Home ಜಿಲ್ಲೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ

ಹುಮನಾಬಾದ್: ಮೇ.23:ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ, ಎನ್‍ಟಿಎ ರದ್ದುಪಡಿಸಲು ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸಮಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಎಸ್‍ಎಫ್‍ಐ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅಂಜುಂ ತಬಸ್ಸುಮ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ತಾಲೂಕ ಸಂಚಾಲಕರು ರಾಹುಲ್ ಉದ್ದಾ,ಶೇಶಿ ದಾಂಗೆ, ಗೌಸೋದಿನ್, ಅಮನ್ ಖಾನ್, ವಿದ್ಯಾಸಾಗರ್ ಸಾಧುನೂರ್,ಅವಿನಾಶ್ ಗಾಯಕವಾಡ, ವಿನೋದ ಮೆಕ್ಕೇರಿ, ತುಕಾರಾಮ ಮುಸ್ತಾಪುರೆ,ಮೋಹನ್, ಶ್ರೀನಿವಾಸ ಕಟ್ಟೀಮನಿ, ಶಿವಾನಂದ್ ಕಟ್ಟೀಮನಿ,ನೀಲಕಂಠ ಶೇಟ್ಟಿ, ಕಿಶೋರ್, ಶ್ರೀಕಾಂತ್ ಸೇರಿದಂತೆ ಅನೇಕರು ಇದ್ದರು.