Home ಮುಖಪುಟ ಸುದ್ದಿ ತ.ನಾಡಿಗೆ ಪ್ರತಿದಿನ ೬೦೦೦ ಕ್ಯುಸೆಕ್ಸ್ ನೀರು ಹರಿಸಲು ಶಿಫಾರಸು

ತ.ನಾಡಿಗೆ ಪ್ರತಿದಿನ ೬೦೦೦ ಕ್ಯುಸೆಕ್ಸ್ ನೀರು ಹರಿಸಲು ಶಿಫಾರಸು

ನವದೆಹಲಿ, ಸೆ. ೮- ತಮಿಳುನಾಡಿಗೆ ಪ್ರತಿ ದಿನ ೬ ಸಾವಿರ ಕ್ಯುಸೆಕ್ಸ್ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಶಿಫಾರಸು ಮಾಡಿದೆ.
ರಾಜ್ಯದಲ್ಲಿ ಮಳೆ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗುತ್ತಿರುವ ಬೆನ್ನಲ್ಲೇ ಸಿಡಬ್ಲ್ಯು ಆರ್‌ಸಿ ತಮಿಳುನಾಡಿಗೆ ನೀರು ಹರಿಸುವಂತೆ ಶಿಫಾರಸು ಮಾಡಿರುವುದು. ಕರ್ನಾಟಕಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.


ರಾಜ್ಯದ ೪ ಜಲಾಶಯಗಳಲ್ಲಿ ಒಳಹರಿವು ಗಣನೀಯವಾಗಿ ಕುಸಿದಿದೆ. ಆದರೂ ಸಿಡಬ್ಲ್ಯು ಆರ್‌ಸಿ ತಮಿಳುನಾಡಿಗೆ ೧೫ ದಿನಗಳ ಕಾಲ ನೀರು ಹರಿಸಬೇಕು. ದಿನಕ್ಕೆ ಅರ್ಧ ಟಿಎಂಸಿ ಯಡಿಯಂತೆ ಒಟ್ಟು ೭.೮ ಅಡಿ ಟಿಎಂಸಿ ನೀರು ಬೀಡಬೇಕು ಎಂದು ಸಿಡಬ್ಲ್ಯು ಆರ್‌ಸಿ ಸೂಚಿಸಿದೆ.


ಮಧ್ಯಾಹ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಲಿದ್ದು, ಸಿಡಬ್ಲ್ಯುಆರ್‌ಸಿ ಶಿಫಾರಸ್‌ಗೆ ಅನುಮೋದನೆ ನೀಡುವ ಸಾಧ್ಯತೆಯಿದೆ.