
ಕಲಬುರಗಿ,ಮೇ.27-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿರುವ ಜಿಲ್ಲಾ ಪ್ರಥಮ ಕವಿಸಮ್ಮೇಳನ ಅಧಕ್ಷರಾದ ನರಸಿಂಗರಾವ ಹೇಮನೂರ ದಂಪತಿಗಳಿಗೆ ವಿಶ್ವ ಕರ್ಮ ಸಮಾಜ ಮಾಡಿಯಾಳಕರ ಬಂಧುಗಳಿಂದ ರವಿವಾರ ವಿಶೇಷ ಸನ್ಮಾನ ಜರುಗಿತು.
ಮಾಡಿಯಾಳಕರ ಮನೆತನದ ಹಿರಿಯ ಮಲ್ಲಣ್ಣ ನಿ.ಪೆÇದ್ದಾರ ಹಾಗೂ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ದಶರಥ ಮ.ಪೆÇದ್ದಾರ,ರಾಜಶೇಯ ನಿ.ಪೆÇದ್ದಾರ ಅವರ ನೇತೃತ್ವದಲ್ಲಿ ಸನ್ಮಾನ ಸಮಾರಂಭ ನೆರವೇರಿಸಲಾಯಿತು.
ಮಾಡಿಯಾಳದ ಅಶೋಕ ಗು.ಪೆÇದ್ದಾರ, ಶ್ರೀಕಾಂತ ಪೆÇದ್ದಾರ, ವಿಶ್ವನಾಥ ಪೆÇದ್ದಾರ, ಕೃಷ್ಣ ಪೆÇದ್ದಾರ,ನವೀನ ಪೆÇದ್ದಾರ, ಅಳಿಯರಾದ ಶಶಿಕಲಾ ಪ್ರಭಾಕರ ಸೋನಾರ್, ಗಂಗಾಬಾಯಿ ದೇವೇಂದ್ರ ಪತ್ತಾರ,ಸುನೀತಾ ರವಿ ಪತ್ತಾರ,ಜಯಶ್ರೀ ರಾಜಶೇಖರ ನಿಂಬಾಳಕರ,ಅನಿತಾ ಪತ್ತಾರ ಸುರಪುರ. ಹೇಮನೂರ ಕುಟುಂಬದ ಜನಾರ್ದನರಾವ ಹೇಮನೂರ, ಶುಭಾಶ್ರೀ ಸುರೇಶ ಪತ್ತಾರ ಯಡ್ರಾಮಿ ಮುಂತಾದವರು ಉಪಸ್ಥಿತರಿದ್ದರು.























