Home ಜಿಲ್ಲೆ ಕಾರ್ಮಿಕರ ಕಾರ್ಡ ೩ ವರ್ಷಕ್ಕೊಮ್ಮೆ ನವೀಕರಿಸಿ

ಕಾರ್ಮಿಕರ ಕಾರ್ಡ ೩ ವರ್ಷಕ್ಕೊಮ್ಮೆ ನವೀಕರಿಸಿ

ನವಲಗುಂದ,ಸೆ.೧೮: ಕಾರ್ಮಿಕರ ಕಾರ್ಡುಗಳನ್ನು ೩ ವರ್ಷಕ್ಕೊಮ್ಮೆ ನವೀಕರಣಕ್ಕೆ ಆದೇಶಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಕಟ್ಟಡ ಕಾರ್ಮಿಕರು ಮಲ್ಲಪ್ಪ ಹೆಬಸೂರ ಅವರ ನೇತೃತ್ವದಲ್ಲಿ ತಹಶೀಲ್ದಾರ ಸುಧೀರ ಸಾಹುಕಾರ ಮುಖಾಂತರ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.

ವರ್ಷಕೊಮ್ಮೆ ನವೀಕರಣ ಮಾಡುವುದರಿಂದ ಕಾರ್ಮಿಕರಿಗೆ ಮತ್ತು ಹಿರಿಯ ಕಾರ್ಮಿಕರಿಗೆ ಬಹಳ ಸಮಸ್ಯೆ ಉಂಟು ಮಾಡಿದೆ. ಕಾರ್ಮಿಕರಿಗೆ ಈಗ ಕೊಡುತ್ತಿರುವ ಕಿಟ್ ಬದಲಾಗಿ ಕಾರ್ಮಿಕರಿಗೆ ಮಕ್ಕಳಿಗೆ ವಿದ್ಯಾರ್ಥಿವೇತನದ ಅವಶ್ಯಕತೆ ಇರುತ್ತದೆ.

ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನವು ರದ್ದಾಗಿದ್ದು ೨೦೨೨-೨೩ ರಿಂದ ಇಲ್ಲಿಯವರೆಗೆ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿರುವುದಿಲ್ಲ. ಅಲ್ಲದೆ ಬಡ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಗೆ ತಂದು ಕಾರ್ಮಿಕರಿಗೆ ವಸತಿಯ ಸೌಲಭ್ಯ ಒದಗಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಬಸಲಿಂಗಯ್ಯ ಪೂಜಾರ, ಬಸಣ್ಣ ಹುಳಕ್ಕಣ್ಣವರ, ಮಂಜುನಾಥ ಸುಣಗಾರ, ಬಾಬಾಜಾನ ಹಳ್ಳಿಕೇರಿ