Home ಜಿಲ್ಲೆ ಕಲಬುರಗಿ ಸಂಶೋಧನೆ ಸಮಾಜಕ್ಕೆ ಪ್ರಯೋಜನಕಾರಿಯಾಗಬೇಕು : ಪ್ರೊ. ಬಟ್ಟು ಸತ್ಯನಾರಾಯಣ

ಸಂಶೋಧನೆ ಸಮಾಜಕ್ಕೆ ಪ್ರಯೋಜನಕಾರಿಯಾಗಬೇಕು : ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ,ಅ.18: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎಎನ್‍ಆರ್‍ಎಫ್) ಪೇರ್ ಕಾರ್ಯಕ್ರಮದಡಿ ಕೈಗೊಳ್ಳಲಾಗುತ್ತಿರುವ ಸಂಶೋಧನಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ವಿಶ್ವವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿತು.
ಹೈದರಾಬಾದ್ ವಿಶ್ವವಿದ್ಯಾಲಯದ (ಎಚ್‍ಸಿಯು) ಎಎನ್‍ಆರ್‍ಎಫ್ ಪೇರ್ ಕೇಂದ್ರದ ತಜ್ಞರ ಸಮಿತಿಯು ಸಿಯುಕೆ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ 16 ಸಂಶೋಧನಾ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಸಂಶೋಧನಾ ಯೋಜನೆಗಳು ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವುದರ ಜೊತೆಗೆ ಸ್ವದೇಶಿ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ನವೀನ ಪರಿಹಾರಗಳ ರೂಪಿಸುವಿಕೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು. ಸಮಾಜಕ್ಕೆ ಪ್ರಯೋಜನಕಾರಿಯಾಗುವ ಹಾಗೂ ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾಗುವ ಸಂಶೋಧನಾ ಉಪಕ್ರಮಗಳಿಗೆ ಭಾರತ ಸರ್ಕಾರ ಪೆÇ್ರೀತ್ಸಾಹ ಮತ್ತು ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ತಂಡದ ಕಾರ್ಯನಿರ್ವಹಣೆ, ಸಕ್ರಿಯ ಭಾಗವಹಿಸುವಿಕೆ, ನಾವೀನ್ಯತೆ ಮತ್ತು ಪಾರದರ್ಶಕತೆಯ ಮಹತ್ವವನ್ನು ಒತ್ತಿಹೇಳಿದ ಅವರು, ಸಂಶೋಧಕರು ತಮ್ಮ ಸಂಶೋಧನಾ ಫಲಿತಾಂಶಗಳನ್ನು ಪ್ರಾಯೋಗಿಕ ಅನ್ವಯಿಕೆಗಳಾಗಿ ಪರಿವರ್ತಿಸುವುದರ ಜೊತೆಗೆ ಅವುಗಳನ್ನು ಉತ್ಪಾದನಾ ವಲಯಕ್ಕೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯಗಳು ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಬೇಕೆಂಬ ನಿರೀಕ್ಷೆ ಸರ್ಕಾರ ಮತ್ತು ಸಮಾಜಕ್ಕಿದೆ ಎಂದು ಅವರು ಹೇಳಿದರು. ಸಂಶೋಧನೆಯ ಫಲಿತಾಂಶಗಳು ಅರ್ಥಪೂರ್ಣ ಸಾಮಾಜಿಕ ಪರಿಣಾಮವನ್ನು ಉಂಟುಮಾಡುವ ನಿಟ್ಟಿನಲ್ಲಿ ಸಂಶೋಧಕರು ತಮ್ಮ ಆವಿಷ್ಕಾರಗಳನ್ನು ನವೀನ ಉತ್ಪನ್ನಗಳಾಗಿ ರೂಪಿಸಬೇಕು, ಸ್ಟಾರ್ಟ್‍ಅಪ್‍ಗಳನ್ನು ಉತ್ತೇಜಿಸಬೇಕು ಹಾಗೂ ಉದ್ಯಮಶೀಲತೆಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಯೋಜನಾ ನಿರ್ದೇಶಕರು ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪೆÇ್ರ. ಬ್ರಹ್ಮಾನಂದಂ ಮಾನವತಿ ಮತ್ತು ಪೆÇ್ರ. ಸಾಮ್ರಾಟ್ ಎಲ್. ಸಬತ್ ಅವರು ನಡೆಯುತ್ತಿರುವ ಸಂಶೋಧನಾ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ಅವುಗಳ ಮುಂದಿನ ಪ್ರಗತಿಗೆ ಅಗತ್ಯವಾದ ಸಲಹೆಗಳನ್ನು ನೀಡಿದರು.
ಸಿಯುಕೆಯ ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ಯೋಜನೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿ, ತಮ್ಮ ತಮ್ಮ ಯೋಜನೆಗಳ ಪ್ರಗತಿಯ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಧಾನ ಸಂಶೋಧಕರಾದ ಪೆÇ್ರ. ಎನ್. ಸತ್ಯನಾರಾಯಣ ಹಾಗೂ ಸಹ-ಪ್ರಧಾನ ಸಂಶೋಧಕ ಪೆÇ್ರ. ಭರತ್ ಕುಮಾರ್, ಪ್ರಾಧ್ಯಾಪಕರುಗಳಾದ ಪೆÇ್ರ. ಪಲ್ಲೆಪೆÇೀಗು ರಾಘವಯ್ಯ, ಪೆÇ್ರ. ಹನುಮೇಗೌಡ, ಪೆÇ್ರ. ಜನಾರ್ದನ ರೆಡ್ಡಿ, ಡಾ. ಎಸ್. ಲಿಂಗಮೂರ್ತಿ, ಡಾ. ಆರ್. ಕೃಷ್ಣ ಚೈತನ್ಯ, ಡಾ. ರಸ್ಮಿತಾ ಸಾಮಾ, ಡಾ. ಪೆÇನ್ನಂ ಆಂಜನೇಯಲು, ಡಾ. ಹರೀಶ್ ಹೊಳ್ಳಾ, ಡಾ. ಕವಿತಾ ಹಿರೇಮಠ, ಡಾ. ರಾಕೇಶ್ ಕುಮಾರ್, ಡಾ. ಆಂಜನೇಯಲು, ಡಾ. ಕವಿಶಂಕರ್ ಹಾಗೂ ಡಾ. ಅಶೋಕ್ ಪಬ್ಬತ್ತಿ, ಡಾ.ಪ್ರಶಾಂತ ಕುಮಾರ್, ಡಾ.ಪ್ರಭಂಜನ್ ಗಾಯಿ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.