
ಕಲಬುರಗಿ,ಮೇ.27-ನಗರದ ರಂಗಮಂದಿರದಲ್ಲಿ ಅವರಳ್ಳಿಯ ಸಂಗೀತ ರಸ ಋಷಿ ಪಂಡಿತ ಪುಟ್ಟರಾಜ ಗವಾಯಿ ಸಮಗ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಂಡಿತ ಪಂಚಾಕ್ಷರಿ ಗವಾಯಿಗಳವರ ಹಾಗೂ ಪಂ.ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜರುಗಿದ ಸಂಗೀತೋತ್ಸವ ಹಾಗೂ ಸಂಸ್ಕøತಿಕ ಕಾರ್ಯಕ್ರಮದಲ್ಲಿ ಕಲ್ಯಾಣ ನಾಡಿನ ಕಲಾವಿದ, ಯುವ ಸಾಹಿತಿ ಬಂಡಯ್ಯ ಶಾಸ್ತ್ರಿ ಅವರಿಗೆÉ ವರ ಕವಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರುಗಳು, ವಿ.ಕೆ.ಸಲಗರದ ಪೂಜ್ಯರು, ಭರತನೂರಿನ ಪೂಜ್ಯರು, ಕರಜಿಗಿ ಪೂಜ್ಯರು, ಕಾಂಗ್ರೆಸ್ ಮುಖಂಡÀ ನೀಲಕಂಠರಾವ ಮೂಲಗೆ, ಟ್ರಸ್ಟ್ ಅಧ್ಯಕ್ಷÀ ಸಿದ್ಧಾರೂಢ ಅವರಳ್ಳಿ, ಚೆಂಗಟೆ ಪರಿವಾದವರು ಹಾಗೂ ನಾಡಿನ ಅನೇಕ ಕವಿ, ಕಲಾವಿದರು, ಸಾಹಿತಿಗಳು, ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದರು.























