
ಕಲಬುರಗಿ,ಅ.15-ಮನೆ ಬೀಗ ಮುರಿದು 3.39 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಕೋಟನೂರ (ಡಿ)ಯ ಜಿಡಿಎ ಲೇಔಟ್ನಲ್ಲಿ ನಡೆದಿದೆ.
ಸುಜಾತಾ ರವಿಕುಮಾರ ಹೂಗಾರ ಎಂಬುವವರ ಮನೆ ಬೀಗ ಮುರಿದು ಕಳ್ಳರು 3 ಲಕ್ಷ ರೂ.ಮೌಲ್ಯದ 20 ಗ್ರಾಂ.ಬಂಗಾರದ ಬಳೆಗಳು, 24 ಸಾವಿರ ರೂ.ಮೌಲ್ಯದ 100 ಗ್ರಾಂ.ಬೆಳ್ಳಿಯ ಚೈನ್ಗಳು ಮತ್ತು 15 ಸಾವಿರ ರೂ.ನಗದು ಕಳವು ಮಾಡಿದ್ದಾರೆ.
ಸುಜಾತಾ ಅವರು ಮನೆಗೆ ಬೀಗ ಹಾಕಿಕೊಂಡು ಮಕ್ಕಳೊಂದಿಗೆ ತವರು ಮನೆಯಾದ ವಿಜಯಪುರಕ್ಕೆ ಹೋಗಿದ್ದಾಗ ಮನೆ ಕಳವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.























