
ಜೀವರ್ಗಿ: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಗರ್ಭಾ ಶಯದಲ್ಲಿರುವ ಮಗುವಿನ ಆರೋಗ್ಯ ಉತ್ತಮಪಡಿಸುವುದು ಹೆಚ್ಚು ಸುಲಭಎಂದು ವಕೀಲರ ಸಂಘದ ಉಪಾಧ್ಯಕ್ಷ ಬಾಷಾಪಟೇಲ ಮಾಲಿ ಪಾಟೀಲ ಯಾಳವಾರ ತಿಳಿಸಿದರು.
ಅಭಿವೃದ್ಧಿ ಪಟ್ಟಣದ ರವಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಆಯೋಜಿಸಿದ್ದ ಶಿಶು ಯೋಜನೆ, ಅಂಗನವಾಡಿ ಕೇಂದ್ರದ ಫಲಾನುಭವಿಗಳು ಹಾಗೂ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಪೌಷ್ಟಿಕ ಆಹಾರ ಶಿಬಿರ ಕಾಠ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕಾಗಿರುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ. ಇದರ ಚೀಲದಲ್ಲಿರುವ
ಪಾತ್ರ ವನ್ನು ನಿರ್ವಹಿಸುತ್ತದೆ. ಭ್ರೂಣದ ಹಂತದಿಂದ ಹಿಡಿದು ಹೆರಿಗೆ ಬಳಿಕ ನವಜಾತ ಶಿಶುವಿನ ಮಾನಸಿಕ ಸ್ವಾಸ್ತ್ರ ಗಮನದಲ್ಲಿಟ್ಟುಕೊಂಡು ತಾಯಂದಿರು ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡಬೇಕಾಗಿರುವುದು ಅಗತ್ಯವಿದೆ ಎಂದರು.
ಗರ್ಭಿಣಿಯರು ಮಾನಸಿಕ ಸಮತೋ ಲನ ಸ್ಥಿತಿ ಕಾಯ್ದುಕೊಳ್ಳು ವುದರಿಂದ ಹೊಟ್ಟೆಯಲ್ಲಿರುವ ಮಗುವಿನ ಮಾನಸಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಆ ಕಾರಣಕ್ಕಾಗಿ ಗರ್ಭಿಣಿಯರು ಸಮತೋ ಲಿತ ಆಹಾರ ಸೇವನೆಗೆ ಒತ್ತು ನೀಡಬೇಕು ಎಂದರು.
ವಕೀಲರ ಸಂಘದ ಕಾವ್ಯದರ್ಶಿ ರಾಜಶೇಖರ ಶಿಲ್ಪಿ, ತ್ರಿವೇಣಿ ಪಾಟೀಲ ಕುರಳಗೇರಾ, ನಾಗವೇಣಿ ಧನ್ನಾ, ಮಹೇಶ ರಾಠೋಡ, ರಾಜಾಪಟೇಲ ಯಾಳವಾರ, ಬಾಬು ಬಿ ಪಾಟೀಲ, ಹುಣಚಿರಾಯ ನಾಟಿಕಾರ ಸೇರಿದಂತೆ ಆಶಾ ಕಾರ್ಯಕರ್ತರು, ಅಂಗನವಾಡಿಪೌಷ್ಟಿಕ ಆಹಾರ ಶಿಬಿರ ಕಾಠ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಾಷಾ ಪಟೇಲ್ ಮಾಲಿಪಾಟೀಲ ಯಾಳವಾರ ಮಾತನಾಡಿದರು. ರಾಜಶೇಖರ ಶಿಲ್ಪಿ, ನಾಗವೇಣಿ ಧನ್ನಾ ಇನ್ನಿತರರಿದ್ದರು





























