
ನವಲಗುAದ,ಸೆ೧೫ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೂರು ವರ್ಷ ಪಿಎಸ್ಐ ಆಗಿ ಸೇವೆ ಸಲ್ಲಿಸಿದ ಜನಾರ್ಧನ ಭಟ್ರಳ್ಳಿ ಅವರು ಕರ್ತವ್ಯದಲ್ಲಿ ಚಾಣಾಕ್ಷ ಬುದ್ದಿವಂತ ವ್ಯಕ್ತಿಯಾಗಿದ್ದರು’ ಎಂದು ಸಿಪಿಐ ರವಿಕುಮಾರ ಕಪ್ಪತನವರ ತಿಳಿಸಿದರು.
ನವಲಗುಂದ ಪೊಲೀಸ್ ಠಾಣೆಯಿಂದ ಅಣ್ಣಿಗೇರಿ ಠಾಣೆಗೆ ವರ್ಗಾವಣೆಗೊಂಡ ಪಿಎಸ್ಐ ಜನಾರ್ಧನ ಭಟ್ರಳ್ಳಿ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನೂತನ ಪಿಎಸ್ಐ ಚಂದ್ರಶೇಖರ ಸಾಗನೂರ ಮಾತನಾಡಿ ಸಾರ್ವಜನಿಕರು ಭಯಬಿಟ್ಟು ಮುಕ್ತವಾಗಿ ಠಾಣೆಗೆ ಬಂದು ಸಮಸ್ಯೆ ಪರಿಹರಿಸಿಕೊಂಡು, ಧೈರ್ಯವಾಗಿ ತೆರಳಬೇಕು ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಬದಲಿಗೆ ನನ್ನ ಕೆಲಸ ಮಾತನಾಡಬೇಕು, ಹಾಗೆ ಕೆಲಸ ಮಾಡಲು ಇಚ್ಛಿಸುತ್ತೇನೆ.
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಪಿಎಸ್ಐ ಜನಾರ್ಧನ ಭಟ್ರಳ್ಳಿ ಮಾತನಾಡಿ ಠಾಣಾ ವ್ಯಾಪ್ತಿಯಲ್ಲಿನ ಕಳ್ಳತನ ಪತ್ತೆ ಹಚ್ಚುವಲ್ಲಿ ಇಲಾಖೆ ನೀಡಿದ ಸಹಕಾರ ಸ್ಮರಿಸುವೆ. ನವಲಗುಂದ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಾರ್ವಜನಿಕರು ನೀಡಿದ ಸಹಕಾರ ಕಾರಣ, ಮುಂದೆಯೂ ಸಹ ಚಂದ್ರಶೇಖರ ಅವರು ಉತ್ತಮ ರೀತಿ ಕೆಲಸ ಮಾಡಲು ನಮ್ಮೆಲ್ಲ ಸಿಬ್ಬಂದಿ ಹೆಚ್ಚಿನ ಸಹಕಾರ ನೀಡಿ ಎಂದರು.
ಎಎಸ್ಐ ಬಿ ಆರ್ ಭಜಂತ್ರಿ, ವಿಜಯ ಸಲಕಿ, ಸಂಜೀವ ಮರಾಠಿ, ಪಾರುಕ್ ನದಾಫ್, ಸಲೀಮ್ ಮತ್ತೆಖಾನ, ಜಗದೀಶ ಬೆಳಹಾರ, ಕಾಂತೇಶ ಹಳ್ಳಿಕೇರಿ, ಜಗದೀಶ ಬರೀಗಾಲ, ಕವಿತಾ ಮೊರಬದ, ಚನ್ನಮ್ಮ, ನೇತ್ರಾ ಕಾಡಾಪುರ, ರೂಪಾ ನಾವಿ, ಪ್ರತಿಭಾ ಮಾದರ ಸೇರಿ ಠಾಣಾ ಸಿಬ್ಬಂದಿಗಳೆಲ್ಲರೂ ಉಪಸ್ಥಿತರಿದ್ದರು.


























