Home ಜಿಲ್ಲೆ ಬೆಂಗಳೂರು ಮೇಲಾಗಣಿ ಗ್ರಾಮದಲ್ಲಿ ಶ್ರೀಕೃಷ್ಣನ ಮೆರವಣಿಗೆ

ಮೇಲಾಗಣಿ ಗ್ರಾಮದಲ್ಲಿ ಶ್ರೀಕೃಷ್ಣನ ಮೆರವಣಿಗೆ

ಮುಳಬಾಗಿಲು,ಸೆ,೧೫- ತಾಲೂಕಿನ ತ್ರೈತ ಸಿದ್ಧಾಂತ ಪ್ರಬೋಧ ಸೇವಾ ಸಮಿತಿಯಿಂದ ಮೇಲಗಣಿ ಗ್ರಾಮದಲ್ಲಿ ಶ್ರೀಕೃಷ್ಣ ಸ್ವಾಮಿಯ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.


ಸೆ.೪ ರಿಂದ ವೇದಿಕೆಯಲ್ಲಿ ಶ್ರೀ ಕೃಷ್ಣನ ಜನ್ಮದಿನದ ಅಂಗವಾಗಿ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ೯ ದಿನಗಳ ಕಾಲ ಪೂಜಿಸಲಾಯಿತು .ಇದೀಗ ೧೦ ನೇ ದಿನ ವಾದ ಭಾನುವಾರ, ಮಧ್ಯಾಹ್ನ ೨ ರಿಂದ ಸಂಜೆ ೫ ರವರೆಗೆ ನಗರದ ಬೀದಿಗಳಲ್ಲಿ ಭಕ್ತರು ಕೋಲಾಟಗಳು, ಸನ್ನಿಧಾನಗಳು, ಭಗವದ್ಗೀತೆಯ ಘೋಷಣೆಗಳು, ಜಯ ಜಯ ಘೋಷಗಳೊಂದಿಗೆ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು


ಈ ಕಾರ್ಯಕ್ರಮದಲ್ಲಿ ತ್ರೈತ ಸಿದ್ಧಾಂತ ಪ್ರಬೋಧ ಸೇವಾ ಸಮಿತಿ ಜ್ಞಾನ ವೇದಿಕೆ ಮೇಳಗಾಣಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಭರತ,ಚಂದ್ರು, ಅಶೋಕ್, ಬಾಲಾಜಿ, ಹೇಮಂತ, ಮನೋಹರ್, ವಾಣಿಶ್ರೀ, ಭಾಸ್ಕರ್, ಜ್ಯೋತಿ ಇತರರು ಭಾಗವಹಿಸಿದ್ದರು.


ಜಿಲ್ಲೆಯ ಪ್ರಬೋಧ ಸೇವಾ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು,ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ೧೦೦ ಕ್ಕೂ ಹೆಚ್ಚು ಸದಸ್ಯರು ಆಗಮಿಸಿದ್ದರು…ಇದಲ್ಲದೆ ಗ್ರಾಮದ ಹಿರಿಯರು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಲ್ಲಕ್ಕಿಯನ್ನು ಹೊತ್ತು ತಂದರು.