
ಕಲಬುರಗಿ,ಜೂ,25: ಕಲಬುರಗಿ ಜಂಗಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿಂಟು ಸ್ವಾಮಿ (ಸತೀಶ್ ಸ್ವಾಮಿ) ಅವರ ನೇತೃತ್ವದಲ್ಲಿ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಸಮಾಜದ ವತಿಯಿಂದ ಮಳೆರಾಯನ ಆಗಮನಕ್ಕಾಗಿ ಶ್ರೀ ಶರಣಬಸವೇಶ್ವರ ಗದ್ದುಗೆಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಭದ್ರಯ್ಯ ಸಾಲಿಮಠ, ಗಂಗಾಧರಯ್ಯ ಅಗ್ಗಿಮಠ,ಸೋಮಯ್ಯ ಶಾಸ್ತ್ರಿ, ಶ್ರೀಶೈಲ್ ಶಾಸ್ತ್ರಿ, ಬಸಯ್ಯ ಹಿರೇಮಠ,ಕರಣಯ್ಯ ಶಾಸ್ತ್ರಿ, ಮಹೇಶ್ವರ್ ಶಾಸ್ತ್ರಿ, ವಿರು ಸ್ವಾಮಿ ನರೋಣ,ವಿ.ಆರ್ ಸ್ವಾಮಿ, ರುದ್ರಮುನಿ ಮಠಪತಿ, ಬಸವರಾಜ ಮಠಪತಿ, ನಾಗಯ್ಯ ಶಾಸ್ತ್ರೀ,ಗುರುಬಾಯಿ ವಸ್ತ್ರದ, ರುದ್ರಯ್ಯ ಹಿರೇಮಠ್,ಆನಂದ್ ಹಿರೇಮಠ್, ರೇವಯ್ಯ ಸರಡಗಿ, ಶಿವಕುಮಾರ್ ಹಿರೇಮಠ, ವಿಶ್ವರಾಧ್ಯ ಹಿರೇಮಠ, ಶರಣು ಕಣ್ಣಿ, ಜ್ಯೋತಿ ಹಿರೇಮಠ, ಕವಿತಾ ಶೇಟಗಾರಮಠ, ಶರಣಮ್ಮ ಹಿರೇಮಠ, ಕುಮಾರಸ್ವಾಮಿ, ಶರಣು ಪುರಾಣಿಕ್, ಮೃತ್ಯುಂಜಯ ಹಿರೇಮತ್, ಶಂಭು ಶಾಸ್ತ್ರೀ, ಸಂಗಯ್ಯ ಶಾಸ್ತ್ರೀ, ನಿಜಲಿಂಗಯ್ಯ ಅಗ್ಗಿ ಉಪಸ್ಥಿತರಿದ್ದರು.
























