Home ಜಿಲ್ಲೆ ಸರ್ ಸಿದ್ದಪ್ಪ ಕಂಬಳಿ ಪುತ್ಥಳಿ ಸ್ಥಾಪಿಸಲು ಮನವಿ

ಸರ್ ಸಿದ್ದಪ್ಪ ಕಂಬಳಿ ಪುತ್ಥಳಿ ಸ್ಥಾಪಿಸಲು ಮನವಿ


ಹುಬ್ಬಳ್ಳಿ, ಸೆ.೨೩: ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಸರ್ ಸಿದ್ದಪ್ಪ ಕಂಬಳಿ ಅವರ ಪುತ್ಥಳಿಯನ್ನು ಪಾಲಿಕೆ ಕಚೇರಿ ಆವರಣದಲ್ಲಿರುವ ಉದ್ಯಾನವನಕ್ಕೆ ಸ್ಥಳಾಂತರಿಸಿ, ಭವ್ಯವಾಗಿ ಪುನರ್‌ನಿರ್ಮಿಸುವಂತೆ ಆಗ್ರಹಿಸಿ ಸರ್ ಸಿದ್ದಪ್ಪ ಕಂಬಳಿ ಮೆಮೋರಿಯಲ್ ಟ್ರಸ್ಟ್ ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.


ಸಿದ್ದಪ್ಪ ಕಂಬಳಿ ಅಭಿಮಾನಿ ಬಳಗದ ಮುಖಂಡರಾದ ರಾಜಶೇಖರ ಮೆಣಸಿನಕಾಯಿ ನೇತೃತ್ವದಲ್ಲಿ ತೆರಳಿದ ನಿಯೋಗ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.
ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಪುತ್ಥಳಿಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಪುತ್ಥಳಿಯ ಎತ್ತರ ಕಡಿಮೆ ಇರುವುದರಿಂದ ಕನಿಷ್ಠ ೫ರಿಂದ ೬ ಅಡಿ ಎತ್ತರದ ಹೊಸ ಪುತ್ಥಳಿ ನಿರ್ಮಿಸಿ, ಸೂಕ್ತ ಪೀಠ, ವಿದ್ಯುತ್ ಅಲಂಕಾರ ಹಾಗೂ ಸುತ್ತಲೂ ಸ್ಟೀಲ್ ರೇಲಿಂಗ್ ಅಳವಡಿಸಬೇಕು ಎಂದು ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.


ಪಕ್ಷಾತೀತವಾಗಿ ಎಲ್ಲ ಚುನಾಯಿತ ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಸರ್ ಸಿದ್ದಪ್ಪ ಕಂಬಳಿ ಅವರ ಭವ್ಯ ಹೊಸ ಪುತ್ಥಳಿ ನಿರ್ಮಾಣಕ್ಕೆ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಅಭಿಮಾನಿಗಳ ಬಳಗ ಮನವಿ ಮಾಡಿದೆ.


ನಿಯೋಗದಲ್ಲಿ ಸರ್ ಸಿದ್ದಪ್ಪ ಕಂಬಳಿ ಅಭಿಮಾನಿ ಬಳಗದ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಸದಾನಂದ ಡoಗನವರ, ಪ್ರಶಾಂತ ಹಾವಣಗಿ, ಲಿಂಗರಾಜ ಕಂಬಳಿ, ಮಹಾಂತೇಶ ಬತ್ಲಿ, ಕೊಟ್ರೇಶ ಎಸ್.ಕೆ., ಶಶಿ ಬೇವೂರ, ಹಿರೇಮಠ, ಶಂಕ್ರಣ್ಣ ಅಂಗಡಿ, ಗುರುಸಿದ್ದಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.