
ಚನ್ನಮ್ಮನ ಕಿತ್ತೂರು,ಆ.೨೭: ಚಚಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕ್ರೇತ್ರದ ವಣ್ಣೂರ ಗ್ರಾಮದ ಜತ್-ಜಾಂಬೂಟಿ ರಸ್ತೆ ತಡೆ ನಡೆಸಿ ವಿವಿಧ ಗ್ರಾಮಗಳ ರೈತರು ಬೃಹತ್ ಪ್ರತಿಭಟಣೆ ನಡೆಸಿದರು.
ಮುಂದಾಳತ್ವ ವಹಿಸಿಕೊಂಡು ಮಾಜಿ ಶಾಸಕ ಹಾಗೂ ರೈತ ಮುಖಂಡ ಮಹಾಂತೇಶ ದೊಡ್ಡಗೌಡರ ಮಾತನಾಡಿ ಇದು ಮೇಕಲಮರಡಿ, ವಣ್ಣೂರು, ಚಚಡಿ, ಸುನಕುಂಪಿ, ಸೇರಿ ಇನ್ನೂ ಹಲವಾರು ಹಳ್ಳಿಗಳ ರೈತರ ಬಹುದಿನಗಳ ಬೇಡಿಕೆಯಾಗಿದ್ದರಿಂದ ಹಲವಾರು ವರ್ಷಗಳಿಂದ ಬೃಹತ್ ಹೋರಾಟ ನಡೆಸಲಾಗಿದ್ದು ಸರ್ಕಾರವಂತೂ ಕ್ಯಾರೇ ಎನ್ನುತ್ತಿಲ್ಲ. ಆದ್ದರಿಂದ ತಕ್ಷಣ ಇಲ್ಲಿನ ರೈತರಿಗೆ ಈ ಯೋಜನೆ ತಲುಪಿಸಿ ಅನುವು ಮಾಡಿಕೊಂಡಬೇಕೆAದು ಆಗ್ರಹಿಸಿದರು.
ಮಾಜಿ ತಾಪಂ ಸದಸ್ಯ ಹಾಗೂ ರೈತ ಮುಖಂಡ ಬಾಳಾಸಾಹೇಬ ದೇಸಾಯಿ ಮಾತನಾಡಿ ಚಚಡಿ ಏತ ನೀರಾವರಿ ಯೋಜನೆ ರೂಪಗೊಳ್ಳುವ ಸಮಯದಲ್ಲಿ ಈ ಭಾಗದ ರೈತರು ಸಾಕಷ್ಟು ಜಮೀನು ಕಳೆದುಕೊಂಡಿದ್ದಾರೆ. ಇಲ್ಲಿವರೆಗೆ ಪರಿಹಾರ ದೊರೆತಿಲ್ಲ. ಈ ಪರಿಹಾರ ತಕ್ಷಣ ಒದಗಿಸದಿದ್ದರೆ ಉಗ್ರ ಹೋರಾಟ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ಬಿಜೆಪಿ ಹಾಗೂ ರೈತ ಮುಖಂಡೆ ಲಕ್ಷಿö್ಮÃ ವಿಕ್ರಮ್ ಇನಾಮದಾರ, ಮಹಾಂತೇಶ ಹಿರೇಮಠ, ಮಹಾಂತೇಶ ಕೂಲಿ ಮಾತನಾಡಿ ಈ ಭಾಗದ ರೈತರು ಚಚಡಿ ಏತ ನೀರಾವರಿ ಯೋಜನೆಗಾಗಿ ಸಾಕಷ್ಟು ಬಾರಿ ಮನವಿಯೊಂದಿಗೆ ಹೋರಾಟ ಮಾಡಿದರು ಸರ್ಕಾರ ಸುಮ್ಮನೆ ಕುಳಿತಿದೆ ಈ ಕೂಡಲೇ ಎಚ್ಚೆತ್ತುಕೊಂಡು ಯೋಜನೆ ಅನುಷ್ಠಾನಗೊಳಿಸಿ ಇಲ್ಲಿನ ರೈತರು ಉಳಿಯುವಂತಾಗಬೇಕು. ಅದಕ್ಕಾಗಿ ಸರ್ಕಾರ ಇಂತಹ ಮಹತ್ವಾಕಾಂಕ್ಷಿ ಯೋಜನೆಗೆ ತಡ ಮಾಡದೇ ನೀರು ಹರಿಸಲು ಮುಂದೆ ಬರಬೇಕೆಂದರು.
ನೀರಾವರಿ ಎಇಇ ಎಚ್.ಎಸ್.ಕಾಕಂಡಕಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಮಾತನಾಡಿದರು.
ರೈತ ಮುಖಂಡರುಗಳಾದ ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಮಾಜಿ ತಾಪಂ ಸದಸ್ಯ ಶ್ರೀಶೈಲ ಕಮತಗಿ, ಹುಸೇನಸಾಬ ಕಿಲ್ಲೇದಾರ, ಬಸಪ್ಪ ಪಾಟೀಲ, ವಿರುಪಾಕ್ಷ ಹಿರೇಮಠ, ಮಲ್ಲೇಶ ಚಿಕ್ಕೋಡಿ, ಶಾಮಸುಂದರ ಶಿಲ್ಲೇದಾರ, ಡಾ. ಸಂತೋಷ ಗೋವಿ, ಸಿದ್ದು ಗೋಳನ್ನವರ, ಬಾಬು ಸೇಬಣ್ಣವರ, ಈಶ್ವರ ಭಾಗೋಜಿ, ಬಸಲಿಂಗಪ್ಪ ಬಶೆಟ್ಟಿ, ಭೀಮಪ್ಪ ಸೋಮನಟ್ಟಿ, ಬಸವರಾಜ ಅಂಗಡಿ, ನಿಂಪ್ಪ ಪೋತಲಿ, ಮಹಾಂತೇಶ ಮೋರೆ, ಪ್ರದೀಪ ದೊಡ್ಡಗಾಡರ, ಸುತ್ತಮುತ್ತಲಿನ ಗ್ರಾಮಗಳ ಹಾಗೂ ನೂರರು ರೈತರು ಪ್ರತಿಭಟನೆಯಲ್ಲಿದ್ದರು.






























