Home ಜಿಲ್ಲೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

ಬಸ್ ವ್ಯವಸ್ಥೆ ಕಲ್ಪಿಸಲು ಮನವಿ


ಲಕ್ಷೆ÷್ಮÃಶ್ವರ,ಸೆ.೪: ಲಕ್ಷೆ÷್ಮÃಶ್ವರ ಗದಗ್ ಮಧ್ಯ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಬಸ್ ತಡೆದು ಪ್ರತಿಭಟನೆ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು.


ಮನವಿ ಪತ್ರದಲ್ಲಿ ಲಕ್ಷೆ÷್ಮÃಶ್ವರದಿಂದ ಜಿಲ್ಲಾ ಕೇಂದ್ರಸ್ಥಳವಾದ ಗದಗಿಗೆ ಸಾರ್ವಜನಿಕರು ಪ್ರಯಾಣಿಸುತ್ತಿದ್ದು ಜೊತೆಗೆ ನೂರಾರು ವಿದ್ಯಾರ್ಥಿಗಳು ಹೋಗುತ್ತಿದ್ದಾರೆ ಆದರೆ ಬೆಳಿಗ್ಗೆ ೭:೦೦ ರಿಂದ ಸಮರ್ಪಕವಾಗಿ ಬಸ್ಸುಗಳು ಇಲ್ಲದ್ದರಿಂದ ನೂಕು ನುಗ್ಗಲಿನಲ್ಲಿಯೇ ವಿದ್ಯಾರ್ಥಿಗಳು ಪ್ರಯಾಣಿಸಬೇಕಾದ ಸ್ಥಿತಿ ಇದೆ.
ಆದ್ದರಿಂದ ಬೆಳಿಗ್ಗೆ ೭:೦೦ ೮:೦೦ ೮:೩೦ ಹೀಗೆ ಸತತವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಓಡಿಸಬೇಕು ಒಂದು ವಾರದೊಳಗಾಗಿ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದರು.


ಕರವೇ ಸ್ವಾಭಿಮಾನಿ ಬಳಗದ ಅಧ್ಯಕ್ಷರಾದ ಮಾಂತೇಶ್ ಮಣಕವಾಡ ನೇತೃತ್ವದಲ್ಲ ವಿದ್ಯಾರ್ಥಿಗಳು ಗದಗ್ ಡಿಟಿಓ ಸವಿತಾ ಆದಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮರ್ಥ ಎಸ್ ಎಚ್ ವೀರಯ್ಯ ಸಿ. ಹೆಚ್. ಸುನಿಲ್ ಅಣ್ಣಿಗೇರಿ ಚೇತನ್ ಅಂಗಡಿ ವೀರನಗೌಡ ಪಿ ಮನೋಜ್ ಎಂಪಿ ಪ್ರಕಾಶ್ ಎನ್‌ಎಲ್ ನರೇಂದ್ರ ಗಾಡಿ ಕಿರಣ ಜೆ ಮಹೇಶ್ ಬಸವರಾಜ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು ಪಿಎಸ್‌ಐ ಜಿಕೆ ರಾಠೋಡ್ ಸಿಬ್ಬಂದಿ ವರ್ಗದವರು ಇದ್ದರು.