಿಖೆಗೆ ಸೂಚಿಸಿದ್ದಾರೆ; ಸತ್ಯಾಂಶ ತನಿಖೆಯಿಂದ ತಿಳಿಯುತ್ತದೆ.ಸೋನಿಯಾ ಗಾಂಧಿ ಬಂದಾಗ ತನಗೂ ಹೀಗೇ ಆಗಿತ್ತು ಹೇಳಿದರು.

ದೆಹಲಿಯಲ್ಲಿ ನ.೧ ರಂದು ಮತಗಳ್ಳತನ ವಿರುದ್ಧ ಪ್ರತಿಭಟನೆಗೆ ಬುಲಾವ್ ಬಂದಿದೆ, ಆದರೆ ನವೆಂಬರ್ ೧ ಕನ್ನಡ ರಾಜ್ಯೋತ್ಸವವೂ ಆಗಿದೆ. ಜಿಲ್ಲೆಗಳಲ್ಲಿ ರಾಜ್ಯೋತ್ಸವಕ್ಕೂ ಪ್ರಾಮುಖ್ಯತೆ ನೀಡಬೇಕು. ಪ್ರತಿಭಟನೆಯಲ್ಲಿ ಭಾಗಿಯಾಗುವ ಬಗ್ಗೆ ಮುಂದೆ ತಿಳಿಸುತ್ತೇವೆ. ಎಂದು ಎಂಬಿ ಪಾಟೀಲ್ ಹೇಳಿದರು
ಎರಡನೇ ವಿಮಾನ ನಿಲ್ದಾಣ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿಗಳು ಹಾರೋಹಳ್ಳಿ ಬಗ್ಗೆ ಸಲಹೆ ನೀಡಿದ್ದು, ಅದರ ಪರಿಶೀಲನೆ ನಡೆಯುತ್ತಿದೆ. ಜಾಗಹುಡುಕುವ ಪ್ರಕ್ರಿಯೆಗಳು ಕೆಲವು ದಿನಗಳಲ್ಲಿ ಶುರುವಾಗಲಿವೆ ಎಂದರು.