Home ಜಿಲ್ಲೆ ಮಣ್ಣು ಪರೀಕ್ಷೆ ಕಡ್ಡಾಯ

ಮಣ್ಣು ಪರೀಕ್ಷೆ ಕಡ್ಡಾಯ


ಗದಗ, ಸೆ.೧೮: ಕೃಷಿ ಯಾಂತ್ರೀಕರಣ, ಸೂಕ್ಷ÷?ಮ ನೀರಾವರಿ ಹಾಗೂ ವಿವಿಧ ಯೋಜನೆಗಳ ಸಹಾಯಧನ ಪಡೆಯಲು ಆಸಕ್ತಿ ಉಳ್ಳ ರೈತರು ಈಗ ಜಮೀನಿನ ಮಣ್ಣು ಪರೀಕ್ಷೆ ವರದಿ ನೀಡುವುದು ಕಡ್ಡಾಯವಾಗಿದೆ. ಕೃಷಿ ಇಲಾಖೆಯ ಏ-ಏisಚಿಟಿ ಪೋರ್ಟಲ್ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಈ ವರ್ಷದಿಂದಲೇ ಮಣ್ಣಿನ ಪರೀಕ್ಷಾ ವರದಿ ಹೊಂದುವುದು ಕಡ್ಡಾಯವಾಗಿರುತ್ತದೆ. ಭೂಮಿಯ ಫಲವತ್ತತೆ ಹೆಚ್ಚಿಸುವುದು ಮತ್ತು ವೈಜ್ಞಾನಿಕ ಕೃಷಿಗೆ ಪ್ರೋತ್ಸಾಹ ನೀಡುವದು ಇದರ ಮುಖ್ಯ ಉದ್ದೇಶವಾಗಿದ್ದು. ಕೃಷಿ ಯಾಂತ್ರಿಕರಣ, ಸೂಕ್ಷ÷?ಮ ನೀರಾವರಿ ಘಟಕಗಳು ಹಾಗೂ ಕೃಷಿ ಇಲಾಖೆಯ ಇತರೆ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ರೈತರು, ತಮ್ಮ ಜಮೀನಿನ ಮಣ್ಣು ಪರೀಕ್ಷೆ ವರದಿ ಲಗತ್ತಿಸುವುದು ಕಡ್ಡಾಯವಾಗಿರುತ್ತದೆ.


ಮಣ್ಣು ಪರೀಕ್ಷಯ ಮಹತ್ವ: ಮಣ್ಣಿನ ಪೋಷಕಾಂಶಗಳ ಮಾಹಿತಿ: ಮುಖ್ಯ ಪೋಷಕಾಂಶಗಳು (ಸಾರಜನಕ, ರಂಜಕ, ಪೊಟ್ಯಾಸಿಯಮ್)
ಸಮತೋಲಿತ ರಸಗೊಬ್ಬರ ಬಳಕೆ: ರೈತರು ತಮ್ಮ ಜಮೀನಿಗೆ ಯಾವ ಗೊಬ್ಬರ ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದನ್ನು ನಿಖರವಾಗಿ ತಿಳಿಯಬಹುದು.
ಬೆಳೆ ಆಧಾರಿತ ಶಿಫಾರಸುಗಳು: ಮಣ್ಣಿನ ಗುಣಲಕ್ಷಣಗಳಿಗೆ ಅನುಗುಣವಾಗಿ ಯಾವ ಬೆಳೆಯನ್ನು ಬೆಳೆದರೆ ಹೆಚ್ಚು ಲಾಭ ಸಿಗುತ್ತದೆ ಮತ್ತು ಆ ಬೆಳೆಗೆ ಎಷ್ಟು ಪೋಷಕಾಂಶಗಳು ಬೇಕಾಗುತ್ತವೆ
ಕೃಷಿ ವೆಚ್ಚ ಕಡಿತ ಮತ್ತು ಇಳುವರಿ ವೃದ್ಧಿ: ಗೊಬ್ಬರದ ಅನಗತ್ಯ ಖರ್ಚು ಕಡಿಮೆಯಾಗುವುದರಿಂದ ಕೃಷಿ ವೆಚ್ಚ ತಗ್ಗುತ್ತದೆ. ಮಣ್ಣಿಗೆ ಸರಿಯಾದ ಪೋಷಣೆ ಸಿಗುವುದರಿಂದ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಹೆಚ್ಚುತ್ತದೆ.


ದೀರ್ಘಾವಧಿ ಮಣ್ಣಿನ ಫಲವತ್ತತೆ: ಮಣ್ಣಿನ ಆರೋಗ್ಯವನ್ನು ನಿಯಮಿತವಾಗಿ (ಪ್ರತಿ ೨ ಅಥವಾ ೩ ವರ್ಷಕ್ಕೊಮ್ಮೆ) ಪರೀಕ್ಷಿಸುವುದರಿಂದ ಭೂಮಿಯ ಫಲವತ್ತತೆಯನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.
ಈ ಮೇಲಿನ ಅಂಶಗಳ ಕುರಿತು ರೈತ ಸಂಪರ್ಕ ಕೇಂದ್ರಗಳ ಮೂಲಕ ಜಿಲ್ಲೆಯ ರೈತರುಗಳಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಮಣ್ನು ಮಾದರಿ ಪಡೆಯುವ ವಿಧಾನ, ಮಣ್ಣು ಪರೀಕ್ಷೆಯ ಹಂತಗಳು ಹಾಗೂ ರೈತರು ಗಮನಿಸಬೇಕಾದ ಪ್ರಮುಖ ವಿಷಯಗಳ ಮಾಹಿತಿಯನ್ನು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಿAದ ಪಡೆಯಬಹುದಾಗಿದೆ. ಪ್ರಸಕ್ತ ಸಾಲಿನಿಂದ ಕೃಷಿ ಇಲಾಖೆಯಿಂದ ಸಹಾಯಧನ ಪಡೆಯುವ ಎಲ್ಲ ಯೋಜನೆಗಳಿಗೂ ಮಣ್ಣು ಪರೀಕ್ಷೆ ವರದಿ ಲಗತ್ತಿಸುವುದರ ಜೊತೆಗೆ ಮಣ್ಣು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ರೈತರುಗಳು ಸೂಕ್ತ ಕ್ರಮ ವಹಿಸಬೇಕೆಂದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಚೇತನಾ ಪಾಟೀಲ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆದುದರಿಂದ, ಇಲಾಖೆಯ ವಿವಿಧ ಯೋಜನೆಗಳಿಗೆ ಸಹಾಯಧನ ಪಡೆಯಲು ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.