
ಚನ್ನಮ್ಮನ ಕಿತ್ತೂರು,ಆ೨೩: ಚಿನ್ನದ ಅಂಗಡಿ ಕಳ್ಳತನ ಪ್ರಕರಣ ಭೇದಿಸಿದ ಪೋಲಿಸರು ಮಧ್ಯಪ್ರದೇಶದ ಓರ್ವ ಹಾಗೂ ರಾಜಸ್ಥಾನ ಮೂಲದ ನಾಲ್ವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆAದು ಬೈಲಹೊಂಗಲ ಡಿವೈಎಸ್ಪಿ ವೀರಯ್ಯಾ ಹಿರೇಮಠ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಂಧಿತ ಆರೋಪಿಗಳಿಂದ ರೂ. ೧೭ ಲಕ್ಷ ಮೌಲ್ಯದ ೭ ಕೆ.ಜಿ. ಬೆಳ್ಳಿ ಆರಭಣ ಹಾಗೂ ಕೃತ್ಯಕ್ಕೆ ಬಳಿಸಿದ ರೂ. ೫ ಲಕ್ಷ ಮೌಲ್ಯದ ಐ೨೦ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಕಿತ್ತೂರು ಪೋಲಿಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಕಳೆದ ಅ. ೧೨ರ ರಾತ್ರಿ ಮಾನಜ್ಜ ಜ್ಯುವಲ್ಲರಿ ಅಂಗಡಿಯ ಶೆಟರ್ ಕೀಲಿ ಮುರಿದು ಆರೋಪಿಗಳು ಒಳ ನುಗ್ಗಿ ಬೆಳ್ಳಿ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದು, ಈ ಕುರಿತು ಅಂಗಡಿ ಮಾಲಿಕ ಸುಬ್ರಮಣ್ಯ .ಮಾ.ಪತ್ತಾರ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆಯಲ್ಲಿ ನಾರಸಿಂಗ ಅಲಿಯಾಸ್ ಪವನ, ಅರ್ಜುನಸಿಂಗ್, ದಿಲೀಪಸಿಂಗ್ ದೇವಿಸಿಂಗ್, ಲೋಕೇಶ ಚುಮನರಾಮ್ ಮೇಘವಾಲ ಮತ್ತು ನರೇಂದ್ರ ಪ್ರಭುಜ ಅಲಿಯಾಸ್ ಪ್ರಭುಲಾಲ ಗುರ್ಜರ ಈ ೫ ಜನ ಕಳ್ಳರÀನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಬೈಲಹೊಂಗಲ ಡಿವೈಎಸ್ಪಿ ಡಾ. ವೀರಯ್ಯಾ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ ಶ್ಲಾಘಿಸಿದ್ದಾರೆ.
ಪಿಎಸ್‌ಐ ಭರತ್ ಎಸ್, ಅಪರಾಧ ವಿಭಾಗ ಪಿಎಸ್‌ಐ ಗಂಗಾಧರ ಹಂಪನ್ನವರ, ಸಿಬ್ಬಂದಿ ಎಸ್.ಎ.ದಪ್ಪೆದಾರ, ನಾಗರಾಜ ಕಡಗಣ್ಣವರ, ದೊಡವಾಡ ಠಾಣೆ ವಿಠ್ಠಲ್ ನಾಯಕ, ಆರ್.ಎಸ್.ಶೀಲಿ, ಎಂ.ಎ.ಚಿಕ್ಕೇರಿ, ಎಸ್.ಎಂ. ಬೆಟಗೇರಿ, ಬೆಳಗಾವಿ ಟೆಕ್ನಕಲ್ ಸಚಿನ್ ಪಾಟೀಲ, ಎನ್.ಆರ್.ಗಳಗಿ, ಎಸ್.ಎಂ.ಮುರಗೋಡ ಇವರ ತಂಡ ಕಾರ್ಯಾಚರಣೆ ನಡೆಸಿತ್ತು.
































