Home ಜಿಲ್ಲೆ ಕಲಬುರಗಿ ತಂಬಾಕು ಮುಕ್ತ ಗ್ರಾಮಕ್ಕೆ ಕೈ ಜೋಡಿಸಿಲು ಸಿಇಒ ರಾಹುಲ್ ಸಂಕನೂರ್ ಕರೆ

ತಂಬಾಕು ಮುಕ್ತ ಗ್ರಾಮಕ್ಕೆ ಕೈ ಜೋಡಿಸಿಲು ಸಿಇಒ ರಾಹುಲ್ ಸಂಕನೂರ್ ಕರೆ

ಚಿತ್ತಾಪುರ,ಅ.15-ತಂಬಾಕು ಮುಕ್ತ ಗ್ರಾಮಕ್ಕೆ ಕೈ ಜೋಡಿಸಿಲು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ್ ಕರೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಕಲಬುರಗಿ. ಹಾಗೂ ತಾಲೂಕು ಆರೋಗ್ಯ ಕೇಂದ್ರ ಚಿತ್ತಾಪುರ ಮತ್ತು ತಾಲೂಕು ಪಂಚಾಯತ್ ಚಿತ್ತಾಪುರ ಇವರ ಸಹಯೋಗದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ನಡೆದ ಒಂದು ದಿನದ ತಂಬಾಕು ಮುಕ್ತ ಮಾರ್ಗಸೂಚಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತಂಬಾಕು ಮುಕ್ತ ಮಾರ್ಗಸೂಚಿಯನ್ನು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹನ ಅಧಿಕಾರಿ ಮತ್ತು ಪಿ ಡಿ ಓ ಗಳಿಗೆ. 130 ಹಳ್ಳಿಯನ್ನು ‘ತಂಬಾಕು ಮುಕ್ತ ಹಳ್ಳಿ’ ಎಂದು ಘೋಷಿಸಲು ನಿರ್ದಿಷ್ಟವಾದ ಮೌಲ್ಯಮಾಪನ ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳನ್ನು 150 ಅಂಕ ಪ್ರತಿ ಗ್ರಾಮ ಪಂಚಾಯತಿ 120 ಅಂಕ ಪಡೆದುಕೊಂಡ ಗ್ರಾಮಗಳಿಗೆ ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸ ಬೇಕು ಎಂದು ಅನುಸರಿಸಲಾಗುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ವ್ಯವಸ್ಥಿತವಾಗಿದ್ದು, ಹಳ್ಳಿಯ ಸ್ವಯಂ-ಮೌಲ್ಯಮಾಪನದಿಂದ ಹಿಡಿದು ತಾಲೂಕು/ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನೆಯವರೆಗೆ ವಿವಿಧ ಹಂತಗಳನ್ನು ಒಳಗೊಂಡಿದೆ. ಎಂದು ವಿಭಾಗೀಯ ಸಂಯೋಜಕರಾದ ಮಹಾಂತೇಶ್ ಬಿ ಉಳ್ಳಾಗಡ್ಡಿ ಅವರು ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿಕೊಟ್ಟುರು.
ಲಕ್ಷ್ಮಣ ಶೃಂಗೇರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ತಂಬಾಕು ಮುಕ್ತ ಹಳ್ಳಿಯ ಮೌಲ್ಯಮಾಪನ ಪ್ರಕ್ರಿಯೆಯ ಮುಖ್ಯ ಹಂತಗಳು ಮತ್ತು ಮಾನದಂಡಗಳು ಈ ಕೆಳಗಿನಂತಿವೆ: ಪ್ರಾಥಮಿಕ ಸಿದ್ಧತೆ ಮತ್ತು ನಿರ್ಣಯ. ಗ್ರಾಮ ಪಂಚಾಯತ್ ನಿರ್ಣಯ: ತಂಬಾಕು ನಿಯಂತ್ರಣ ಕಾಯ್ದೆ (ಅಔಖಿPಂ 2003 ಮತ್ತು Pಇಅಂ) ಕಾಯ್ದೆಗಳ ಅನ್ವಯ, ಗ್ರಾಮ ಪಂಚಾಯತ್ ಮೊದಲು ತನ್ನ ವ್ಯಾಪ್ತಿಯ ಹಳ್ಳಿಯನ್ನು ತಂಬಾಕು ಮುಕ್ತಗೊಳಿಸಲು ವಿಶೇಷ ಸಭೆ ಕರೆದು ಅಧಿಕೃತ ನಿರ್ಣಯವನ್ನು ಅಂಗೀಕರಿಸಬೇಕು. ಸಮಿತಿ ರಚನೆ ಹಳ್ಳಿಯಲ್ಲಿ ತಂಬಾಕು ನಿಯಂತ್ರಣದ ಮೇಲ್ವಿಚಾರಣೆಗಾಗಿ ಗ್ರಾಮದ ಪ್ರಮುಖರು, ಗ್ರಾಮ ಪಂಚಾಯತ ಸದಸ್ಯರು, ಮತ್ತು ತಾಯಿಂದರ ಗುಂಪು, ಆಶಾ ಕಾರ್ಯಕರ್ತೆಯರು ಓಙಏ. ಸ್ವಸಹಾಯ ಗುಂಪು. ಆರೋಗ್ಯ ಸಿಬ್ಬಂದಿ ಮತ್ತು ಶಾಲಾ ಶಿಕ್ಷಕರನ್ನು ಒಳಗೊಂಡ ಒಂದು ಜಾಗೃತಿ ಸಮಿತಿಯನ್ನು ರಚಿಸಲಾಗುತ್ತದೆ.
ಜಾಗೃತಿ ಮೂಡಿಸುವಿಕೆ ಮತ್ತು ಅನುಷ್ಠಾನ ಮಾಹಿತಿ ಫಲಕಗಳ ಪ್ರದರ್ಶನ : ಹಳ್ಳಿಯ ಪ್ರಮುಖ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಪ್ರವೇಶ ದ್ವಾರಗಳಲ್ಲಿ “ತಂಬಾಕು ಮುಕ್ತ ಪ್ರದೇಶ (ವಲಯ)” ಎಂಬ ಜಾಗೃತಿ ಫಲಕಗಳನ್ನು ಹಾಗೂ ನಿಯಮ ಉಲ್ಲಂಘಿಸಿದರೆ ವಿಧಿಸಲಾಗುವ ದಂಡದ ವಿವರಗಳನ್ನು ಪ್ರದರ್ಶಿಸಬೇಕು.
ಶಾಲಾ ಸುತ್ತಮುತ್ತ ನಿಷೇಧಿತ ವ್ಯಪ್ತಿ 100 ಮೀಟರ್ ಹಳ್ಳಿಯ ಶಾಲೆ ಅಥವಾ ಕಾಲೇಜುಗಳ 100 ಗಜಗಳ (ಮೂರು ನೂರು ಅಡಿ) ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು (ಹಳದಿ ಗೆರೆ ಅಭಿಯಾನ).
ಅಪ್ರಾಪ್ತರಿಗೆ ಮಾರಾಟ ನಿಷೇಧ: 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರಾಟ ಮಾಡುವುದನ್ನು ಮತ್ತು ಅವರಿಂದ ಮಾರಾಟ ಮಾಡಿಸುವುದನ್ನು ಕಡ್ಡಾಯವಾಗಿ ತಡೆಯಬೇಕು.
ಅಂಕಪಟ್ಟಿ ಆಧಾರಿತ ಸ್ವಯಂ-ಮೌಲ್ಯಮಾಪನ ಗ್ರಾಮ ಪಂಚಾಯತಿಯು ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ನೀಡಲಾದ ನಿರ್ದಿಷ್ಟ ಅಂಕಪಟ್ಟಿಯನ್ನು (150 ಅಂಕ ) ಬಳಸಿ ಹಳ್ಳಿಯ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡುತ್ತದೆ. ಈ ಅಂಕಪಟ್ಟಿಯಲ್ಲಿ ಒಟ್ಟು 120 ಅಂಕಗಳಿಸಿದರೆ ಆ ಗ್ರಾಮ ಪಂಚಾಯತಿಯನ್ನು ಆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕ ಕಾರ್ಯ ನಿರ್ವಾಹನ ಅಧಿಕಾರಿಗಳು. ಪರಿಶೀಲನೆ ಮಾಡಿ ವರದಿ ಸಲ್ಲಿಸಿದ ನಂತರ ತಂಬಾಕು ಮುಕ್ತ ವಲಯ ಎಂದು ಒಂದು ವರ್ಷದ ಅವಧಿವರೆಗೆ ಘೋಷಿಸಲಗುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮುಕ್ತ ವಾತಾವರಣ, ಜಾಗೃತಿ ಫಲಕಗಳ ಅಳವಡಿಕೆ, ತಂಬಾಕು ಮಾರಾಟದ ಮೇಲಿನ ನಿಯಂತ್ರಣ ಮತ್ತು ಗ್ರಾಮಸ್ಥರಲ್ಲಿ ಮೂಡಿಸಲಾದ ಜಾಗೃತಿ ಕಾರ್ಯಕ್ರಮಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.
ಹಳ್ಳಿಯು ತಂಬಾಕು ಮುಕ್ತ ಪ್ರಮಾಣಪತ್ರಕ್ಕೆ ಅರ್ಹತೆ ಪಡೆಯಲು ಈ ಮೌಲ್ಯಮಾಪನದಲ್ಲಿ ಕನಿಷ್ಠ ಶೇ. 80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ಬಾಹ್ಯ ಪರಿಶೀಲನೆ ಮತ್ತು ಉನ್ನತ ಅಧಿಕಾರಿಗಳ ಭೇಟಿ.
ಗ್ರಾಮ ಪಂಚಾಯತ್ ಸ್ವಯಂ-ಮೌಲ್ಯಮಾಪನ ವರದಿಯನ್ನು ಸಲ್ಲಿಸಿದ ನಂತರ, ತಾಲೂಕು ಅಥವಾ ಜಿಲ್ಲಾ ಮಟ್ಟದ ಕೋಶದ (ಆಖಿಅಅ) ಪರಿಶೀಲನಾ ತಂಡವು ಹಳ್ಳಿಗೆ ಖುದ್ದಾಗಿ ಭೇಟಿ ನೀಡುತ್ತದೆ.
ಈ ತಂಡವು ಹಳ್ಳಿಯ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸುತ್ತದೆ, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ತುಂಡುಗಳು ಅಥವಾ ಗುಟ್ಕಾ ಪ್ಯಾಕೆಟ್‍ಗಳ ಕಸ ಇಲ್ಲದಿರುವುದನ್ನು ಮತ್ತು ಶಾಲಾ ವಲಯದಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗದಿರುವುದನ್ನು ಖಚಿತಪಡಿಸಿಕೊಳ್ಳುತ್ತದೆ.
ಪ್ರಮಾಣಪತ್ರ ವಿತರಣೆ ಮತ್ತು ನವೀಕರಣ
ಪ್ರಮಾಣಪತ್ರ ಸಲ್ಲಿಕೆ: ಪರಿಶೀಲನಾ ತಂಡದ ವರದಿ ಸಕಾರಾತ್ಮಕವಾಗಿದ್ದರೆ, ತಾಲೂಕು ಪಂಚಾಯತ್‍ನ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳ (ಃಆಔ) ಅಥವಾ ಜಿಲ್ಲಾ ಆರೋಗ್ಯ ಅಧಿಕಾರಿಗಳ ಅನುಮೋದನೆಯೊಂದಿಗೆ ಆ ಹಳ್ಳಿಗೆ ‘ತಂಬಾಕು ಮುಕ್ತ ಹಳ್ಳಿ’ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ನವೀಕರಣ: ಈ ಪ್ರಮಾಣಪತ್ರದ ಮಾನ್ಯತೆಯು ಒಂದು ವರ್ಷದವರೆಗೆ ಮಾತ್ರ ಇರುತ್ತದೆ. ಹಳ್ಳಿಯು ನಿರಂತರವಾಗಿ ತಂಬಾಕು ಮುಕ್ತ ವಾತಾವರಣವನ್ನು ಕಾಯ್ದುಕೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ವರ್ಷವೂ ಇದೇ ರೀತಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಮರು-ಪರಿಶೀಲನೆ ನಡೆಸಲಾಗುತ್ತದೆ.
ಗ್ರಾಮಸ್ಥರ ಸಕ್ರಿಯ ಭಾಗವಹಿಸುವಿಕೆ, ಗ್ರಾಮ ಪಂಚಾಯತಿಯ ದೃಢ ಸಂಕಲ್ಪ ಮತ್ತು ಆರೋಗ್ಯ ಇಲಾಖೆಯ ನಿರಂತರ ಮೇಲ್ವಿಚಾರಣೆಯು ಈ ಇಡೀ ಮೌಲ್ಯಮಾಪನ ಪ್ರಕ್ರಿಯೆಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಎಂದು ತಿಳಿಸಿದ್ದರು.
ವೇದಿಕೆ ಮೇಲೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹನ ಅಧಿಕಾರಿ ಎಂಡಿ ಆಕ್ರಂ ಪಾಷ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಈ ತಂಬಾಕು ಮುಕ್ತ ಗ್ರಾಮ ಪಂಚಾಯತನಲ್ಲಿ ಬರುವಂತಹ ಗ್ರಾಮಗಳು ತಂಬಾಕು ಮುಕ್ತ ಪ್ರದೇಶವನ್ನು ಗುರುತಿಸಿರುವಂತದನ್ನು ಅಂತಾಹ ಗ್ರಾಮದಲ್ಲಿ ತಂಬಾಕು ಮುಕ್ತ ಗ್ರಾಮ ಎಂದು ನಾಮಫಲಕ ಹಾಕಿಸಲು ಸೂಚಿಸಿದರು.
ಪ್ರಮುಕಾರದ ಚಿತ್ತಾಪುರ ಸಹಾಯಕ ನಿರ್ದೇಶಕರು ಪಂಡಿತ್ ಶಿಂಧೆ. ಜಿಲ್ಲಾ ಸಲಹಾಕಾರ ಶ್ರೀಮತಿ ಸುಜಾತಾ ಪಾಟೀಲ. ಸೋಶಿಯಲ್ ವರ್ಕರ್ ಕು. ಆರತಿ ಧನಶ್ರೀ. ಜಿಲ್ಲಾ ಜಿಮ್ಸ್ ಆಸ್ಪತ್ರೆಯ ತಂಬಾಕು ವ್ಯಸನ ಮುಕ್ತ ಕೇಂದ್ರದ ಸೈಕಾಲಜಿಸ್ಟ್ ಸಮಾಲೋಚಕ ಮಂಜುನಾಥ ಕಂಬಾಳಿಮಠ. ತಾಲೂಕ ಕ್ಷೆತ್ರ ಅರೋಗ್ಯ ಶಿಕ್ಷಣ ಅಧಿಕಾರಿಗಳು ಶ್ರೀಮತಿ ಸುನಂದಾ. ಗಣಕಯಂತ್ರ ಸಹಾಯಕ ರವಿಕುಮಾರ್ ಪೂಜಾರಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು. ಇನ್ನಿತರ ಅಧಿಕಾರಗಳು. ಹಾಗೂ ಇತರರು ಭಾವಹಿಸಿದ್ದರು.