
ಬೆಂಗಳೂರು. ಮೇ-೨೭-ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂಸ್ಟೇಗಳು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸೂಚನೆ ನೀಡಿದೆ. ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆ, ಪ್ರವಾಸಿಗರ ಸುರಕ್ಷತೆ, ಗುಣಮಟ್ಟದ ಸೇವೆ ಹಾಗೂ ಕಾನೂನುಬದ್ಧ ನಿರ್ವಹಣೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಅಧಿನಿಯಮ-೨೦೧೫ರ ಅನ್ವಯ, ಅಧಿಕೃತ ನೋಂದಣಿ ಪತ್ರ ಪಡೆಯದೇ ಹೋಂಸ್ಟೇ ನಡೆಸುವುದು ಕಾನೂನುಬಾಹಿರವಾಗಿದ್ದು, ಈಗಾಗಲೇ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇ ಮಾಲೀಕರು ತಕ್ಷಣವೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ನೋಂದಣಿಗೆ ಅಗತ್ಯ ದಾಖಲೆಗಳು
ಹೋಂಸ್ಟೇ ಮಾಲೀಕರು ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಕಚೇರಿಗೆ ಬೇಟಿ ನೀಡಿ ದಾಖಲೆಗಳನ್ನು ಸಲ್ಲಿಸಿ ಲೈಸೆನ್ಸ್ ಪಡೆಯಬೇಕು ಎಂದು ಅದೇಶ ನೀಡಿದರೆ.
ಹೋಂ ಸ್ಟೇ ಲೈಸೆನ್ಸ್ ಪಡೆಯಲು ಏನು ಮಾಡಬೇಕು?
ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರ
ಇ-ಖಾತಾ / ಪಹಣಿ
ಪೊಲೀಸ್ ನಿರಾಕ್ಷೇಪಣಾ ಪತ್ರ
ತಹಶೀಲ್ದಾರರಿಂದ ವಾಸಸ್ಥಳ ದೃಢೀಕರಣ ಪತ್ರ
ಆಧಾರ್ ಕಾರ್ಡ್
ಮಾಲೀಕರ ಭಾವಚಿತ್ರ
ಹೋಂಸ್ಟೇ ಯೋಜನೆಯ ಛಾಯಾಚಿತ್ರಗಳನ್ನು ಸಲ್ಲಿಸಬೇಕು.
ನಂತರ ದಾಖಲೆಗಳ ಪರಿಶೀಲನೆಯ ನಂತರ ಮಾತ್ರ ಅಧಿಕೃತ ನೋಂದಣಿ ಪತ್ರ ನೀಡಲಾಗುತ್ತದೆ.
ಕಾನೂನು ಕ್ರಮದ ಎಚ್ಚರಿಕೆ:
ಅಧಿಕೃತ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುವ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಅಧಿನಿಯಮ ಉಲ್ಲಂಘನೆ ಕಂಡುಬಂದರೆ:
೧೦,೦೦೦ರವರೆಗೆ ದಂಡ ಎರಡು ತಿಂಗಳವರೆಗೆ ಸರಳ ಜೈಲು ಶಿಕ್ಷೆ
ಅಥವಾ ಎರಡೂ ಶಿಕ್ಷೆಗಳು ವಿಧಿಸುವ ಅವಕಾಶ ಇದೆ.
ಇದೇ ವೇಳೆ, ರೆಸಾರ್ಟ್‌ಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಪತ್ತೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ ಇಲ್ಲಿಗೆ ಬೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ತಿಳಿಸಿದರು..


























