Home ಜಿಲ್ಲೆ ಸರ್ಕಾರಿ ನೌಕರರಿಗೆ ಗುಣಮಟ್ಟದ ಆರೋಗ್ಯ ಸೇವೆ: ಆಸ್ಪತ್ರೆಗಳು ಯೋಜನೆಯೊಂದಿಗೆ ಕೈಜೋಡಿಸಲು ಮನವಿ: ಜಿಲ್ಲಾಧಿಕಾರಿ

ಸರ್ಕಾರಿ ನೌಕರರಿಗೆ ಗುಣಮಟ್ಟದ ಆರೋಗ್ಯ ಸೇವೆ: ಆಸ್ಪತ್ರೆಗಳು ಯೋಜನೆಯೊಂದಿಗೆ ಕೈಜೋಡಿಸಲು ಮನವಿ: ಜಿಲ್ಲಾಧಿಕಾರಿ

ಧಾರವಾಡ,ಆ೨೮: ಜಿಲ್ಲೆಯಲ್ಲಿ ಈಗಾಗಲೇ ೨೪ ಆಸ್ಪತ್ರೆಗಳು ಎಬಿ-ಆರ್‌ಕೆ ಯೋಜನೆಯಡಿ ನೋಂದಣಿಯಾಗಿವೆ. ಈ ಪೈಕಿ ೨೦ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿಯೂ ನೋಂದಣಿ ಆಗಿವೆ. ಉಳಿದ ನಾಲ್ಕು ಆಸ್ಪತ್ರೆಗಳು ನೋಂದಣಿ ಆಗಬೇಕಿದ್ದು, ಅರ್ಹತೆ ಹೊಂದಿರುವ ಇತರೆ ಆಸ್ಪತ್ರೆಗಳು ಯೋಜನೆಯಡಿ ಸೇರ್ಪಡೆಯಾಗಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.


ಅವರು ಜಿಲ್ಲಾಧಿಕಾರಿ ನೂತನ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸುವರ್ಣ ಆರೋಗ್ಯ ಟ್ರಸ್ಟ್, ಧಾರವಾಡ ಜಿಲ್ಲಾ ಘಟಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದರು.


ಹಿಂದೆ ಯೋಜನೆಯಡಿ ನಿಗದಿಯಾಗಿದ್ದ ದರಗಳು ಹಾಗೂ ಪಾವತಿ ಪ್ರಕ್ರಿಯೆಗೆ ಸಂಬAಧಿಸಿದAತೆ ಕೆಲವು ಸಮಸ್ಯೆಗಳಿದ್ದ ಕಾರಣ ಆಸ್ಪತ್ರೆಗಳು ಯೋಜನೆಯಡಿ ನೋಂದಣಿ ಆಗಲು ಹಿಂದೇಟು ಹಾಕುತ್ತಿದ್ದವು. ಇದೀಗ ಯೋಜನೆಯಲ್ಲಿ ಉದ್ಯೋಗದಾತರ ಜೊತೆಗೆ ಉದ್ಯೋಗಿಗಳ ಕೊಡುಗೆಯೂ ಇರುವುದರಿಂದ, ಸರ್ಕಾರಿ ನೌಕರರು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ಅವರು ತಿಳಿಸಿದರು.


ಯೋಜನೆಯಡಿ ಪಾವತಿ ಪ್ರಕ್ರಿಯೆಯಲ್ಲಿ ವಿಳಂಬವಾಗದAತೆ ಕ್ರಮ ಕೈಗೊಳ್ಳಲಾಗಿದ್ದು, ಸಿಜಿಎಚ್‌ಎಸ್ ದರಗಳಿಗೆ ಅನುಗುಣವಾಗಿ ಪಾವತಿ ದರಗಳನ್ನು ನಿಗದಿಪಡಿಸಲಾಗಿದೆ. ಇದರಿಂದ ಆಸ್ಪತ್ರೆಗಳಿಗೆ ಅನುಕೂಲವಾಗಲಿದ್ದು, ಹೆಚ್ಚಿನ ಆಸ್ಪತ್ರೆಗಳು ಯೋಜನೆಯಡಿ ನೋಂದಣಿ ಆಗುವ ನಿರೀಕ್ಷೆಯಿದೆ. ಧಾರವಾಡ ಜಿಲ್ಲೆಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದಾರೆ. ಅಲ್ಲದೆ, ನೆರೆಯ ಜಿಲ್ಲೆಗಳಿಂದಲೂ ಹಲವು ಸರ್ಕಾರಿ ನೌಕರರು ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಯೋಜನೆಯಡಿ ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ಆಸ್ಪತ್ರೆಗಳು ಯೋಜನೆಯೊಂದಿಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.


ಹುಬ್ಬಳ್ಳಿ ಭಾರತೀಯ ವೈದ್ಯಕೀಯ ಸಂಘದ (Iಒಂ) ಡಾ. ಬಸವರಾಜ ಸರ್ಜನ ಅವರು ಮಾತನಾಡಿ, ಆರೋಗ್ಯ ಸಂಜೀವಿನಿ ಯೋಜನೆಯಡಿ ಪರಿಷ್ಕೃತ ದರಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ನರ್ಸಿಂಗ್ ಹೋಮ್‌ಗಳು ಹಾಗೂ ವೈದ್ಯಕೀಯ ಸಂಸ್ಥೆಗಳನ್ನು ನೋಂದಣಿಗೆ ಒಳಪಡಿಸುವಂತೆ ಹುಬ್ಬಳ್ಳಿ ಐಎಂಎ ಮನವಿ ಮಾಡಿದೆ ಎಂದು ಅವರು ಹೇಳಿದರು.


ಕಾರ್ಯಾಗಾರದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ನೋಡಲ್ ಆಫೀಸರ್ ಡಾ. ಶಶಿಧರ ಕಳಸನೂರಮಠ ಅವರು ಕಾರ್ಯಾಗಾರದ ಮುಖ್ಯ ಅಂಶಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ, ಅವರು ಮಾತನಾಡಿದರು.


ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಸೊಲಗಿ ನಿರೂಪಿಸಿದರು. ರಮೇಶ ಲಿಂಗದಾಳ ಅವರು ಕಾರ್ಯಕ್ರಮ ವಂದಿಸಿದರು.


ಈ ಕಾರ್ಯಾಗಾರದಲ್ಲಿ ಪ್ರೈವೇಟ್ ಮೆಡಿಕಲ್ ಆಫೀಸರ್ ಡಾ. ವಾಯ್. ಎಸ್ ಚಿತ್ತರಗಿ, ಧಾರವಾಡ ಭಾರತೀಯ ವೈದ್ಯಕೀಯ ಸಂಘದ ಆಫೀಸರ್ ಡಾ. ಜಗದೀಶ ನಿರಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾಧಿಕಾರಿ ಕಛೇರಿ ಸಹಾಯಕ ಪ್ರಕಾಶ ಹೊಳೆಪ್ಪಗೋಳ, ನೌಕರರ ಸಂಘದ ಪದಾಧಿಕಾರಿಗಳು ಪ್ರಕಾಶ ಹಳಪೇಟೆ, ದೇವಿದಾಸ ಶಾಂತಿಕರ, ರಾಜಶೇಖರ ಹೊನ್ನಪ್ಪನವರ, ರಾಜೇಶ ಕೋನರೆಡ್ಡಿ, ಗಿರೀಶ ಚೌಡಕಿ, ಜಗದೀಶ ವಿರಕ್ತಮಠ, ಫಿರೋಜ ಗುಡೇನಕಟ್ಟಿ, ಉಮೇಶ ಕುರುಬರ, ಪ್ರಶಾಂತ ನವಲಿ ಹಾಗೂ ಆರೋಗ್ಯ ಮಿತ್ರರು ಉಪಸ್ಥಿತರಿದ್ದರು.